ETV Bharat / sports

ಏಷ್ಯನ್ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್: 2ನೇ ಸುತ್ತು ಪ್ರವೇಶಿಸಿದ ಸಾತ್ವಿಕ್-ಚಿರಾಗ್​ ಜೋಡಿ - ಏಷ್ಯನ್ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್

ಇಶಾನ್ ಭಟ್ನಗರ್​ ಮತ್ತು ತನಿಶಾ ಕೂಡ ಮಿಶ್ರ ಡಬಲ್ಸ್​ನಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಈ ಜೋಡಿ ಹಾಂಕಾಂಗ್​ನ ಲಾ ಚೆವುಕ್​ ಹಿಮ್​ ಮತ್ತು ಯೆಂಗ್ ನಾ ಟಿಂಗ್ ವಿರುದ್ಧ 21-15,21-17ರಲ್ಲಿ ಜಯ ಸಾಧಿಸಿದರು.

Satwiksairaj Rankireddy-Chirag Shetty win first match

author img

By

Published : Apr 26, 2022, 8:18 PM IST

ಮನಿಲಾ(ಫಿಲಿಪೈನ್ಸ್): ಭಾರತದ ಅಗ್ರ ಡಬಲ್ಸ್​ ಜೋಡಿಯಾದ ಸಾತ್ವಿಕ್ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್​ ಶೆಟ್ಟಿ ಬ್ಯಾಡ್ಮಿಂಟನ್​ ಏಷ್ಯಾ ಚಾಂಪಿಯನ್​ಶಿಪ್ಸ್​ನಲ್ಲಿ ಮಂಗಳವಾರ ಥಾಯ್​ ಜೋಡಿಯನ್ನು ಮಣಿಸಿ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ವಿಶ್ವದ 7ನೇ ಶ್ರೇಯಾಂಕ ಮತ್ತು 3ನೇ ಸೀಡ್​ ಪಡೆದಿರುವ ಭಾರತೀಯ ಜೋಡಿ ತುಂಬಾ ಕಷ್ಟಪಡದೇ 21-13, 21-9ರ ನೇರ ಗೇಮ್​​ಗಳಲ್ಲಿ ಥಾಯ್​ ಜೋಡಿ ಅಪಿಲುಕ್ ಗುಟರ್‌ಹ್ಯಾಂಗ್ ಮತ್ತು ನ್ಯಾಚನೋನ್ ತುಲ್ಮೊಕ್ ರನ್ನು ಮಣಿಸಿದರು. ಸಾತ್ವಿಕ್ ಮತ್ತು ಚಿರಾಗ್​ ಎರಡನೇ ಸುತ್ತಿನಲ್ಲಿ ಜಪಾನ್​ನ ಅಕಿರೊ ಕೋಗಾ ಮತ್ತು ತೈಚಿ ಸಯಿಟೊ ವಿರುದ್ಧ ಸೆಣಸಾಡಲಿದ್ದಾರೆ.

ಇಶಾನ್ ಭಟ್ನಗರ್​ ಮತ್ತು ತನಿಶಾ ಕೂಡ ಮಿಶ್ರ ಡಬಲ್ಸ್​ನಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಈ ಜೋಡಿ ಹಾಂಕಾಂಗ್​ನ ಲಾ ಚೆವುಕ್​ ಹಿಮ್​ ಮತ್ತು ಯೆಂಗ್ ನಾ ಟಿಂಗ್ ವಿರುದ್ಧ 21-15,21-17ರಲ್ಲಿ ಜಯ ಸಾಧಿಸಿದರು.

ಆದರೆ ಕೃಷ್ಣ ಪ್ರಸಾದ್​ ಮತ್ತು ವಿಷ್ಣುವರ್ಧನ್ ಗೌಡ್​ ಪುರುಷರ ಡಬಲ್ಸ್​ನಲ್ಲಿ ಮೊದಲ ಸುತ್ತಿನಲ್ಲೇ ಕೊರಿಯಾದ ಕಾಂಗ್ ಮಿನ್ಹ್ಯುಕ್ ಮತ್ತು ಕಿಮ್ ವೊನ್ಹೋ 10-21 21-19 16-21 ಸೋತು ಹೊರಬಿದ್ದರು.

ಇದನ್ನೂ ಓದಿ:'ನಮ್ಮಲ್ಲಿ ಅಸೂಯೆ ಜಾಸ್ತಿ, ಕೋಚ್​ ಆದಾಗ ವೈಫಲ್ಯ ಅನುಭವಿಸಲೆಂದು ಸಾಕಷ್ಟು ಜನ ಬಯಸಿದ್ದರು'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.