ETV Bharat / sports

Asian Games: ಟೀಮ್ ಡ್ರೆಸ್ಸೇಜ್‌ನಲ್ಲಿ ಭಾರತಕ್ಕೆ ಚಿನ್ನ.. 4 ದಶಕಗಳ ನಂತರ ಪದಕ ಸಾಧನೆ ಮಾಡಿದ ಇಂಡಿಯಾ - ETV Bharath Kannada news

19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಮಂಗಳವಾರ ಇಲ್ಲಿ ನಡೆದ ತಂಡ ಸ್ಪರ್ಧೆಯಲ್ಲಿ ಸುದೀಪ್ತಿ ಹಜೇಲಾ, ದಿವ್ಯಕೃತಿ ಸಿಂಗ್, ಹೃದಯ್ ಛೇಡಾ ಮತ್ತು ಅನುಷ್ ಅಗರ್ವಾಲಾ​ ಅವರ ಕ್ವಾರ್ಟೆಟ್ ಜಯಗಳಿಸಿದಾಗ ನಾಲ್ಕು ದಶಕಗಳ ಅಂತರದ ನಂತರ ಡ್ರೆಸ್ಸೇಜ್ ಪ್ರಿಕ್ಸ್ ಸೇಂಟ್ ಜಾರ್ಜಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಏಷ್ಯನ್ ಗೇಮ್ಸ್ ಈಕ್ವೆಸ್ಟ್ರಿಯನ್ ಸ್ಪರ್ಧೆಗಳಲ್ಲಿ ಇತಿಹಾಸ ನಿರ್ಮಿಸಿತು.

Asian Games
Asian Games
author img

By ETV Bharat Karnataka Team

Published : Sep 26, 2023, 4:55 PM IST

ಹ್ಯಾಂಗ್‌ಝೌ(ಚೀನಾ): ಏಷ್ಯನ್ ಕ್ರೀಡಾಕೂಟದ ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ಸ್ಪರ್ಧೆಗಳಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ನಾಲ್ಕು ದಶಕಗಳ ನಂತರ ಡ್ರೆಸ್ಸೆಜ್ ಪ್ರಿಕ್ಸ್ ಸೇಂಟ್ ಜಾರ್ಜಸ್‌ನಲ್ಲಿ ಸುದೀಪ್ತಿ ಹಜೇಲಾ, ದಿವ್ಯಕೃತಿ ಸಿಂಗ್, ಹೃದಯ್ ಛೇಡಾ ಮತ್ತು ಅನುಷ್ ಅಗರ್ವಾಲಾ ಅವರ ಕ್ವಾರ್ಟೆಟ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸುದೀಪ್ತಿ (ಚಿನ್ಸ್ಕಿ ), ದಿವ್ಯಾಕೃತಿ (ಅಡ್ರಿನಾಲಿನ್ ಫಿರ್ದೋಡ್), ಹೃದಯ್ (ಕೆಮ್‌ಎಕ್ಸ್‌ಪ್ರೊ ಎಮರಾಲ್ಡ್) ಮತ್ತು ಅನುಷ್ (ಇಟ್ರೊ) ಅವರು 209.206 ಅಂಕಗಳನ್ನು ಗಳಿಸಿ ಆತಿಥೇಯ ಚೀನಾವನ್ನು ಮಣಿಸಿದ್ದಾರೆ.

