ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಬೇಟೆ ಮುಂದುವರಿದಿದೆ. ಪುರುಷರ ಕಬಡ್ಡಿಯಲ್ಲಿ ಭಾರತ ತಂಡ ಇರಾನ್ ವಿರುದ್ಧ ತೀವ್ರ ಹೋರಾಟ ನಡೆಸಿ ಚಿನ್ನದ ಪದಕ ಗೆದ್ದುಕೊಂಡಿದೆ. ಇತ್ತ ಮಹಿಳೆಯರ ಹಾಕಿ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿ ಕಂಚಿಗೆ ಕೊರಳೊಡ್ಡಿದೆ.
ಕಬಡ್ಡಿಯ ಪವರ್‌ಹೌಸ್‌ಗಳಾದ ಭಾರತ ಮತ್ತು ಇರಾನ್ ನಡುವಿನ ಪಂದ್ಯ ರೋಚಕವಾಗಿ ಕೂಡಿರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಪಂದ್ಯದ ಕೊನೆಯಲ್ಲಿ ವಿವಾದಿತ ತೀರ್ಪುಗಳಿಂದ ನಾಟಕೀಯವಾಗಿ ಪಂದ್ಯ ಮುಕ್ತಾಯವಾಯಿತು.
-
𝐖𝐇𝐀𝐓 𝐀 𝐌𝐀𝐓𝐂𝐇!!
— SAI Media (@Media_SAI) October 7, 2023 " class="align-text-top noRightClick twitterSection" data="
A dramatic match between India and the defending champions, Iran, ends on our favour.
Our warriors gave a major fightback to end their campaign with the coveted GOLD🥇🌟 making it a double in Kabaddi🤩
It was a spectacular display of strength and… pic.twitter.com/ooLVZRBvb1
">𝐖𝐇𝐀𝐓 𝐀 𝐌𝐀𝐓𝐂𝐇!!
— SAI Media (@Media_SAI) October 7, 2023
A dramatic match between India and the defending champions, Iran, ends on our favour.
Our warriors gave a major fightback to end their campaign with the coveted GOLD🥇🌟 making it a double in Kabaddi🤩
It was a spectacular display of strength and… pic.twitter.com/ooLVZRBvb1𝐖𝐇𝐀𝐓 𝐀 𝐌𝐀𝐓𝐂𝐇!!
— SAI Media (@Media_SAI) October 7, 2023
A dramatic match between India and the defending champions, Iran, ends on our favour.
Our warriors gave a major fightback to end their campaign with the coveted GOLD🥇🌟 making it a double in Kabaddi🤩
It was a spectacular display of strength and… pic.twitter.com/ooLVZRBvb1
ವಿವಾದವೇನು?: ಪಂದ್ಯ ಮುಗಿಯಲು ಒಂದು ನಿಮಿಷ ಬಾಕಿ ಇದ್ದಾಗ ಭಾರತಕ್ಕೆ ಅಂಪೈರ್ಗಳು ನೀಡಿದ 3 ಅಂಕಗಳು ಇರಾನ್ ತಂಡವನ್ನು ಕೆರಳಿಸಿತು. ತೀರ್ಪುಗಾರರ ನಿರ್ಧಾರವನ್ನು ಇರಾನ್ ಪ್ರತಿಭಟಿಸಿತು. ಭಾರತ ತಂಡದ ಪವನ್ ಸೆಹ್ರಾವತ್ ರೇಡ್ ವೇಳೆ ಗೊಂದಲ ಉಂಟಾಯಿತು. ಪವನ್ ಟಚ್ ಲೈನ್ ಮುಟ್ಟಿಲ್ಲ ಎಂದು ಇರಾನ್ ವಾದಿಸಿತು. ನಿಯಮಗಳ ಪ್ರಕಾರ, ಎರಡೂ ತಂಡಗಳಿಗೆ ಮೊದಲು ತಲಾ 1 ಅಂಕ ನೀಡಲಾಯಿತು.
ಆದರೆ, ಭಾರತ ಇದನ್ನು ಮರುಪ್ರಶ್ನಿಸಿತು. ಪವನ್ ಕೋರ್ಟ್ನಿಂದ ಹೊರಬೀಳುವ ಮುನ್ನ ಲೈನ್ ಮುಟ್ಟಿದ್ದಾರೆ ಎಂದು ವಾದಿಸಿ 4 ಅಂಕಕ್ಕೆ ಬೇಡಿಕೆ ಇಟ್ಟಿತು. ಇದು ಮತ್ತಷ್ಟು ಗೊಂದಲು ಉಂಟು ಮಾಡಿತು. ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ನಿಯಮ 21ರ ಪ್ರಕಾರ ಪವನ್ ದಾಳಿಗೆ ಭಾರತ 3 ಅಂಕಗಳನ್ನು ಪಡೆಯಿತು. ಇದನ್ನೂ ವಿರೋಧಿಸಿದ ಇರಾನ್ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬಳಸಲಾದ ಹೊಸ ನಿಯಮದಂತೆ ಎರಡು ತಂಡಗಳಿಗೆ ತಲಾ ಒಂದು ಅಂಕ ನೀಡಬೇಕು ಎಂದು ವಾದಿಸಿತು.
-
#Bronze🥉for our Hockey Girls!
