ದುಬೈ (ಯುಎಇ): ಭಾರತದ ಏಸ್ ಷಟ್ಲರ್‌ಗಳಾದ ಪಿವಿ ಸಿಂಧು ಮತ್ತು ಪ್ರಣಯ್ ಎಚ್‌ಎಸ್ ಅವರು ಗುರುವಾರ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ 16 ಸುತ್ತಿನ ಪಂದ್ಯಗಳನ್ನು ಗೆದ್ದು ಕ್ವಾರ್ಟರ್‌ಫೈನಲ್ ಹಂತವನ್ನು ತಲುಪಿದ್ದಾರೆ. ಸಿಂಧು ಕೇವಲ ಎರಡು ಗೇಮ್‌ಗಳಲ್ಲಿ ಚೀನಾದ ಹಾನ್ ಯುಯೆ ಅವರನ್ನು 21-12, 21-15 ಅಂತರದಿಂದ ಸೋಲಿಸಿದರು. ಅವರು ತೈವಾನ್‌ನ ಹ್ಸು ವೆನ್-ಚಿ ಅವರನ್ನು 21-15, 22-20 ರಿಂದ ಸೋಲಿಸಿ 16 ರ ಸುತ್ತಿಗೆ ಪ್ರವೇಶಿಸಿದರು.
-
QUARTERFINALS ⏭️
— BAI Media (@BAI_Media) April 27, 2023 " class="align-text-top noRightClick twitterSection" data="
📸: @badmintonphoto#BAC2023#IndiaontheRise#Badminton pic.twitter.com/pRcJ7bcHrc
">QUARTERFINALS ⏭️
— BAI Media (@BAI_Media) April 27, 2023
📸: @badmintonphoto#BAC2023#IndiaontheRise#Badminton pic.twitter.com/pRcJ7bcHrcQUARTERFINALS ⏭️
— BAI Media (@BAI_Media) April 27, 2023
📸: @badmintonphoto#BAC2023#IndiaontheRise#Badminton pic.twitter.com/pRcJ7bcHrc
ಪ್ರಣಯ್ 21-16, 5-21, 21-18 ರಿಂದ ಇಂಡೋನೇಷ್ಯಾದ ಚಿಕೊ ಔರಾ ದ್ವಿ ವಾರ್ಡೋಯೊ ಅವರನ್ನು ಸೋಲಿಸಿದರು. ಪ್ರಣಯ್ ಎಚ್‌ಎಸ್ ಅವರು 32 ರ ಸುತ್ತಿನಲ್ಲಿ ಮ್ಯಾನ್ಮಾರ್‌ನ ಫೋನ್ ಪಿಯೆ ನೈಂಗ್ ಅವರನ್ನು 21-14, 21-9 ರಿಂದ ಸೋಲಿಸಿದರು. 'ಸತ್-ಚಿ' ಎಂದೂ ಕರೆಯಲ್ಪಡುವ ಸಾತ್ವಿಕ್ ಸಾಯಿ ರಾಜ್-ಚಿರಾಗ್ ತಮ್ಮ ಪುರುಷರ ಡಬಲ್ಸ್ ಪಂದ್ಯದಲ್ಲಿ ಕೊರಿಯಾದ ಜಿನ್ ಯೋಂಗ್ ಮತ್ತು ನಾ ಸುಂಗ್ ಸೆಯುಂಗ್ ಅವರನ್ನು ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು. ಅವರು ತಮ್ಮ 32ರ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ತಾನ್ ಕಿಯಾನ್ ಮೆಂಗ್ ಮತ್ತು ತಾನ್ ವೀ ಕಿಯೊಂಗ್ ಅವರನ್ನು 21-14, 21-17 ರಿಂದ ಸೋಲಿಸಿದರು.
