ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಸೆಮಿಫೈನಲ್ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾವನ್ನು 5-3 ಗೋಲುಗಳಿಂದ ಬಗ್ಗು ಬಡಿದು ಫೈನಲ್‌ಗೆ ಪ್ರವೇಶಿಸಿದ್ದು, ಚಿನ್ನದ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಹಾರ್ದಿಕ್ ಸಿಂಗ್ (5'), ಮನ್‌ದೀಪ್ ಸಿಂಗ್ (11'), ಲಲಿತ್ ಕುಮಾರ್ ಉಪಾಧ್ಯಾಯ (15'), ಅಮಿತ್ ರೋಹಿದಾಸ್ (24') ಮತ್ತು ಅಭಿಷೇಕ್ (54') ಗಳಿಸಿದ ಗೋಲಿನ ಸಹಾಯದಿಂದ ಭಾರತ ತಂಡವನ್ನು ಫೈನಲ್‌ಗೆ ತಲುಪಿದೆ. ದಕ್ಷಿಣ ಕೊರಿಯಾದ ಜಂಗ್ ಮಂಜೇ (17', 20', 42') ಗಳಿಸಿ ಹ್ಯಾಟ್ರಿಕ್ ತಂಡದ ಗೆಲುವಿಗೆ ಕೊಡುಗೆ ಆಗಲಿಲ್ಲ.
ಫೈನಲ್ ಪಂದ್ಯ ಶುಕ್ರವಾರ ನಡೆಯಲಿದ್ದು, ಇದರಲ್ಲಿ ಭಾರತ ಚೀನಾ ಅಥವಾ ಜಪಾನ್ ಎದುರಿಸಬೇಕಾಗುತ್ತದೆ. ಸೆಮಿಫೈನಲ್ನಲ್ಲಿ ಈ ಎರಡು ತಂಡಗಳು ಮುಖಾಮುಖಿ ಆಗುತ್ತಿದ್ದು, ಗೆದ್ದವರು ಫೈನಲ್‌ಗೆ ಪ್ರವೇಶಿಸಲಿದ್ದಾರೆ. ಭಾರತ ಫೈನಲ್‌ನಲ್ಲಿ ಗೆದ್ದರೆ ಏಷ್ಯನ್ ಗೇಮ್ಸ್‌ನಲ್ಲಿ ಇದು ನಾಲ್ಕನೇ ಚಿನ್ನವಾಗಲಿದೆ ಮತ್ತು ತಂಡವು ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಕಾಯ್ದಿರಿಸಲಿದೆ.
-
INDIA, your team is through to the GRAND FINALE of #19thAsianGames, with 63 goals scored, 8 goals conceded in 6 matches, there's just 1 last battle to be won to take shot at the gold medal glory! Let's go, #TeamIndia! 🇮🇳#HockeyIndia #IndiaKaGame #AsianGames #TeamIndia… pic.twitter.com/lrpuJKM1t5
— Hockey India (@TheHockeyIndia) October 4, 2023 " class="align-text-top noRightClick twitterSection" data="
">INDIA, your team is through to the GRAND FINALE of #19thAsianGames, with 63 goals scored, 8 goals conceded in 6 matches, there's just 1 last battle to be won to take shot at the gold medal glory! Let's go, #TeamIndia! 🇮🇳#HockeyIndia #IndiaKaGame #AsianGames #TeamIndia… pic.twitter.com/lrpuJKM1t5
