ETV Bharat / sports

ATP Ranking: 23ನೇ ಗ್ರ್ಯಾಂಡ್​ ಸ್ಲಾಮ್ ಗೆದ್ದು ಮತ್ತೆ ಅಗ್ರ ಪಟ್ಟ ಅಲಂಕರಿಸಿದ ನೊವಾಕ್ ಜೊಕೊವಿಚ್ - ETV Bharath Kannada news

ಫ್ರೆಂಚ್​ ಓಪನ್​​ ಗೆಲ್ಲುವ ಮೂಲಕ ನೊವಾಕ್ ಜೊಕೊವಿಚ್ ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ಗಳನ್ನು ಗೆದ್ದ ಟೆನಿಸ್​ ತಾರೆಯಾಗಿದ್ದಾರೆ. 388 ವಾರಗಳ ಕಾಲ ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನಿಯಾಗಿದ್ದ ನೊವಾಕ್​ ಅವರನ್ನು ಅಲ್ಕರಾಜ್​ ಹಿಮ್ಮೆಟ್ಟಿಸಿದ್ದರು. ಈಗ ಮತ್ತೆ ಅಲ್ಕರಾಜ್​ರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿ ನೊವಾಕ್​ ಪ್ರಥಮ ಸ್ಥಾನ ಪಡೆದಿದ್ದಾರೆ.

Novak Djokovic
Novak Djokovic
author img

By

Published : Jun 12, 2023, 8:01 PM IST

ನವದೆಹಲಿ: ಫ್ರೆಂಚ್​ ಓಪನ್​ ಗೆದ್ದ ನೊವಾಕ್ ಜೊಕೊವಿಚ್ ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್​ಗಳನ್ನು ಗೆದ್ದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಅಲ್ಲದೇ ಎಟಿಪಿ ನೀಡುವ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಮೂರನೇ ಫ್ರೆಂಚ್​ ಓಪನ್​ ಗೆದ್ದು ಒಟ್ಟಾರೆ 23ನೇ ಗ್ರ್ಯಾಂಡ್ ಸ್ಲಾಮ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಮೂಲಕ ರಾಫೆಲ್​ ನಡಾಲ್​ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಈ ಹಿಂದೆ 388 ವಾರಗಳ ಕಾಲ ಎಟಿಪಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದ ಜೊಕೊವಿಚ್​ ಮತ್ತೆ ಕಾರ್ಲೋಸ್ ಅಲ್ಕರಾಜ್ ಅವರನ್ನು ಹಿಮ್ಮೆಟ್ಟಿಸಿ ನಂಬರ್​ 1 ಪಟ್ಟವನ್ನು ಅಲಂಕರಿಸಿದ್ದಾರೆ. ಜೊಕೊವಿಚ್​ ರೊಲ್ಯಾಂಡ್ ಗ್ಯಾರೋಸ್ ನಡೆದ ಸೆಮಿಫೈನಲ್‌ನಲ್ಲಿ ಅಗ್ರಸ್ಥಾನಿಯನಾಗಿದ್ದ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿ ಫೈನಲ್​ ಪ್ರವೇಶ ಪಡೆದುಕೊಂಡಿದ್ದರು. 7595 ಅಂಕಗಳನ್ನು ಹೊಂದಿರುವ ನೊವಾಕ್​ ಎರಡನೇ ಸ್ಥಾನದಲ್ಲಿರುವ ಕಾರ್ಲೋಸ್ ಅಲ್ಕರಾಜ್ (7,175) ​ಕ್ಕಿಂತ 420 ಅಂಕಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

ಸೆಮಿಫೈನಲ್​ನಲ್ಲಿ ಅಲ್ಕರಾಜ್​ ನೊವಾಕ್​ ಅವರನ್ನು ಮಣಿಸಿದ್ದರೆ ಅಗ್ರ ಶೇಯಾಂಕದಲ್ಲೇ ಮುಂದುವರೆಯ ಬಹುದಿತ್ತು. ಆದರೆ ಸೆಮಿಸ್​ನಲ್ಲಿ ನೊವಾಕ್​ ಕೇವಲ ಒಂದು ಸೆಟ್​ನಲ್ಲಿ ಮಾತ್ರ ಸೋಲನುಭವಿಸಿದರು. ನೊವಾಕ್​ ಎದುರು ಅಲ್ಕರಾಜ್​ 3-6, 7-5, 1-6,1-6 ರ ಸೆಟ್​ನಿಂದ ಸೋಲನುಭವಿಸಿದರು ಇದರಿಂದ ಕೆಂಪು ಮಣ್ಣಿನ ಮೈದಾನದಲ್ಲಿ ಫೈನಲ್​ ಅವಕಾಶವನ್ನು ಕಳೆದುಕೊಂಡರು.

