ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್‌ನಲ್ಲಿ, ಭಾರತದ ಆರ್ಚರಿ ಮಹಿಳಾ ತಂಡವು ಚೈನೀಸ್ ತೈಪೆ (ತೈವಾನ್) ತಂಡವನ್ನು ಫೈನಲ್‌ನಲ್ಲಿ ಮಣಿಸಿ ಚಿನ್ನ ಪದಕಕ್ಕೆ ಮುತ್ತಿಟ್ಟಿದೆ. ಹಾಲಿ ವಿಶ್ವ ಚಾಂಪಿಯನ್ ಆಗಿರುವ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅಂತಿಮ ಹಣಾಹಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದರು.
-
🎯🥇GOLDEN GIRLS🥇🎯#KheloIndiaAthletes Aditi, @VJSurekha, and @Parrneettt add another Gold to India's medal tally after defeating Chinese Taipei by a scoreline of 230-229🤩🎯
— SAI Media (@Media_SAI) October 5, 2023 " class="align-text-top noRightClick twitterSection" data="
What a thrilling final 💪 Our Indian Archery contingent is truly shining bright, clinching their 2nd… pic.twitter.com/NtTiqO37aY
">🎯🥇GOLDEN GIRLS🥇🎯#KheloIndiaAthletes Aditi, @VJSurekha, and @Parrneettt add another Gold to India's medal tally after defeating Chinese Taipei by a scoreline of 230-229🤩🎯
— SAI Media (@Media_SAI) October 5, 2023
What a thrilling final 💪 Our Indian Archery contingent is truly shining bright, clinching their 2nd… pic.twitter.com/NtTiqO37aY🎯🥇GOLDEN GIRLS🥇🎯#KheloIndiaAthletes Aditi, @VJSurekha, and @Parrneettt add another Gold to India's medal tally after defeating Chinese Taipei by a scoreline of 230-229🤩🎯
— SAI Media (@Media_SAI) October 5, 2023
What a thrilling final 💪 Our Indian Archery contingent is truly shining bright, clinching their 2nd… pic.twitter.com/NtTiqO37aY
ಜ್ಯೋತಿ, ಅದಿತಿ ಮತ್ತು ಪರ್ನೀತ್ ಒಟ್ಟಾಗಿ 230 ಅಂಕಗಳನ್ನು ಗಳಿಸಿದರೆ, ಅವರ ಎದುರಾಳಿಗಳು ಕೊನೆಯ ಅಂತ್ಯಕ್ಕೆ 229 ಅಂಕಗಳನ್ನು ಗಳಿಸಿದರು. ಭಾರತವು ತೈವಾನ್ ವಿರುದ್ಧ ಆರಂಭದಿಂದಲೂ ಮುನ್ನಡೆ ಸಾಧಿಸಿದರು. ಕೊನೆಯ ಹಂತದ ವರೆಗೂ ತನ್ನ ಅಗ್ರಸ್ಥಾನ ಕಾಯ್ದುಕೊಂಡಿತು. ಭಾರತವು ತೈವಾನ್ ವಿರುದ್ಧ ಒಂದು ಅಂಕದಿಂದ ಜಯ ಗಳಿಸಿತು. ಇದಕ್ಕೂ ಮೊದಲು, ಗುರುವಾರ ಇಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಆರ್ಚರಿಯಲ್ಲಿ ಐದನೇ ಪದಕವನ್ನು ಖಚಿತಪಡಿಸಿಕೊಳ್ಳಲು ಭಾರತದ ತಂಡವು ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾ ತಂಡವನ್ನು ಹೊರಹಾಕಿತು.
ಮೊದಲ ಸೆಟ್‌ನಲ್ಲಿ ಚೈನೀಸ್ ತೈಪೆ ಎದುರಾಳಿಗಳು ಕಠಿಣ ಹೋರಾಟ ನೀಡಿದರು. ಆ ಸೆಟ್ ಅನ್ನು 54-56 ಅಂಕಗಳಿಂದ ಗೆದ್ದರು, ಆದರೆ ನಂತರ ಭಾರತ ತಂಡ ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿ ಎರಡನೇ ಚಿನ್ನಕ್ಕೆ ಕೊರಳೊಡ್ಡಿತು.
ಎಸ್ಎಐ ಅಭಿನಂದನೆ: ಆರ್ಚರಿ ತಂಡ ಚಿನ್ನದ ಪದಕ ಪಡೆದುಕೊಂಡಿರುವುದರಿಂದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಎಸ್ಎಐ ಅಭಿನಂದಿಸಿದೆ. ಈ ಸಂಬಂಧ ಅದು ಟ್ವೀಟ್ ಮಾಡಿದೆ. "ಗೋಲ್ಡನ್ ಗರ್ಲ್ಸ್ #ಖೇಲೋಇಂಡಿಯಾ ಅಥ್ಲೀಟ್‌ಗಳಾದ ಅದಿತಿ, @ವಿಜೆಸುರೇಖಾ ಮತ್ತು @ಪರ್ನೀಟ್ಟ್ ಅವರು ಚೈನೀಸ್ ತೈಪೆಯನ್ನು 230-228 ಅಂಕಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಭಾರತದ ಪದಕ ಪಟ್ಟಿಗೆ ಮತ್ತೊಂದು ಚಿನ್ನ ಸೇರಿದೆ #AsianGames2022 ಎಲ್ಲರಿಗೂ ಅಭಿನಂದನೆಗಳು" ಎಂದು ಟ್ವೀಟ್ನಲ್ಲಿ ಸಂತಸ ವ್ಯಕ್ತಪಡಿಸಿದೆ.
