ETV Bharat / sports

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದ ಪಿವಿ ಸಿಂಧು - ಪಿವಿ ಸಿಂಧುಗೆ ಕಂಚಿನ ಪದಕ

ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು 3 ಗೇಮ್​​ಗಳ ಪಂದ್ಯದಲ್ಲಿ 21-13​ 19-21, 16-21ರ ಅಂತರದಲ್ಲಿ ಸೋಲು ಕಂಡರು. ಮೊದಲ ಗೇಮ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಗೆದ್ದ ಸಿಂಧು 2ನೇ ಗೇಮ್​ನಲ್ಲಿ ರೋಚಕ ಸೋಲು ಕಂಡರು. ಆದರೆ ಮೂರನೇ ಗೇಮ್​ನಲ್ಲಿ ಜಪಾನ್ ಆಟಗಾರ್ತಿ ಮೇಲುಗೈ ಸಾಧಿಸಿ ಫೈನಲ್​ ಪ್ರವೇಶಿಸಿದರು.

PV Sindhu wins bronze medal
ಏಷ್ಯಾ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದ ಪಿವಿ ಸಿಂಧು
author img

By

Published : Apr 30, 2022, 6:09 PM IST

ಮನಿಲಾ(ಫಿಲಿಫೈನ್ಸ್​​​) : ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ ವಿ ಸಿಂಧು ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್​​ನಲ್ಲಿ ಸೆಮಿಫೈನಲ್​ನಲ್ಲಿ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು 3 ಗೇಮ್​​ಗಳ ಪಂದ್ಯದಲ್ಲಿ 21-13​ 19-21, 16-21ರ ಅಂತರದಲ್ಲಿ ಸೋಲು ಕಂಡರು. ಮೊದಲ ಗೇಮ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಗೆದ್ದ ಸಿಂಧು 2ನೇ ಗೇಮ್​ನಲ್ಲಿ ರೋಚಕ ಸೋಲು ಕಂಡರು. ಆದರೆ ಮೂರನೇ ಗೇಮ್​ನಲ್ಲಿ ಜಪಾನ್ ಆಟಗಾರ್ತಿ ಮೇಲುಗೈ ಸಾಧಿಸಿ ಫೈನಲ್​ ಪ್ರವೇಶಿಸಿದರು. ಈ ಟೂರ್ನಮೆಂಟ್​ನಲ್ಲಿ ಸಿಂಧು ಪಡೆದ 2ನೇ ಪದಕ ಇದಾಗಿದೆ. 2014 ರ ಆವೃತ್ತಿಯಲ್ಲಿ ಸಿಂಧು ಕಂಚಿನ ಪದಕ ಪಡೆದಿದ್ದರು.

ಸಿಂಧುಗೆ ಮುಳುವಾದ ಪೆನಾಲ್ಟಿ: ಸಿಂಧು 11-14ರಲ್ಲಿ ಹಿನ್ನಡೆ ಪಡೆದಿದ್ದ ಸಂದರ್ಭದಲ್ಲಿ ಅಂಪೈರ್​ ಲೇಟ್ ಸರ್ವ್​ ನೆಪವೊಡ್ಡಿ ಒಂದು ಅಂಕ ಕಡಿತಗೊಳಿಸಿ ಸರ್ವ್​​ಅನ್ನು ಯಮಗುಚಿಗೆ ನೀಡಿದರು. ರೆಫ್ರಿ ಜೊತೆಗಿನ ವಾಗ್ವಾದದ ಸಮಯವನ್ನು ಬಳಸಿಕೊಂಡ ಜಪಾನ್ ಆಟಗಾರ್ತಿ ಮತ್ತೆ ಸಿಂಧುವನ್ನು ಪಂದ್ಯದಲ್ಲಿ ಸೆಟ್​ ಆಗಲು ಬಿಡಲಿಲ್ಲ. ಪಿ ವಿ ಸಿಂಧು ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತೀಯರ ಸವಾಲು ಕೂಡ ಅಂತ್ಯವಾಯಿತು.

ಇದನ್ನೂ ಓದಿ:14 ಪಂದ್ಯಗಳ ಬಳಿಕ ಐಪಿಎಲ್​ನಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.