ಹ್ಯಾಂಗ್ಝೌ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ (Asian Para Games)ನಲ್ಲಿ ಪುರುಷರ ಹೈ ಜಂಪ್ ಟಿ-63 ಸ್ಪರ್ಧೆಯಲ್ಲಿ ಭಾರತ ಚಿನ್ನ, ಬೆಳ್ಳಿ, ಕಂಚು ಹೀಗೆ ಒಟ್ಟು ಮೂರು ಪದಕಗಳನ್ನು ಗೆದ್ದುಕೊಂಡಿದೆ. ಶೈಲೇಶ್ ಕುಮಾರ್ ಚಿನ್ನದ ಪದಕ ಗೆದ್ದರೆ, ಮರಿಯಪ್ಪನ್ ತಂಗವೇಲು ಬೆಳ್ಳಿ ಮತ್ತು ರಾಮ್ ಸಿಂಗ್ ಪಾಧಿಯಾರ್ ಕಂಚು ಗೆದ್ದಿದ್ದಾರೆ.
ಮಹಿಳೆಯರ ಕ್ಯಾನೋಯಿಂಗ್ ( ) ಸ್ಪರ್ಧೆಯಲ್ಲಿ ಭಾರತದ ಪ್ರಾಚಿ ಯಾದವ್ ಬೆಳ್ಳಿ ಪದಕ ಗೆಲ್ಲುವ ಮೂಲಕ 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆಯನ್ನು ಆರಂಭಿಸಿದರು.
309 ಕ್ರೀಡಾಪಟುಗಳು ಭಾಗಿ: ಈ ಬಾರಿಯ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಒಟ್ಟು 309 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇದರಲ್ಲಿ 196 ಪುರಷರು ಮತ್ತು 113 ಮಹಿಳೆಯರು ಸೇರಿದ್ದಾರೆ. ಕರ್ನಾಟಕದಿಂದ 14 ಕ್ರೀಡಾಪಟುಗಳು ಪ್ರತಿನಿಧಿಸಿದ್ದಾರೆ. ಇದರಲ್ಲಿ 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತರಾದ ಅವನಿ ಲೆಖರಾ ಮತ್ತು ಸುಮಿತ್ ಆಂಟಿಲ್ ಕೂಡ ಭಾಗವಹಿಸಿದ್ದಾರೆ.
-
Asian Para Games | Men's High Jump-T63: India sweeps the podium - Shailesh Kumar wins Gold, Mariyappan Thangavelu wins Silver and Ram Singh Padhiyar wins Bronze. pic.twitter.com/Mxkg4HHDEa
— ANI (@ANI) October 23, 2023 " class="align-text-top noRightClick twitterSection" data="
">Asian Para Games | Men's High Jump-T63: India sweeps the podium - Shailesh Kumar wins Gold, Mariyappan Thangavelu wins Silver and Ram Singh Padhiyar wins Bronze. pic.twitter.com/Mxkg4HHDEa
— ANI (@ANI) October 23, 2023Asian Para Games | Men's High Jump-T63: India sweeps the podium - Shailesh Kumar wins Gold, Mariyappan Thangavelu wins Silver and Ram Singh Padhiyar wins Bronze. pic.twitter.com/Mxkg4HHDEa
— ANI (@ANI) October 23, 2023
2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ರದರ್ಶನ: 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 190 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದರು. 15 ಚಿನ್ನದ ಪದಕಗಳೊಂದಿಗೆ ಒಟ್ಟು 72 ಪದಕಗಳನ್ನು ಗೆದ್ದಿದ್ದ ಭಾರತ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿತ್ತು. ಇದು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿದೆ. 2014ರ ಆವೃತ್ತಿಯಲ್ಲಿ ಭಾರತ 33 ಪದಕಗಳನ್ನು ಗೆದ್ದಿತ್ತು.
-
Asian Para Games | Men's High Jump-T63: India sweeps the podium - Shailesh Kumar wins Gold, Mariyappan Thangavelu wins Silver and Ram Singh Padhiyar wins Bronze. pic.twitter.com/Mxkg4HHDEa
— ANI (@ANI) October 23, 2023 " class="align-text-top noRightClick twitterSection" data="
">Asian Para Games | Men's High Jump-T63: India sweeps the podium - Shailesh Kumar wins Gold, Mariyappan Thangavelu wins Silver and Ram Singh Padhiyar wins Bronze. pic.twitter.com/Mxkg4HHDEa
— ANI (@ANI) October 23, 2023Asian Para Games | Men's High Jump-T63: India sweeps the podium - Shailesh Kumar wins Gold, Mariyappan Thangavelu wins Silver and Ram Singh Padhiyar wins Bronze. pic.twitter.com/Mxkg4HHDEa
— ANI (@ANI) October 23, 2023
ಕಳೆದ ಎರಡು ವಾರಗಳ ಹಿಂದಷ್ಟೇ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿತ್ತು. 2023ರ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 107 ಪದಕಗಳನ್ನು ಭಾರತ ವಶಪಡಿಸಿಕೊಂಡು ಇತಿಹಾಸ ಬರೆದಿದೆ. ಇದೀಗ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲೂ ಭಾರತ 100 ಪದಕಗಳ ಗಡಿ ದಾಟಲು ಯೋಜನೆ ರೂಪಿಸಿದೆ.
-
As the Asian Para Games begin, I convey my best wishes to the incredible Indian contingent! Each athlete representing India has an inspiring life journey. I am confident they will give a glimpse of the true essence of Indian sportsmanship. pic.twitter.com/nFhFgpIUU4
— Narendra Modi (@narendramodi) October 22, 2023 " class="align-text-top noRightClick twitterSection" data="
">As the Asian Para Games begin, I convey my best wishes to the incredible Indian contingent! Each athlete representing India has an inspiring life journey. I am confident they will give a glimpse of the true essence of Indian sportsmanship. pic.twitter.com/nFhFgpIUU4
— Narendra Modi (@narendramodi) October 22, 2023As the Asian Para Games begin, I convey my best wishes to the incredible Indian contingent! Each athlete representing India has an inspiring life journey. I am confident they will give a glimpse of the true essence of Indian sportsmanship. pic.twitter.com/nFhFgpIUU4
— Narendra Modi (@narendramodi) October 22, 2023
ಪ್ರಧಾನಿ ಮೋದಿ ಶುಭಹಾರೈಕೆ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಎಲ್ಲ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅವರು ಶುಭ ಕೋರಿದ್ದಾರೆ. " ಏಷ್ಯನ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿರುವ ಭಾರತೀಯ ಕ್ರೀಡಾಪಟುಗಳಿಗೆ ಶುಭಾಶಯಗಳು. ಪ್ರತಿಯೊಬ್ಬ ಕ್ರೀಡಾಪಟುಗಳ ಸ್ಪೂರ್ತಿದಾಯಕ ಜೀವನ ಪಯಣವಿದು. ಈ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕ್ರೀಡಾಸ್ಪೂರ್ತಿಯ ನಿಜವಾದ ಸಾರವನ್ನು ಭಾರತದ ಕ್ರೀಡಾಪಟುಗಳು ಪ್ರದರ್ಶಿಸಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ( ಟ್ವಿಟ್ಟರ್) ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಜಹೀರ್ ಖಾನ್, ಜಾವಗಲ್ ಶ್ರೀನಾಥ್ ಹಿಂದಿಕ್ಕಿ ಹೊಸ ದಾಖಲೆ ಬರೆದ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್