ಹ್ಯಾಂಗ್ಝೌ (ಚೀನಾ): ಕಳೆದ ಆರು ದಿನಗಳಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂದಿಗೂ ಹಲವು ಕ್ರೀಡೆಗಳಲ್ಲಿ ಪದಕಗಳ ನಿರೀಕ್ಷೆ ಇದೆ. ಏಷ್ಯನ್ ಗೇಮ್ಸ್‌ನ ಏಳನೇ ದಿನ ಪದಕ ಪಟ್ಟಿಯಲ್ಲಿ ಭಾರತದ ಖಾತೆ ತೆರೆದಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಚಿನ್ನದ ಪದಕದ ಪಂದ್ಯದಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿಎಸ್ ಅವರು ಚೀನಾದ ಜಾಂಗ್ ಬೋವಿನ್-ಜಿಯಾಗ್ ರಾಂಕ್ಸಿನ್ ಎದುರು ಸೋಲನ್ನೊಪ್ಪಿಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ವಾಲಿಬಾಲ್: ಭಾರತ ಮಹಿಳಾ ತಂಡ ಕೊರಿಯಾ ವಿರುದ್ಧದ ಪೂಲ್ ಪಂದ್ಯದ ಮೊದಲ ಸೆಟ್‌ನಲ್ಲಿ 25-23 ರಿಂದ ಗೆದ್ದಿದೆ.
ಲಾಂಗ್ಜಂಪ್: ಪುರುಷರ ಲಾಂಗ್ ಜಂಪ್‌ನಲ್ಲಿ ಮುರಳಿ ವಿಜಯಶಂಕರ್ ಮತ್ತು ಜೇಸನ್ ಆಲ್ಡ್ರಿನ್ ಫೈನಲ್ ತಲುಪಿದ್ದಾರೆ. ಅಜಯ್ ಕುಮಾರ್ ಸರೋಜ್ ಮತ್ತು ಜಿನ್ಸನ್ ಜಾನ್ಸನ್ ಪುರುಷರ 1500 ಮೀ ಹೀಟ್ಸ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಜ್ಯೋತಿ ಯರಾಜಿ ಮತ್ತು ನಿತ್ಯಾ ರಾಮರಾಜ್ ಕೂಡ ಫೈನಲ್‌ನಲ್ಲಿ ಆಡಲಿದ್ದಾರೆ. ಅಥ್ಲೆಟಿಕ್ಸ್‌ನ ಈ ಎಲ್ಲಾ ಪದಕ ಸ್ಪರ್ಧೆಗಳು ನಾಳೆ ಅಂದರೆ ಭಾನುವಾರದಂದು ನಡೆಯಲಿವೆ.
-
🇮🇳's 8️⃣th SiLVER in Shooting🥈
— SAI Media (@Media_SAI) September 30, 2023 " class="align-text-top noRightClick twitterSection" data="
Hats off to our stellar duo, #KheloIndiAthlete @Sarabjotsingh30 Singh and #TOPSchemeAthlete Divya who secured Silver in the 10m Air Pistol Mixed Team event at #AsianGames2022.
Their remarkable performance adds another feather to India's glorious… pic.twitter.com/F6wxXwlha4
">🇮🇳's 8️⃣th SiLVER in Shooting🥈
— SAI Media (@Media_SAI) September 30, 2023
Hats off to our stellar duo, #KheloIndiAthlete @Sarabjotsingh30 Singh and #TOPSchemeAthlete Divya who secured Silver in the 10m Air Pistol Mixed Team event at #AsianGames2022.
Their remarkable performance adds another feather to India's glorious… pic.twitter.com/F6wxXwlha4🇮🇳's 8️⃣th SiLVER in Shooting🥈
— SAI Media (@Media_SAI) September 30, 2023
Hats off to our stellar duo, #KheloIndiAthlete @Sarabjotsingh30 Singh and #TOPSchemeAthlete Divya who secured Silver in the 10m Air Pistol Mixed Team event at #AsianGames2022.
Their remarkable performance adds another feather to India's glorious… pic.twitter.com/F6wxXwlha4
ಸ್ಪೀಡ್ ಸ್ಕೇಟಿಂಗ್: ಪುರುಷರ ಸ್ಪೀಡ್ ಸ್ಕೇಟಿಂಗ್ 1000 ಮೀಟರ್ ಫೈನಲ್‌ನಲ್ಲಿ ಆನಂದಕುಮಾರ್ ವೆಲ್ಕುಮಾರ್ 15:40.978 ರಲ್ಲಿ ಆರನೇ ಸ್ಥಾನ ಗಳಿಸಿದರೆ, ಸಿದ್ದಾಂತ್ ರಾಹುಲ್ ಕಾಂಬ್ಳೆ 15:57.944 ರಲ್ಲಿ ಏಳನೇ ಸ್ಥಾನ ಪಡೆದರು.
1500 ಮೀಟರ್ ಹೀಟ್ 1 ಸ್ಪರ್ಧೆ: ಪುರುಷರ 1500 ಮೀಟರ್ ಹೀಟ್ 1ರಲ್ಲಿ ಅಜಯ್ ಕುಮಾರ್ ಸರೋಜ್ ಎರಡನೇ ಸ್ಥಾನ ಪಡೆದರು. 3:51.93 ಸಮಯದೊಂದಿಗೆ ಅವರು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದರು. ಇದೇ ಕೂಟದಲ್ಲಿ ಭಾರತದ ಮತ್ತೊಬ್ಬ ಅಥ್ಲೀಟ್ ಜಿನ್ಸನ್ ಜಾನ್ಸನ್ ಕೂಡ ಭಾಗವಹಿಸಿದ್ದು, ಫೈನಲ್‌ಗೆ ತಲುಪಿದ್ದಾರೆ.
ಓದಿ: Asian Games 2023: ಏಳನೇ ದಿನವೂ ಆಗಲಿದೆ ಪದಕಗಳ ಸುರಿಮಳೆ.. ಇಲ್ಲಿದೆ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವೇಳಾಪಟ್ಟಿ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಮಾರ್ಕ್ಯೂ ಗೇಮ್ಸ್‌ನ ನಡೆಯುತ್ತಿರುವ ಆವೃತ್ತಿಯಲ್ಲಿ ಭಾರತ 50 ವರ್ಷಗಳಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಶ್ರೇಣಿಯನ್ನು ಪಡೆದುಕೊಂಡಿದೆ. ಭಾರತ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಎಂಟು ಚಿನ್ನ, 12 ಬೆಳ್ಳಿ ಮತ್ತು 13 ಕಂಚು ಸೇರಿದಂತೆ ಒಟ್ಟು 34 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳು ಹೆಚ್ಚು ಛಾಪು ಮೂಡಿಸಿದ್ದು, ಶೂಟಿಂಗ್ನಲ್ಲಿ ಭಾರತ ಈವರೆಗೆ 19 ಪದಕಗಳನ್ನು ಗೆದ್ದುಕೊಂಡಿದೆ. ಕಳೆದ ಐವತ್ತು ವರ್ಷಗಳಲ್ಲಿ, ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ 1962 ರ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನವನ್ನು ಭಾರತ ಪಡೆದುಕೊಂಡಿತ್ತು. ಆ ಕ್ರೀಡಾಕೂಟದಲ್ಲಿ ಭಾರತ 10 ಚಿನ್ನ, 13 ಬೆಳ್ಳಿ ಮತ್ತು 10 ಕಂಚಿನ ಪದಕ ಸೇರಿದಂತೆ ಒಟ್ಟು 33 ಪದಕಗಳನ್ನು ಗೆದ್ದುಕೊಂಡಿತು.