ಭಾರತದ ಮಿಶ್ರ ಡಬಲ್ಸ್ ಜೋಡಿ ರೋಹನ್ ಕಪೂರ್ ಮತ್ತು ಎನ್ ಸಿಕ್ಕಿ ರೆಡ್ಡಿ ಅವರು ಗುರುವಾರ ನಡೆದ 16 ನೇ ಸುತ್ತಿನ ಪಂದ್ಯದಲ್ಲಿ ವಾಕ್ - ಓವರ್ ಪಡೆದ ನಂತರ 2023 ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಕ್ವಾರ್ಟರ್‌ಫೈನಲ್‌ಗೆ ತೆರಳಿದರು. ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ರೋಹನ್ ಕಪೂರ್ ಮತ್ತು ಎನ್ ಸಿಕ್ಕಿ ರೆಡ್ಡಿ ಅವರು ಬುಧವಾರ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ 32 ನೇ ಹಂತದ ಸುತ್ತಿನಲ್ಲಿ ಮಲೇಷ್ಯಾದ ಚಾನ್ ಪೆಂಗ್ ಸೂನ್ ಮತ್ತು ಚೀಹ್ ಯೀ ಸೀ ವಿರುದ್ಧ 21-12, 21-16 ಅಂತರದ ಗೆಲುವು ದಾಖಲಿಸುವ ಮೂಲಕ ಪ್ರೀ ಕ್ವಾರ್ಟರ್‌ಗೆ ಪ್ರವೇಶಿಸಿದರು. ಮತ್ತೊಂದೆಡೆ, ಟ್ರೀಸಾ ಮತ್ತು ಗಾಯತ್ರಿ ತಮ್ಮ 32 ರ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ಲ್ಯಾನ್ನಿ ಟ್ರಿಯಾ ಮಾಯಾಸರಿ ಮತ್ತು ರಿಬಿಕಾ ಸುಗಿಯಾರ್ಟೊ ಜೋಡಿಯನ್ನು 17-21, 21-17, 21-18 ರಿಂದ ಸೋಲಿಸಿದರು.
ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಿಡಂಬಿ ಶ್ರೀಕಾಂತ್ 16ರ ಹಂತದಲ್ಲೇ ಸ್ಪರ್ಧೆಯಿಂದ ಹೊರಬಿದ್ದರು. ಅವರು ಜಪಾನ್‌ನ ಕೊಡೈ ನರೋಕಾ ವಿರುದ್ಧ 14-21, 22-20, 9-21 ಸೆಟ್‌ಗಳಿಂದ ಸೋತರು. ಕಿಡಂಬಿ 21-13, 21-8 ರಿಂದ ಬಹ್ರೇನ್‌ನ ಅದ್ನಾನ್ ಎಬ್ರಾಹಮ್ ಅವರನ್ನು ಸೋಲಿಸುವ ಮೂಲಕ 16 ರ ಸುತ್ತಿಗೆ ಪ್ರವೇಶಿಸಿದ್ದರು.
ಮಿಶ್ರ ಡಬಲ್ಸ್ ಜೋಡಿ ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನಪ್ಪ ಅವರು ತಮ್ಮ 16 ನೇ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಚಾಂಗ್ ಕೊ-ಚಿ ಮತ್ತು ಲೀ ಚಿಹ್ ಚೆನ್ ವಿರುದ್ಧ ನೇರ ಎರಡು ಸೆಟ್ 15-21, 17-21 ನಿಂದ ಸೋತರು. ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ 2023 ಏಪ್ರಿಲ್ 25 ರಿಂದ ದುಬೈನಲ್ಲಿ ಪ್ರಾರಂಭವಾಯಿತು ಮತ್ತು ಏಪ್ರಿಲ್ 30 ರವರೆಗೆ ನಡೆಯಲಿದೆ.
ಇದನ್ನೂ ಓದಿ: ಪಿಟಿ ಉಷಾ ಅವರೇ ನಮಗೆ ಸ್ಫೂರ್ತಿ.. ಆದರೆ, ಅವರ ಹೇಳಿಕೆ ಸಂವೇದನಾರಹಿತ: ಕುಸ್ತಿಪಟುಗಳ ಅತೃಪ್ತಿ