ETV Bharat / sports

ಕೊನೆಯ 30 ಸೆಕೆಂಡ್​ನ ಅದೃಷ್ಟದಾಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಅಗ್ರಸ್ಥಾನದಲ್ಲಿ ಮೆರೆದ ಪೂನಿಯಾ - ವೀನಸ್ ಪೋಗಟ್​

ಭಾನುವಾರ ರಾತ್ರಿ ಮಂಗೋಲಿಯಾದ ಟಲ್ಗಾ ತುಮುರ್ ಒಚಿರ್‌ನಲ್ಲಿ ನಡೆದ ಫೈನಲ್ ಬೌಟ್‌ನಲ್ಲಿ ಭಜರಂಗ್​ 0-2ನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಕೊನೆಯ 30 ಸೆಕೆಂಡುಗಳಲ್ಲಿ ಅಂಕವನ್ನು ಸರಿದೂಗಿಸುವ ಮೂಲಕ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ಕಳೆದ ವರ್ಷವೂ ಭಜರಂಗ್ ಈ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಭಜರಂಗ್ ಪೂನಿಯಾ
ಭಜರಂಗ್ ಪೂನಿಯಾ
author img

By

Published : Mar 8, 2021, 7:59 PM IST

ರೋಮ್‌: ಭಾರತದ ಒಲಿಂಪಿಕ್ ಬಾಂಡ್​ ಕುಸ್ತಿಪಟು ಬಜರಂಗ್ ಪೂನಿಯಾ ರೋಮ್​ನಲ್ಲಿ ನಡೆಯುತ್ತಿರುವ ಮಟಿಯೊ ಪೆಲಿಕಾನ್ ರ‍್ಯಾಂಕಿಂಗ್‌ ಸೀರಿಸ್ ಕುಸ್ತಿ ಚಾಂಪಿಯನ್​ಶೀಪ್​ನಲ್ಲಿ ಹಿನ್ನಡೆಯ ಹೊರತಾಗಿಯೂ ಕೊನೆಯ 30 ಸೆಕೆಂಡ್​ಗಳಲ್ಲಿ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿ 2 ಅಂಕ ಪಡೆದು ಚಿನ್ನದ ಪದಕ ಗೆದ್ದರು. ಜೊತೆಗೆ 65 ಕೆ.ಜಿ ವಿಭಾಗದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದರು.

ಭಾನುವಾರ ರಾತ್ರಿ ಮಂಗೋಲಿಯಾದ ಟಲ್ಗಾ ತುಮುರ್ ಒಚಿರ್‌ನಲ್ಲಿ ನಡೆದ ಫೈನಲ್ ಬೌಟ್‌ನಲ್ಲಿ ಭಜರಂಗ್​ 0-2ನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಕೊನೆಯ 30 ಸೆಕೆಂಡುಗಳಲ್ಲಿ ಅಂಕವನ್ನು ಸರಿದೂಗಿಸುವ ಮೂಲಕ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ಕಳೆದ ವರ್ಷವೂ ಭಜರಂಗ್ ಈ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ಇಬ್ಬರು ಸ್ಪರ್ಧಿಗಳ ಅಂಕ 2-2 ಇದ್ದರೂ ಕೊನೆಯ ಸ್ಕೋರಿಂಗ್ ಪಾಯಿಂಟ್ ಭಾರತೀಯನಿಂದ ಬಂದಿದ್ದರಿಂದ, ಅವರನ್ನು ಮಾನದಂಡಗಳ ಮೇಲೆ ವಿಜೇತರೆಂದು ಘೋಷಿಸಲಾಯಿತು.

ಪಂದ್ಯದ ನಂತರ ಮಾತನಾಡಿದ ಪೂನಿಯಾ,"ಕೋವಿಡ್‌–19 ವಿರಾಮದ ನಂತರ ಇದೇ ಮೊದಲ ಬಾರಿಗೆ ರಿಂಗ್​ನಲ್ಲಿ ಕಣಕ್ಕಿಳಿದಿದ್ದೇನೆ. ಹಿಂದಿಗಿಂತ ಈಗ ನನ್ನ ಲೆಗ್ ಡಿಫೆನ್ಸ್‌ನಲ್ಲಿ ಸುಧಾರಣೆ ಕಂಡಿದೆ. ಆದರೂ ಇನ್ನೂ ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಆಕ್ರಮಣದ ಮೇಲೆಯೂ ಹೆಚ್ಚು ಗಮನ ನೀಡಬೇಕಾಗಿದೆ" ಎಂದು ಹೇಳಿದರು.

ಮಂಗೋಲಿಯನ್​ ಕುಸ್ತಿಪಟು ವಿರುದ್ಧ ಒತ್ತಡ ಅನುಭಿಸಿರುವ ಬಗ್ಗೆ ಕೇಳಿದ್ದಕ್ಕೆ, 65 ಕೆಜಿ ವಿಭಾಗದಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ಫೈನಲ್‌ನಲ್ಲಿ ನನ್ನ ಎದುರಾಳಿಯಾಗಿದ್ದ ಮಂಗೋಲಿಯನ್​ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅವರೂ ದುರ್ಬಲ ಎದುರಾಳಿಯಲ್ಲ. ಈ ವಿಭಾಗದ ಎಲ್ಲಾ ಸ್ಪರ್ಧಿಗಳು ಒಲಿಂಪಿಕ್​ನಲ್ಲಿ ಇದೇ ಮನೋಭಾವದಲ್ಲಿ ಆಡುವ ಗುರಿ ಹೊಂದಿದ್ದಾರೆ. ಹೀಗಾಗಿ ಪೈಪೋಟಿ ಕಠಿಣವಾಗಿತ್ತು. ಕೊನೆಗೂ ಗೆಲುವು ದೊರೆತಿದ್ದಕ್ಕೆ ಸಂತೋಷವಿದೆ" ಎಂದರು.

ಈ ಟೂರ್ನಿಯಲ್ಲಿ ಭಾರತ 7 ಪದಕಗಳನ್ನು ಪಡೆದುಕೊಂಡಿದೆ. ಭಾನುವಾರ ನಡೆದ ಮತ್ತೊಂದು ಪಂದ್ಯದಲ್ಲಿ 70 ಕೆ.ಜಿ ವಿಭಾಗದಲ್ಲಿ ವಿಶಾಲ್ ಕಾಳಿರಮಣ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ನಿನ್ನ ವೀನಸ್​ ಪೋಗಟ್​ ಚಿನ್ನದ ಪದಕ, ಸರಿತಾ ಮೋರ್ ಬೆಳ್ಳಿ ಗೆದ್ದಿದ್ದರು. ಗ್ರೀಕೋ ರೋಮನ್ ವಿಭಾಗದಲ್ಲಿ ನೀರಜ್​(63 ಕೆಜಿ), ಕುಲದೀಪ್(72ಕೆಜಿ),ನವೀನ್(130ಕೆಜಿ) ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ಇದನ್ನೂ ಓದಿ: ಮಹಿಳೆಯರ ಕ್ರಿಕೆಟ್‌ಗೆ​ ತೋರುದೀಪವಾದ ಹರ್ಮನ್‌ ಪ್ರೀತ್‌ ಕೌರ್‌ ಇನ್ನಿಂಗ್ಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.