ಬುಸಾನ್ (ದಕ್ಷಿಣ ಕೊರಿಯಾ) : ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ತನ್ನ ಪಾರಮ್ಯ ಮುಂದುವರೆಸಿದ್ದು ಸತತ ಎಂಟನೇ ಬಾರಿಗೆ ದಾಖಲೆಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಮಣಿಸಿ ಈ ಸಾಧನೆ ತೋರಿತು.
ಕೊರಿಯಾದ ಬುಸಾನ್‌ನಲ್ಲಿರುವ ಡಾಂಗ್-ಇಯುಯಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಯೋಕ್‌ಡಾಂಗ್ ಕಲ್ಚರಲ್ ಸೆಂಟರ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತವು 42-32 ರಿಂದ ಇರಾನ್ ತಂಡವನ್ನು ಸೋಲಿಸಿತು. ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ನ ಒಂಬತ್ತು ಆವೃತ್ತಿಗಳಲ್ಲಿ ಭಾರತ ಎಂಟನೇ ಪ್ರಶಸ್ತಿ ಗೆದ್ದುಕೊಂಡಿತು. ಅಂತಿಮ ಪಂದ್ಯದಲ್ಲಿ ತಂಡದ ನಾಯಕ ಪವನ್ ಸೆಹ್ರಾವತ್ ಸೂಪರ್ 10 ಸಾಧಿಸಿ ತಂಡದ ಗೆಲುವಿಗೆ ಕಾರಣರಾದರು.
ಭಾರತ ಆರಂಭದಿಂದಲೇ ಬಿಗಿಹಿಡಿತ ಸಾಧಿಸಿತು. ಮೊದಲ ಐದು ನಿಮಿಷದಲ್ಲಿ ಇರಾನ್ಗೆ ಸೋತು ಖಾತ್ರಿ ಮಾಡಿತು. ಪವನ್ ಸೆಹ್ರಾವತ್ ಮತ್ತು ಅಸ್ಲಾಮ್ ಇನಾಮದಾರ್ ಅವರ ಯಶಸ್ವಿ ದಾಳಿ ಮತ್ತು ಕೆಲವು ಟ್ಯಾಕಲ್ ಪಾಯಿಂಟ್ಗಳಿಂದ 10ನೇ ನಿಮಿಷದಲ್ಲಿ ಇರಾನ್ ಮೊದಲ ಆಲೌಟ್ ಅನುಭವಿಸಿತು.
-
India WIN Asia Kabaddi Championship title 🔥🔥🔥
— India_AllSports (@India_AllSports) June 30, 2023 " class="align-text-top noRightClick twitterSection" data="
➡️ India BEAT Iran 42-32 in Final.
➡️ It's record 8th title for India in overall 9 editions. pic.twitter.com/UYl82Vu6tJ
">India WIN Asia Kabaddi Championship title 🔥🔥🔥
— India_AllSports (@India_AllSports) June 30, 2023
➡️ India BEAT Iran 42-32 in Final.
➡️ It's record 8th title for India in overall 9 editions. pic.twitter.com/UYl82Vu6tJIndia WIN Asia Kabaddi Championship title 🔥🔥🔥
— India_AllSports (@India_AllSports) June 30, 2023
➡️ India BEAT Iran 42-32 in Final.