— SAI Media (@Media_SAI) October 7, 2023 " class="align-text-top noRightClick twitterSection" data="
A slender 2⃣-1⃣ victory in the bronze medal match against 🇯🇵 at the #AsianGames2022 🥳
Well played Team 🇮🇳! Many congratulations to all of you
💪🏻👏👏#Cheer4India 🇮🇳#HallaBol#JeetegaBharat#BharatAtAG22 pic.twitter.com/DSH0uh6kc5
">#Bronze🥉for our Hockey Girls!
— SAI Media (@Media_SAI) October 7, 2023
A slender 2⃣-1⃣ victory in the bronze medal match against 🇯🇵 at the #AsianGames2022 🥳
Well played Team 🇮🇳! Many congratulations to all of you
💪🏻👏👏#Cheer4India 🇮🇳#HallaBol#JeetegaBharat#BharatAtAG22 pic.twitter.com/DSH0uh6kc5#Bronze🥉for our Hockey Girls!
— SAI Media (@Media_SAI) October 7, 2023
A slender 2⃣-1⃣ victory in the bronze medal match against 🇯🇵 at the #AsianGames2022 🥳
Well played Team 🇮🇳! Many congratulations to all of you
💪🏻👏👏#Cheer4India 🇮🇳#HallaBol#JeetegaBharat#BharatAtAG22 pic.twitter.com/DSH0uh6kc5
ಕೊನೆಯಲ್ಲಿ ವಿಡಿಯೋ ಪರಿಶೀಲನೆಯ ನಂತರ ಭಾರತಕ್ಕೆ 3 ಅಂಕಗಳನ್ನು ನೀಡಲಾಯಿತು. ತೀವ್ರ ಗೊಂದಲದ ನಂತರ ಭಾರತ ಕೊನೆಯಲ್ಲಿ 33-29 ಅಂಕಗಳಲ್ಲಿ ಗೆಲುವು ಸಾಧಿಸಿತು.
ಕಬಡ್ಡಿಯಲ್ಲಿ ಡಬಲ್ ಚಿನ್ನ: ಪುರುಷರ ತಂಡ ಚಿನ್ನದ ಸಾಧನೆಗೂ ಮೊದಲು ಮಹಿಳಾ ಕಬಡ್ಡಿ ತಂಡ ಫೈನಲ್‌ನಲ್ಲಿ ಚೈನೀಸ್ ತೈಪೆ ವಿರುದ್ಧ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಭಾರತ ಮಹಿಳೆಯರು 26-25 ಅಂಕಗಳಿಂದ ಚೀನೀ ಮಹಿಳೆಯರನ್ನು ಸೋಲಿಸಿದ್ದರು.
8 ರಲ್ಲಿ 7 ಚಿನ್ನ: ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಆಟವನ್ನು ಸೇರ್ಪಡೆ ಮಾಡಿದ 8 ಆವೃತ್ತಿಗಳಲ್ಲಿ ಭಾರತ 7 ಬಾರಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 2019 ರಲ್ಲಿ ಜಕಾರ್ತದಲ್ಲಿ ಇರಾನ್ ತಂಡದ ವಿರುದ್ಧ ಮಾತ್ರ ಸೋಲು ಕಂಡು, ಬೆಳ್ಳಿ ಪಡೆದುಕೊಂಡಿತ್ತು.
ಹಾಕಿಯಲ್ಲಿ ಕಂಚು: ಮತ್ತೊಂದೆಡೆ ಹಾಕಿಯಲ್ಲಿ ಭಾರತ ಮಹಿಳಾ ಹಾಕಿ ತಂಡ, ಜಪಾನ್ ತಂಡವನ್ನು ಸೋಲಿಸಿ ಕಂಚು ಗೆದ್ದುಕೊಂಡಿತು. ಮೊದಲ ಕ್ವಾರ್ಟರ್‌ನಲ್ಲಿ ದೀಪಿಕಾ ಗೋಲು ಬಾರಿಸಿ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು. ಹಲವು ಪ್ರಯತ್ನಗಳ ಬಳಿಕ ಜಪಾನ್ನ ಯೂರಿ ನಾಗೈ ಅದ್ಭುತ ಹಿಟ್‌ನಿಂದ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಅದನ್ನು ಬಳಸಿಕೊಂಡ ತಂಡ ಗೋಲು ಬಾರಿಸಿ 1-1 ರಲ್ಲಿ ಸಮಬಲ ಸಾಧಿಸಿತು.
ದ್ವಿತೀಯಾರ್ಧದಲ್ಲೂ ಪಂದ್ಯ ರೋಚಕವಾಗಿ ಸಾಗಿತು. ಸಮ ಅಂಕ ಗಳಿಸಿದ್ದ ಇತ್ತಂಡಗಳು ಗೋಲು ಬಾರಿಸಲು ಹಲವು ಪ್ರಯತ್ನ ಮಾಡಿದರು. ಪಂದ್ಯ ಮುಗಿಯಲು 10 ನಿಮಿಷಗಳಿರುವಾಗ ಸುಶೀಲಾ ಚಾನು ಗೋಲು ಬಾರಿಸಿ 2-1 ರಲ್ಲಿ ಭಾರತಕ್ಕೆ ಗೆಲುವು ತಂದರು. ಅಂತಿಮವಾಗಿ ಭಾರತ ಮಹಿಳಾ ಹಾಕಿ ತಂಡವು ಕಂಚಿನ ಪದಕದೊಂದಿಗೆ ಏಷ್ಯನ್ ಗೇಮ್ಸ್ ಪಯಣವನ್ನು ಮುಗಿಸಿತು.
ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಶತಕದ ಸಾಧನೆ... ಕಬಡ್ಡಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಚಿನ್ನದ ಗರಿ..