ಹ್ಯಾಂಗ್‌ಝೌ (ಚೀನಾ): ವಿಶ್ವ ಬ್ಯಾಡಿಂಟನ್ ಪ್ರವಾಸದಲ್ಲಿ ಈ ವರ್ಷ ಭಾರತದ ಷಟ್ಲರ್ಗಳು ಉತ್ತಮ ಪ್ರದರ್ಶನ ನೀಡಿದ್ದರು. ಅದೇ ಫಾರ್ಮ್ನ್ನು ಏಷ್ಯಾಡ್ನಲ್ಲಿ ಆಟಗಾರರು ಮುಂದುವರೆಸಿದ್ದಾರೆ. ಹ್ಯಾಂಗ್‌ಝೌನಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ನೇಪಾಳವನ್ನು 3-0 ಅಂಕಗಳಿಂದ ಸೋಲಿಸಿದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವು 37 ವರ್ಷಗಳ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಖಚಿತಪಡಿಸುವ ಮೂಲಕ ಇತಿಹಾಸ ಬರೆದಿದೆ.
-
HISTORY SCRIPTED, AGAIN 🤩🥳
— BAI Media (@BAI_Media) September 29, 2023 " class="align-text-top noRightClick twitterSection" data="
🇮🇳 men’s team secures historic medal at #AsianGames after 37 years 🫡
📸: @badmintonphoto@himantabiswa | @sanjay091968 | @lakhaniarun1 #TowardsAsianGlory#AsianGames2022#TeamIndia#IndiaontheRise#BadmintonTwitter#Badminton pic.twitter.com/Px9wnBpi0B
">HISTORY SCRIPTED, AGAIN 🤩🥳
— BAI Media (@BAI_Media) September 29, 2023
🇮🇳 men’s team secures historic medal at #AsianGames after 37 years 🫡
📸: @badmintonphoto@himantabiswa | @sanjay091968 | @lakhaniarun1 #TowardsAsianGlory#AsianGames2022#TeamIndia#IndiaontheRise#BadmintonTwitter#Badminton pic.twitter.com/Px9wnBpi0BHISTORY SCRIPTED, AGAIN 🤩🥳
— BAI Media (@BAI_Media) September 29, 2023
🇮🇳 men’s team secures historic medal at #AsianGames after 37 years 🫡
📸: @badmintonphoto@himantabiswa | @sanjay091968 | @lakhaniarun1 #TowardsAsianGlory#AsianGames2022#TeamIndia#IndiaontheRise#BadmintonTwitter#Badminton pic.twitter.com/Px9wnBpi0B
ಷಟ್ಲರ್‌ಗಳ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಭಾರತ ತಂಡವು 19ನೇ ಏಷ್ಯನ್ ಗೇಮ್ಸ್‌ನ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. 14ನೇ ಶ್ರೇಯಾಂಕಿತ ಆಟಗಾರ ಲಕ್ಷ್ಯ ಸೇನ್ ನೇಪಾಳದ ವಿರುದ್ಧ ಉತ್ತಮ ಆರಂಭ ಮಾಡಿದರು. ನಂತರ ಕಿಡಂಬಿ ಶ್ರೀಕಾಂತ್ ಮತ್ತು ಮಿಥುನ್ ಮಂಜುನಾಥ್ ಯಾವುದೇ ತೊಂದರೆಯಿಲ್ಲದೇ ನೇರ ಗೇಮ್‌ಗಳಲ್ಲಿ ಪೂರ್ಣಗೊಳಿಸಿದರು.
ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್ 21-5, 21-8 ರಲ್ಲಿ ಪ್ರಿನ್ಸ್ ದಹಾಲ್ ಅವರನ್ನು ಸೋಲಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಸುನಿಲ್ ಜೋಶಿ ಅವರನ್ನು 21-4, 21-13 ನೇರ ಸೆಟ್‌ಗಳಿಂದ ಸೋಲಿಸಿದರು. ಜೋಶಿ ಮೊದಲ ಗೇಮ್‌ನಲ್ಲಿ ಎಲ್ಲ ನಾಲ್ಕು ಪಾಯಿಂಟ್‌ಗಳನ್ನು ಗಳಿಸಲು ಮಾತ್ರ ಶಕ್ತರಾದರು ಮತ್ತು ಕಿಡಂಬಿಗೆ ಸುಲಭ ಜಯ ದಾಖಲಿಸಿದರು. ಹಾಗೆ ನೋಡಿದರೆ ಭಾರತೀಯ ಆಟಗಾರರ ಮುಂದೆ ನೇಪಾಳದ ಶಟ್ಲರ್ ಕೌಶಲ್ಯ ಕೊಂಚ ಕಡಿಮೆ ಎಂಬಂತೆ ಕಂಡು ಬಂತು.
