ETV Bharat / sports

ಏಷ್ಯನ್​ ಗೇಮ್ಸ್​​: 1,500 ಮೀಟರ್ ಓಟದಲ್ಲಿ ಭಾರತಕ್ಕೆ 2 ಬೆಳ್ಳಿ, 1 ಕಂಚು; ಲಾಂಗ್​ ಜಂಪ್​ನಲ್ಲಿ ಶ್ರೀಶಂಕರ್​ಗೆ ಬೆಳ್ಳಿ - 1500 ಮೀಟರ್ ಓಟದಲ್ಲಿ ಭಾರತಕ್ಕೆ ಎರಡು ಬೆಳ್ಳಿ

Asian Games 2023, Day 8: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಮತ್ತು ಪುರುಷರ 1,500 ಮೀಟರ್ ಓಟ ಹಾಗು ಲಾಂಗ್‌ಜಂಪ್‌ನಲ್ಲಿ ಭಾರತ ಸ್ಪರ್ಧಿಗಳು ಪದಕ ಸಾಧನೆ ಮಾಡಿದ್ದಾರೆ.

Asian
Asian
author img

By ETV Bharat Karnataka Team

Published : Oct 1, 2023, 7:14 PM IST

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್​ ಗೇಮ್ಸ್​ನಲ್ಲಿ ಇಂದು (ಭಾನುವಾರ) ಮಹಿಳೆಯರ 1,500 ಮೀಟರ್ ಓಟದಲ್ಲಿ ಹರ್ಮಿಲನ್ ಬೇನ್ಸ್ ಬೆಳ್ಳಿ ಗೆದ್ದರೆ, ಪುರುಷರ 1,500 ಮೀ ಓಟದಲ್ಲಿ ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಬೇನ್ಸ್ ಅವರು 4:12.74 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದರೆ, ಸರೋಜ್ 3:38.94 ಮತ್ತು ಜಾನ್ಸನ್ 3:39.74 ಸೆಕೆಂಡ್​ನಲ್ಲಿ ಓಟ ಮುಗಿಸಿ ಪದಕ ಗೆದ್ದರು. ಪುರುಷರ ವಿಭಾಗದಲ್ಲಿ ಕತಾರ್‌ನ ಮೊಹಮದ್ ಅಲ್ಗರ್ನಿ 3:38.36 ಉತ್ತಮ ಸಮಯದಿಂದ ಚಿನ್ನ ಸಂಪಾದಿಸಿದರು.

ಹರ್ಮಿಲನ್ ಬೇನ್ಸ್ ಅವರ ಕುಟುಂಬ ಅಥ್ಲೆಟಿಕ್ಸ್ ಹೆಚ್ಚು ಒತ್ತು ಕೊಟ್ಟಿದೆ. ಇವರ ಪೋಷಕರೂ ಸಹ ಅಥ್ಲೆಟಿಕ್ಸ್ ಆಟಗಾರರಾಗಿದ್ದರು. ತಂದೆ ಅಮನದೀಪ್ ಬೈನ್ಸ್ 1,500 ಮೀ ಓಟದಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದು, ತಾಯಿ ಮಾಧುರಿ ಸಕ್ಸೇನಾ 2002ರ ಏಷ್ಯನ್ ಗೇಮ್ಸ್ 800 ಮೀಟರ್​ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆ. 25 ವರ್ಷದ ಹರ್ಮಿಲನ್ 2022ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಅನ್ನು ಗಾಯದ ಕಾರಣದಿಂದ ಕಳೆದುಕೊಂಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಗಾಯದಿಂದ ಮರಳಿದ ಅವರು ಏಷ್ಯಾಡ್​ನಲ್ಲಿ ಬೆಳ್ಳಿ ಪದಕ ಸಾಧನೆ ತೋರಿದ್ದಾರೆ.

ಲಾಂಗ್​ ಜಂಪ್​ನಲ್ಲಿ ಶ್ರೀಶಂಕರ್​ಗೆ ಬೆಳ್ಳಿ: ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಅವರು 8.19 ಮೀಟರ್‌ ದೂರ ಜಿಗಿದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. 24 ವರ್ಷದ ಶ್ರೀಶಂಕರ್ ಚಿನ್ನದ ಪದಕ ವಿಜೇತ ಚೀನಾದ ವಾಂಗ್ ಜಿಯಾನನ್ ಅವರಿಗಿಂತ ಕೇವಲ 0.3 ಮೀ ಕಡಿಮೆ ದೂರದಲ್ಲಿ ಜಿಗಿದ ಕಾರಣ ಬೆಳ್ಳಿಗೆ ತೃಪ್ತಿ ಪಡಬೆಕಾಯಿತು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶ್ರೀಶಂಕರ್ ಬೆಳ್ಳಿ ಜಯಿಸಿದ್ದರು. ಜೆಸ್ವಿನ್ ಆಲ್ಡ್ರಿನ್ ಹ್ಯಾಂಗ್‌ಝೌನಲ್ಲಿ ನಡೆದ ಪುರುಷರ ಲಾಂಗ್ ಜಂಪ್ ಫೈನಲ್‌ನಲ್ಲಿ ಎಂಟನೇ (7.76 ಮೀ) ಮುಗಿಸಿದರು.

ಡಿಸ್ಕಸ್‌ ತ್ರೋನಲ್ಲಿ ಸೀಮಾ ಪುನಿಯಾಗೆ ಕಂಚು: ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಭಾರತದ ಸೀಮಾ ಪುನಿಯಾ 58.62 ಮೀಟರ್​ ದೂರ ಎಸೆದು ಕಂಚಿನ ಪದಕ ಗೆದ್ದರು. ಚೀನಾದ ಫೆಂಗ್ ಬಿನ್ (67.93 ಮೀ) ಮತ್ತು ಜಿಯಾಂಗ್ ಜಿಚಾವೊ (61.04 ಮೀ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯೊಂದಿಗೆ ಕಂಚಿನ ಪದಕ ಪಡೆದರು.

ನಂದಿನಿ ಅಗಸರಗೆ ಕಂಚು: ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ನಂದಿನಿ ಅಗಸರ ಅವರು 800 ಮೀಟರ್ ಓಟವನ್ನು 2:15.33 ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಮುಗಿಸಿ ಕಂಚಿನ ಪದಕ ಗೆದ್ದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್: ಶಾಟ್‌ಪುಟ್​, ಸ್ಟೀಪಲ್ ಚೇಸ್‌ನಲ್ಲಿ ಭಾರತಕ್ಕೆ ಬಂಗಾರ; ನಿಖತ್ ಜರೀನ್‌ಗೆ ಕಂಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.