➡️ It's record 8th title for India in overall 9 editions. pic.twitter.com/UYl82Vu6tJ
ಆಲೌಟ್ ನಂತರ ಮತ್ತೆ ಮೈದಾನಕ್ಕೆ ಬಂದ ಇರಾನ್ ಬೋನಸ್ ಜೊತೆಗೆ ಅಂಕಗಳನ್ನು ಕಲೆಹಾಕಲು ಪ್ರಾರಂಭಿಸಿತು. ಆದರೆ, ಪವನ್ ಸೆಹ್ರಾವತ್ ನಾಯಕತ್ವದಲ್ಲಿ ಭಾರತ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿತು. ಇದರಿಂದಾಗಿ 19ನೇ ನಿಮಿಷದಲ್ಲಿ ಇರಾನ್ ಎರಡನೇ ಬಾರಿಗೆ ಆಲೌಟ್ ಆಯಿತು. ಇದರಿಂದ ಭಾರತ ಹೆಚ್ಚಿನ ಮುನ್ನಡೆ ಕಾಯ್ದುಕೊಂಡಿತು. ಪವನ್ ಅವರ ಅದ್ಭುತ ರೈಡ್ನಿಂದಾಗಿ ಇರಾನ್ ಮೂರನೇ ಬಾರಿಗೂ ಇದೇ ರೀತಿಯ ಆಲೌಟ್ ಸಂಕಷ್ಟ ಅನುಭವಿಸಿತು. ಭಾರತ ಈ ವೇಳೆಗೆ 33-14 ರ ಮುನ್ನಡೆ ಪಡೆದುಕೊಂಡಿತ್ತು.
ಮೂರನೇ ಬಾರಿಗೆ ಮತ್ತೆ ಆಲೌಟ್ ಆಗಿ 19 ಅಂಕಗಳ ಹಿನ್ನಡೆಯಲ್ಲಿದ್ದ ಇರಾನ್ ಒಮ್ಮೆಗೆ ಪುಟಿದೆದ್ದಿತು. ನಾಯಕ ಭರ್ಜರಿ ರೈಡ್ ಪಾಯಿಂಟ್ಗಳನ್ನು ಗಳಿಸಿ ಭಾರತವನ್ನು ಸವಾಲಾದರು. ಇದರ ಪರಿಣಾಮ 29ನೇ ನಿಮಿಷದಲ್ಲಿ ಭಾರತ ಆಲೌಟ್ ಆಯಿತು. ಇದರಿಂದಾಗಿ ಅಂಕಗಳ ಅಂತರ 11ಕ್ಕೆ (34- 23) ಕುಸಿಯಿತು. ಕೊನೆಯ 10 ನಿಮಿಷ ಪಂದ್ಯವಿದ್ದಾಗ ಭಾರತ 10 ಅಂಕದ ವ್ಯತ್ಯಾಸ ಹೊಂದಿತ್ತು. ಕೊನೆಯ ಹತ್ತು ನಿಮಿಷ ಅಂಕವನ್ನು ಎದುರಾಳಿಗೆ ಬಿಟ್ಟುಕೊಟ್ಟಷ್ಟೇ ಪ್ರಮಾಣದಲ್ಲಿ ಭಾರತ ಅಂಕಗಳನ್ನೂ ಕಸಿಯುತ್ತಾ ಸಾಗಿತು. ಹೀಗಾಗಿ ಪಂದ್ಯದಂತ್ಯಕ್ಕೆ ತಂಡ 10 ಅಂಕದ ಅಂತರದಲ್ಲಿ ಗೆಲುವು ದಾಖಲಿಸಿತು.
ಹಾಂಕಾಂಗ್ ವಿರುದ್ಧ ಭರ್ಜರಿ ಜಯ: ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡ ಹಾಂಕಾಂಗ್ ಅನ್ನು ಎದುರಿಸಿತ್ತು. ಇದರಲ್ಲಿ ಭಾರತ ತಂಡ 44 (64-20) ಅಂಕಗಳ ಅಂತರದ ಬೃಹತ್ ಗೆಲುವು ಸಾಧಿಸಿತ್ತು. ಇದರಿಂದ ತಂಡ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಫೈನಲ್ಗೆ ಸೋಲಿಲ್ಲದೇ ಪ್ರವೇಶ ಪಡೆದುಕೊಂಡಿತು. ಇರಾನ್ ಗುರುವಾರದ ಪಂದ್ಯದಲ್ಲಿ ಭಾರತದ ವಿರುದ್ಧ 33-28 ರಿಂದ ಸೋತು ಉಳಿದ ನಾಲ್ಕು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿತ್ತು.
ಇದನ್ನೂ ಓದಿ: Asian Kabaddi Championship: ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್- ಭಾರತಕ್ಕೆ ಹ್ಯಾಟ್ರಿಕ್ ಜಯ