ಇದನ್ನೂ ಓದಿ: French Open 2023: ಕಾರ್ಲೋಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನೊವಾಕ್ ಜೊಕೊವಿಕ್

ಈ ಬಾರಿ ಜೊಕೊವಿಚ್​ ಆಸ್ಟ್ರೇಲಿಯನ್​ ಓಪನ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫ್ರೆಂಚ್​ ಓಪನ್​ ಗೆಲ್ಲುವ ಮೂಲಕ 2023 ರಲ್ಲಿ ಎರಡನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು ಅಲ್ಲದೇ ಪ್ರತೀ ಪುರುಷರ ಸಿಂಗಲ್ಸ್​ ಪಂದ್ಯದಲ್ಲಿ ಅವರು ಮಹತ್ತರ ಘಟ್ಟದ ವರೆಗೆ ಹೋರಾಡಿದ್ದಾರೆ. ಜೊಕೊವಿಕ್ ಈ ವರ್ಷ ವಿಶ್ವ ನಂ.1 ಆಗಿರುವುದು ಇದು ಮೂರನೇ ಬಾರಿ.

ಫೆಬ್ರವರಿಯಲ್ಲಿ, ಜೊಕೊವಿಚ್​ ಪುರುಷರ ಅಥವಾ ಮಹಿಳಾ ಟೆನಿಸ್ ಆಟಗಾರ್ತಿ (ನಂತರ 377 ವಾರಗಳು) ವಿಶ್ವ ನಂ.1 ನಲ್ಲಿ ಹೆಚ್ಚಿನ ವಾರಗಳ ಸ್ಟೆಫಾನಿ ಗ್ರಾಫ್ ಅವರ ದಾಖಲೆಯನ್ನು ಮುರಿದರು. ಇನ್ನೊಬ್ಬ ವ್ಯಕ್ತಿ, ರೋಜರ್ ಫೆಡರರ್ (310 ವಾರಗಳು), 300 ವಾರಗಳಿಗಿಂತ ಹೆಚ್ಚು ಕಾಲ ವಿಶ್ವ ನಂ.1 ಆಗಿ ಕಳೆದಿದ್ದಾರೆ.

ಎಲ್ಲಾ ನಾಲ್ಕು ಪ್ರಮುಖ ಈವೆಂಟ್‌ಗಳನ್ನು ಕನಿಷ್ಠ ಮೂರು ಬಾರಿ ಗೆದ್ದ ಮೊದಲ ವ್ಯಕ್ತಿ ಸರ್ಬಿಯನ್ ಎಂಬ ದಾಖಲೆಯನ್ನು ಜೊಕೊವಿಚ್​ ಬರೆದಿದ್ದಾರೆ. 36 ವರ್ಷ ಮತ್ತು 20 ದಿನಗಳ ವಯಸ್ಸಿನಲ್ಲಿ ನೊವಾಕ್​ ಅತ್ಯಂತ ಹಿರಿಯ ರೋಲ್ಯಾಂಡ್ ಗ್ಯಾರೋಸ್ ಚಾಂಪಿಯನ್ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.

ಫೈನಲ್​ನಲ್ಲಿ ಕ್ಯಾಸ್ಪರ್ ರೂಡ್ ಅವರನ್ನು 7-6(1), 6-3, 7-5 ಸೆಟ್‌ಗಳಿಂದ ಸೋಲಿಸಿ 36 ವರ್ಷದ ಜೊಕೋವಿಕ್ ದಾಖಲೆ ಬರೆದರು. ನೊವಾಕ್‌ ಜೊಕೋವಿಚ್​​ ಅವರಿಗೆ ಇದು 34ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಹಾಗೂ 7ನೇ ಫ್ರೆಂಚ್‌ ಓಪನ್‌ ಫೈನಲ್‌ ಇದಾಗಿತ್ತು.

ಇದನ್ನೂ ಓದಿ: French Open title: ನಾರ್ವೆಯ ರೂಡ್ ಮಣಿಸಿ 23ನೇ ಗ್ರ್ಯಾಂಡ್​ ಸ್ಲಾಮ್ ಗೆದ್ದ ಜೊಕೋವಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.