ಇದಕ್ಕೂ ಮುನ್ನ ನಡೆದ ಈವೆಂಟ್‌ನ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಮಹಿಳೆಯರ ಸಂಯುಕ್ತ ತಂಡ 231-220 ಅಂಕಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿ ಟೂರ್ನಿಯ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತ್ತು,. ಹಾಂಕಾಂಗ್‌ನ ಹಂಗ್ ಟಿಂಗ್ ಚೆಂಗ್, ಯುಕ್ ಶೆಂಗ್ ವಾಂಗ್, ಯಿನ್ ಯಿ ಲುಕ್ ಅವರು ಪಂದ್ಯದಲ್ಲಿ ಕಠಿಣ ಹೋರಾಟ ನೀಡಿದರೂ ಭಾರತದ ಬಿಲ್ಲುಗಾರರ ವಿರುದ್ಧ ಗೆಲುವು ಸಾಧಿಸುವಲ್ಲಿ ವಿಫಲರಾದರು.
ಇದಕ್ಕೂ ಮುನ್ನ ಗುರುವಾರ ನಡೆದ ಈವೆಂಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಜ್ಯೋತಿ, ಅದಿತಿ ಮತ್ತು ಪರ್ನೀತ್ ಅವರು ಇಂಡೋನೇಷ್ಯಾದ ರಾತಿಹ್ ಜಿಲಿಜಾಟಿ ಫಡ್ಲಿ, ಸಯಾರಾ ಖೋರುನಿಸಾ ಮತ್ತು ಶ್ರೀ ರಂತಿ ವಿರುದ್ಧ 233-219 ರಿಂದ ಜಯ ಸಾಧಿಸಿದರು. ಪಂದ್ಯದ ಮೊದಲ ನಿಮಿಷದಿಂದಲೇ ಮೇಲುಗೈ ಸಾಧಿಸಿದ ಭಾರತ ಮೊದಲ ಸೆಟ್‌ನಲ್ಲಿ 60 ಅಂಕ ಗಳಿಸಿ ಮುನ್ನಡೆ ಪಡೆದುಕೊಂಡಿತ್ತು.
ಸ್ಕ್ವಾಷ್ ಮಿಶ್ರ ಡಬಲ್ಸ್ನಲ್ಲಿ ಭಾರತಕ್ಕೆ ಸ್ವರ್ಣ ಪದಕ: ಹ್ಯಾಂಗ್‌ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕದ ಆಳ್ವಿಕೆ ಗುರುವಾರವೂ ಮುಂದುವರಿದಿದ್ದು, ಸ್ಕ್ವಾಷ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ದೀಪಿಕಾ ಪಲ್ಲಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.
-
🥇𝐈𝐧𝐝𝐢𝐚𝐧 𝐒𝐪𝐮𝐚𝐬𝐡 𝐑𝐞𝐢𝐠𝐧𝐬 𝐒𝐮𝐩𝐫𝐞𝐦𝐞!🌟
— SAI Media (@Media_SAI) October 5, 2023 " class="align-text-top noRightClick twitterSection" data="
Our dynamic mixed doubles team of @DipikaPallikal and @sandhu_harinder clinches GOLD, defeating Malaysia by a score of 2-0 in the final at #AsianGames2022!💥🥳
Join us in celebrating this golden achievement and sending… pic.twitter.com/d1GiaRVh4q
">🥇𝐈𝐧𝐝𝐢𝐚𝐧 𝐒𝐪𝐮𝐚𝐬𝐡 𝐑𝐞𝐢𝐠𝐧𝐬 𝐒𝐮𝐩𝐫𝐞𝐦𝐞!🌟
— SAI Media (@Media_SAI) October 5, 2023
Our dynamic mixed doubles team of @DipikaPallikal and @sandhu_harinder clinches GOLD, defeating Malaysia by a score of 2-0 in the final at #AsianGames2022!💥🥳
Join us in celebrating this golden achievement and sending… pic.twitter.com/d1GiaRVh4q🥇𝐈𝐧𝐝𝐢𝐚𝐧 𝐒𝐪𝐮𝐚𝐬𝐡 𝐑𝐞𝐢𝐠𝐧𝐬 𝐒𝐮𝐩𝐫𝐞𝐦𝐞!🌟
— SAI Media (@Media_SAI) October 5, 2023
Our dynamic mixed doubles team of @DipikaPallikal and @sandhu_harinder clinches GOLD, defeating Malaysia by a score of 2-0 in the final at #AsianGames2022!💥🥳
Join us in celebrating this golden achievement and sending… pic.twitter.com/d1GiaRVh4q
ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಫೈನಲ್ ಲಗ್ಗೆಯಿಟ್ಟ ಭಾರತ ಮಹಿಳಾ ಸಂಯುಕ್ತ ಆರ್ಚರಿ ತಂಡ... ಇಂದೂ ಮುಂದುವರಿಯಲಿದೆ ಪದಕಗಳ ಬೇಟೆ..