-
.@nikhat_zareen is in the Semi Finals Now & we couldn't be prouder 🇮🇳
— SAI Media (@Media_SAI) September 29, 2023 " class="align-text-top noRightClick twitterSection" data="
The 2⃣ time World Champion defeated 🇯🇴's Nassar in 50kg weight category
With this, she also bags a #ParisOlympics Quota
What a delight it is to watch you on the ring Nikhat🔥
Well done & best wishes for the… pic.twitter.com/gsuU9l3HUv
">.@nikhat_zareen is in the Semi Finals Now & we couldn't be prouder 🇮🇳
— SAI Media (@Media_SAI) September 29, 2023
The 2⃣ time World Champion defeated 🇯🇴's Nassar in 50kg weight category
With this, she also bags a #ParisOlympics Quota
What a delight it is to watch you on the ring Nikhat🔥
Well done & best wishes for the… pic.twitter.com/gsuU9l3HUv.@nikhat_zareen is in the Semi Finals Now & we couldn't be prouder 🇮🇳
— SAI Media (@Media_SAI) September 29, 2023
The 2⃣ time World Champion defeated 🇯🇴's Nassar in 50kg weight category
With this, she also bags a #ParisOlympics Quota
What a delight it is to watch you on the ring Nikhat🔥
Well done & best wishes for the… pic.twitter.com/gsuU9l3HUv
ಮೂರನೇ ಗೇಮ್‌ನಲ್ಲಿ ಮಿಥುನ್ ಮಂಜುನಾಥ್ 21-2, 21-7 ರಲ್ಲಿ ಬಿಷ್ಣು ಕಟುವಾಲ್ ಅವರನ್ನು ಸೋಲಿಸಿ ಭಾರತ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿದರು. ಇಂಡೋನೇಷ್ಯಾ ಮತ್ತು ಕೊರಿಯಾ ನಡುವೆ ಸ್ಪರ್ಧೆ ನಡೆಯುತ್ತಿದ್ದು, ಇದರಲ್ಲಿ ಗೆದ್ದವರ ಜೊತೆ ಭಾರತ ಸೆಮೀಸ್ ಕದನ ಆಡಲಿದೆ.
ಭಾರತದ ಮಹಿಳಾ ಬ್ಯಾಡ್ಮಿಂಟನ್ ತಂಡವು ಹ್ಯಾಂಗ್‌ಝೌನಲ್ಲಿ ನಡೆದ ತಂಡ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದೆ. ಭಾರತ ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 3-0 ಅಂತರದ ನಿರಾಶಾದಾಯಕ ಸೋಲನುಭವಿಸಿತು.
ಸೆಮಿಸ್‌ಗೆ ಪ್ರವೇಶಿಸಿದ ನಿಖತ್ ಜರೀನ್: ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ 2023ರ ಹ್ಯಾಂಗ್‌ಝೌ ಏಷ್ಯಾಡ್ನಲ್ಲಿ ಮಹಿಳೆಯರ 50 ಕೆಜಿ ಕ್ವಾರ್ಟರ್-ಫೈನಲ್ ಪಂದ್ಯವನ್ನು ಜಯಿಸಿದ್ದಾರೆ. ಜೋರ್ಡಾನ್‌ನ ಹನಾನ್ ನಾಸರ್ ಅವರನ್ನು 27 ವರ್ಷದ ಭಾರತೀಯ ಅಥ್ಲೀಟ್ ನಿಖತ್ ಜರೀನ್ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಇದರಿಂದ ನಿಖತ್ ಜರೀನ್ ತಮ್ಮ ಏಷ್ಯನ್ ಗೇಮ್ಸ್ ಚೊಚ್ಚಲ ಪದಕವನ್ನು ಖಚಿತಪಡಿಸಿದ್ದಾರೆ. ಅಲ್ಲದೇ ಭಾರತವು ಮಹಿಳೆಯರ 50 ಕೆಜಿ ತೂಕ ವಿಭಾಗದಲ್ಲಿ ಪ್ಯಾರಿಸ್ 2024ರ ಒಲಿಂಪಿಕ್ಸ್ ಪ್ರವೇಶವನ್ನು ಪಡೆದುಕೊಂಡಿದೆ.
ಕ್ವಾರ್ಟರ್‌ಫೈನಲ್‌ಗೆ ಮಣಿಕಾ ಬಾತ್ರಾ: ಭಾರತದ ಏಸ್ ಪ್ಯಾಡ್ಲರ್ ಮಣಿಕಾ ಬಾತ್ರಾ ಅವರು ಶುಕ್ರವಾರ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. 16ನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಸುಥಾಸಿನಿ ಸಾವೆಟ್ಟಾಬುಟ್ ಅವರನ್ನು 4-2 (11-7, 6-11, 12-10, 11-13, 12-10, 11-6) ಸೋಲಿಸಿದರು. ಮೊದಲ ನಾಲ್ಕು ರೋಚಕ ಸೆಟ್‌ಗಳಲ್ಲಿ 2-2ರಲ್ಲಿ ಸಮಬಲ ಸಾಧಿಸಿದ ಬಾತ್ರಾ ನಂತರದ ಎರಡು ಸೆಟ್‌ಗಳಲ್ಲಿ ಸುತಾಸಿನಿ ಅವರನ್ನು ಸೋಲಿಸಿದರು.
ಮಣಿಕಾ ಬಾತ್ರಾ ದಾಖಲೆ: ಈ ಮೂಲಕ ಟೇಬಲ್ ಟೆನ್ನಿಸ್‌ನಲ್ಲಿ ಏಷ್ಯನ್ ಗೇಮ್ಸ್‌ನ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಸಿಂಗಲ್ಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೆಮಿ ಫೈನಲ್ನಲ್ಲಿ ಬಾತ್ರಾ ವಾಂಗ್ ಯಿದಿ ಅವರ ವಿರುದ್ಧ ಆಡಲಿದ್ದಾರೆ.
ಇದನ್ನೂ ಓದಿ: Asian Games 2023: ಪದಕದ ಸುತ್ತಿಗೆ ಬೋಪಣ್ಣ- ಭೋಸಲೆ ಜೋಡಿ.. ಕ್ವಾರ್ಟರ್ - ಫೈನಲ್ ಪ್ರವೇಶಿಸಿದ ಪರ್ವೀನ್ ಹೂಡಾ