ಸುಮಾರು 10 ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಏಷ್ಯಾದಾದ್ಯಂತದ ಹಲವಾರು ಅಥ್ಲೀಟ್‌ಗಳು ಭಾಗವಹಿಸಿದ್ದಾರೆ. ಅಗರ್ವಾಲ್, ಛೇಡಾ, ದಿವ್ಯಕೃತಿ ಮತ್ತು ಹಜೇಲಾ ಅವರ ಭಾರತೀಯ ಕ್ವಾರ್ಟೆಟ್‌ಗಳು ಪ್ರಬಲ ಹೋರಾಟ ತೋರಿದರು. ಅನುಷ್ ಅಗರ್ವಾಲಾ ಮತ್ತು ಅವರ ಕುದುರೆ ಇಟ್ರೊದಲ್ಲಿ 71.088 ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದರೆ, ಹೃದಯ್ ಛೇಡಾ - ಎಮರಾಲ್ಡ್​ನಲ್ಲಿ 69.941, ದಿವ್ಯಾಕೃತಿ ಸಿಂಗ್-ಅಡ್ರಿನಾಲಿನ್ ಫಿರ್ದೋಡ್​ನಲ್ಲಿ 68.176 ಮತ್ತು ಸುದೀಪ್ತಿ ಹಜೇಲಾ- ಚಿನ್ಸ್ಕಿನಲ್ಲಿ 66.706 ಅಂಕ ಗಳಿಸಿದರು. ಆತಿಥೇಯ ರಾಷ್ಟ್ರ ಚೀನಾ 204.882 ಅಂಕಗಳನ್ನು ಗಳಿಸಿದರು. ಹಾಂಕಾಂಗ್ 204.852 ಅಂಕ ಪಡೆದುಕೊಂಡಿತು.

40 ವರ್ಷಗಳ ಹಿಂದೆ ಪದಕ ಗೆಲುವು: 1982ರಲ್ಲಿ ನವದೆಹಲಿಯಲ್ಲಿ ನಡೆದ ಆವೃತ್ತಿಯಲ್ಲಿ ಜಿತೇಂದರ್ಜಿತ್ ಸಿಂಗ್ ಅಹ್ಲುವಾಲಿಯಾ, ಗುಲಾಮ್ ಮೊಹಮ್ಮದ್ ಖಾನ್ ಮತ್ತು ರಘುಬೀರ್ ಸಿಂಗ್ ತಂಡವು ಕಂಚಿನ ಪದಕವನ್ನು ಗೆದ್ದ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಇದು ಎರಡನೇ ಪದಕವಾಗಿದೆ. ಭಾರತದ ಎಲ್ಲಾ ಮೂರು ಚಿನ್ನದ ಪದಕಗಳು 1982ರ ಏಷ್ಯನ್ ಗೇಮ್ಸ್‌ನಲ್ಲಿ ಕ್ರೀಡಾಪಟುಗಳು ವೈಯಕ್ತಿಕ ಮತ್ತು ಟೀಮ್ ಈವೆಂಟ್​ನಲ್ಲಿ ಗೆದ್ದಿದ್ದರು.

  • It is a matter of extreme pride that after several decades, our Equestrian Dressage Team has won Gold in Asian Games!

    Hriday Chheda, Anush Agarwalla, Sudipti Hajela and Divyakriit Singh have displayed unparalleled skill, teamwork and brought honour to our nation on the… pic.twitter.com/9GtxWKcPHl

    — Narendra Modi (@narendramodi) September 26, 2023 " class="align-text-top noRightClick twitterSection" data=" ">

ಪ್ರಧಾನಿಯಿಂದ ಪ್ರಶಂಸೆ: "ಹಲವು ದಶಕಗಳ ನಂತರ ನಮ್ಮ ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ!. ಹೃದಯ್ ಛೇಡಾ, ಅನುಷ್ ಅಗರ್ವಾಲ್​, ಸುದೀಪ್ತಿ ಹಜೇಲಾ ಮತ್ತು ದಿವ್ಯಕೃತ್ ಸಿಂಗ್ ಅವರು ಅಪ್ರತಿಮ ಕೌಶಲ್ಯ, ಟೀಮ್‌ವರ್ಕ್ ಅನ್ನು ಪ್ರದರ್ಶಿಸಿದ್ದಾರೆ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ರಾಷ್ಟ್ರಕ್ಕೆ ಗೌರವವನ್ನು ತಂದಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಎಕ್ಸ್​ ಆ್ಯಪ್​ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌: ಸೈಲಿಂಗ್​ನಲ್ಲಿ ಭಾರತಕ್ಕೆ ಬೆಳ್ಳಿ, ಎರಡು ಕಂಚು ಗೌರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.