ನೂರ್ ಸುಲ್ತಾನ್: ಕಜಕಿಸ್ತಾನದ ನೂರ್ ಸುಲ್ತಾನ್ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಸ್ಟಾರ್ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ಭಾರತಕ್ಕೆ ಕಂಚಿನ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶ್ವದ ನಂಬರ್ ಒನ್ ಕುಸ್ತಿಪಟುವಾದ ಭಜರಂಗ್ ಸೆಮಿಫೈನಲ್ನಲ್ಲಿ ವಿವಾದಿತ ತೀರ್ಪಿಗೆ ಬಲಿಯಾಗಿ ಚಿನ್ನ ಗೆಲ್ಲುವ ಅವಕಾಶ ತಪ್ಪಿಸಿಕೊಂಡರೂ ಕಂಚು ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಶುಕ್ರವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮಂಗೋಲಿಯಾದ ಟುಲ್ಗ್ ಒಶಿರ್ ಅವರನ್ನು 8-7ರಲ್ಲಿ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದೇ ವರ್ಷ ಕುಸ್ತಿಗೆ ಪದಾರ್ಪಣೆ ಮಾಡಿರುವ 22 ವರ್ಷದ ರವಿಕುಮಾರ್ 57 ಕೆಜಿ ವಿಭಾಗದಲ್ಲಿ 6-3 ರಲ್ಲಿ ಇರಾನ್ ರೇಜಾ ಅತ್ರಿನಘರ್ಚಿ ಅವರನ್ನು ಮಣಿಸುವ ಮೂಲಕ ಚಾಂಪಿಯನ್ಶಿಪ್ನಲ್ಲಿ ಮೂರನೇ ಕುಸ್ತಿ ತಂದುಕೊಟ್ಟರು.
ಭಜರಂಗ್, ರವಿಗೂ ಮೊದಲೇ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಕಂಚು ಗೆದ್ದಿದ್ದರು. ಅಲ್ಲದೇ ಈ ಮೂವರು 2020ರ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಭಾರತದ ಭರವಸೆಯ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಸಾಕ್ಷಿ ಮಲ್ಲಿಕ್ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.