— Hockey India (@TheHockeyIndia) October 4, 2023INDIA, your team is through to the GRAND FINALE of #19thAsianGames, with 63 goals scored, 8 goals conceded in 6 matches, there's just 1 last battle to be won to take shot at the gold medal glory! Let's go, #TeamIndia! 🇮🇳#HockeyIndia #IndiaKaGame #AsianGames #TeamIndia… pic.twitter.com/lrpuJKM1t5
— Hockey India (@TheHockeyIndia) October 4, 2023
ಭಾರತವು ತನ್ನ ಎಲ್ಲಾ ಗುಂಪು ಪಂದ್ಯಗಳನ್ನು ಗೆದ್ದ ನಂತರ ಪೂಲ್ ಎ ಅಗ್ರಸ್ಥಾನದಲ್ಲಿತ್ತು. ದಕ್ಷಿಣ ಕೊರಿಯಾ ಪೂಲ್ ಬಿ ರನ್ನರ್ ಅಪ್ ಆಗಿ ಕೊನೆಗೊಂಡಿತು. ಪುರುಷರ ಎಫ್‌ಐಎಚ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತವು ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಿತು. ಮೊದಲ ಐದನೇ ನಿಮಿಷಕ್ಕೆ ಹಾರ್ದಿಕ್ ಸಿಂಗ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 11ನೇ ನಿಮಿಷದಲ್ಲಿ ಚಾಣಕ್ಯ ನಡೆಯಿಂದ ಮಂದೀಪ್ ಸಿಂಗ್ ಇನ್ನೊಂದು ಗೋಲನ್ನು ಪಡೆದುಕೊಂಡರು. ಮೊದಲ ಕ್ವಾರ್ಟರ್ ಅಂತ್ಯಗೊಳ್ಳುವ ಮೊದಲು ಲಲಿತ್ ಕುಮಾರ್ ಉಪಾಧ್ಯಾಯ ಭಾರತದ ಖಾತೆಗೆ ಮತ್ತೊಂದನ್ನು ಸೇರಿಸಿದರು.
ಎರಡನೇ ಕ್ವಾರ್ಟರ್ ಆರಂಭದಲ್ಲಿ ಕೊರಿಯಾದ ಜಂಗ್ ಮಂಜೇ ಸತತ ಎರಡು ಗೋಲು ಗಳಿಸಿದರು. ಜಂಗ್ ಮಂಜೇ ಪೆನಾಲ್ಟಿ ಕಾರ್ನರ್ನ್ನು ಯಶಸ್ವಿಯಾಗಿ ಗೋಲ್ ಮಾಡಿದರು. ಅಮಿತ್ ರೋಹಿದಾಸ್ ಪೆನಾಲ್ಟಿ ಕಾರ್ನರ್‌ನಿಂದ ಡ್ರ್ಯಾಗ್ ಫ್ಲಿಕ್ ಮಾಡುವ ಮೂಲಕ ಭಾರತಕ್ಕೆ ನಾಲ್ಕನೇ ಗೋಲು ಹೊಡೆದರು. ವಿರಾಮದ ವೇಳೆಗೆ ಭಾರತ 4-2ರ ಮುನ್ನಡೆ ಪಡೆದುಕೊಂಡಿತ್ತು.
ವಿರಾಮದ ನಂತರ ಉಭಯ ತಂಡಗಳಿಂದ ಪ್ರಬಲ ಪೈಪೋಟಿ ಕಂಡುಬಂತು. ಭಾರತದ ಪ್ರಾಬಲ್ಯದ ಹೊರತಾಗಿಯೂ, ದಕ್ಷಿಣ ಕೊರಿಯಾದ ಜಂಗ್ ಮಂಜೇ ಮೂರನೇ ಗೋಲ್ ಗಳಿಸಿ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ಗಳಿಸಿದರು. ಪಂದ್ಯ ಮುಕ್ತಾಯಕ್ಕೆ ಇನ್ನು 6 ನಿಮಿಷ ಬಾಕಿ ಇದ್ದಾಗ ಭಾರತದ ಅಭಿಷೇಕ್ ಐದನೇ ಗೋಲ್ ಗಳಿಸಿ ಅಂಕದ ಅಂತರವನ್ನು ಹೆಚ್ಚಿಸಿ ಟೈ ಆಗದಂತೆ ನೋಡಿಕೊಂಡರು. ಸಮಯದ ಮುಕ್ತಾಯಕ್ಕೆ ಭಾರತ 5-3 ರಿಂದ ಮುನ್ನಡೆ ಸಾಧಿಸಿ ಸೋಲಿಲ್ಲದ ಸರದಾರನಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಇದನ್ನೂ ಓದಿ: ಏಷ್ಯನ್ ಗೇಮ್ಸ್, ಜಾವೆಲಿನ್ ಥ್ರೋ: ನೀರಜ್ ಚೋಪ್ರಾಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್