ದುಬೈ: ಡಬಲ್ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸೇರಿದಂತೆ ಭಾರತದ ಅಗ್ರಮಾನ್ಯ ಶಟ್ಲರ್‌ಗಳು ಏಪ್ರಿಲ್ 25 ರಿಂದ 30ರ ವರೆಗೆ ನಡೆಯಲಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾಗವಹಿಸಲಿದ್ದಾರೆ. ಪ್ರತಿಷ್ಠಿತ ಕಾಂಟಿನೆಂಟಲ್ ಸ್ಪರ್ಧೆಯ 40 ನೇ ಆವೃತ್ತಿಯು ಇಂದು (ಮಂಗಳವಾರ) ಅರ್ಹತಾ ಸುತ್ತಿನೊಂದಿಗೆ ಆರಂಭವಾಗಿದೆ. ನಾಳೆಯಿಂದ ಎಲ್ಲಾ ಆಟಗಾರರನ್ನು ಒಳಗೊಂಡ ಮುಖ್ಯ ಪಂದ್ಯಗಳು ಬುಧವಾರದಿಂದ ನಡೆಯಲಿದೆ.
ಈ ವರೆಗೆ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (ಎಸಿಬಿ)ನಲ್ಲಿ 17 ಪದಕ ಗೆದ್ದಿರುವ ಭಾರತಕ್ಕೆ ಈ ವರ್ಷ ಕಠಿಣ ಸವಾಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಸ್ಟಾರ್ ಶೆಟ್ಲರ್ಗಳು ಫಾರ್ಮ್ನಲ್ಲಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. 1965 ದಿನೇಶ್ ಖನ್ನಾ ಅವರು ಚಿನ್ನವನ್ನು ಗೆದ್ದಿದ್ದಾರೆ. ನಂತರ ಸಿಂಧು, ಪ್ರಣೋಯ್ ಮತ್ತು ಲಕ್ಷ್ಯ ಸೇನ್ ಭಾಗವಹಿಸಿದ್ದಾರೆ. ಗಾಯದ ಸುದೀರ್ಘ ಬ್ರೇಕ್ನ ನಂತರ ಸಿಂಧು ಪುನರಾಗಮನ ಮಾಡಿದ್ದಾರೆ. ಸಿಂಧು ಅವರು ಕಮ್ಬ್ಯಾಕ್ ನಂತರ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನ ಫೈನಲ್‌ಗೆ ತಲುಪಿದ್ದರು.
ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಇತರ ಪ್ರಮುಖ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು, ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಜೊತೆಗೆ, ಎಚ್‌ಎಸ್ ಪ್ರಣೋಯ್, ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಸೇರಿದ್ದಾರೆ. ಪುರುಷರ ಡಬಲ್ಸ್ ಸವಾಲನ್ನು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮುನ್ನಡೆಸಿದರೆ, ಮಹಿಳೆಯರ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ಸ್ಪರ್ಧಿಸಲಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಎಂಟನೇ ಶ್ರೇಯಾಂಕ ಪಡೆದಿದ್ದಾರೆ. ಅವರು ಈ ತಿಂಗಳ ಆರಂಭದಲ್ಲಿ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ 2023 ರ ಮಹಿಳಾ ಸಿಂಗಲ್ಸ್ ಫೈನಲ್ ತಲುಪಿದರು. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣೋಯ್ ಎಂಟನೇ ಶ್ರೇಯಾಂಕಿತರಾಗಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆರನೇ ಶ್ರೇಯಾಂಕ ಪಡೆದಿದ್ದಾರೆ.
ಸಿಂಗಲ್ಸ್ ಸ್ಪರ್ಧೆ: ಈ ವೇಳೆ ಪಟ್ಟಿಯ ಪ್ರಕಾರ ವಿಶ್ವದ ನಂ.11 ಪಿವಿ ಸಿಂಧು ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ವೆನ್ ಚಿ ಹ್ಸು ಅವರನ್ನು ಎದುರಿಸಲಿದ್ದಾರೆ. ಮೊದಲ ಸುತ್ತಿನಲ್ಲಿ 29ನೇ ಶ್ರೇಯಾಂಕದ ಸೈನಾ ನೆಹ್ವಾಲ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಕೂಡ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ವಿಶ್ವದ 9ನೇ ಶ್ರೇಯಾಂಕದ ಎಚ್‌ಎಸ್ ಪ್ರಣೋಯ್ ಮ್ಯಾನ್ಮಾರ್‌ನ ಫೋನ್ ಪೈ ನಾಯಿಂಗ್ ಅವರನ್ನು ಎದುರಿಸಲಿದ್ದಾರೆ. ವಿಶ್ವದ ನಂ.24 ರ ಆಟಗಾರ ಲಕ್ಷ್ಯ ಸೇನ್ ಅವರು ಸಿಂಗಾಪುರದ ಏಳನೇ ಶ್ರೇಯಾಂಕದ ಲೋಹ್ ಕೀನ್ ಯೂ ಅವರನ್ನು ಎದುರಿಸಲಿದ್ದಾರೆ. ವಿಶ್ವದ ನಂ.23ನೇ ಆಟಗಾರ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಬಹ್ರೇನ್‌ನ ಅದ್ನಾನ್ ಇಬ್ರಾಹಿಂ ಅವರನ್ನು ಎದುರಿಸಲಿದ್ದಾರೆ.
ಡಬಲ್ಸ್ ಸ್ಪರ್ಧೆ: ಪುರುಷರ ಡಬಲ್ಸ್‌ನಲ್ಲಿ ಸ್ವಿಸ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ತಾನ್ ಕಿಯಾನ್ ಮೆಂಗ್ ಮತ್ತು ತಾನ್ ವೀ ಕಿಯೊಂಗ್ ವಿರುದ್ಧ ತಮ್ಮ ಪ್ರಯಾಣ ಆರಂಭಿಸಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಲ್ಯಾನಿ ಮಾಯಾಸರಿ ಮತ್ತು ರಿಬಿಕಾ ಸುಗಿಯಾರ್ಟೊ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಐಪಿಎಲ್ ಅದ್ಭುತ ಪ್ರದರ್ಶನ ಮಧ್ಯಮ ಕ್ರಮಾಂಕಕ್ಕೆ ರಹಾನೆಗೆ ಸ್ಥಾನ: ಸ್ಕೈಗೆ ಕೊಕ್