ETV Bharat / sports

ಏಷ್ಯನ್‌ ಗೇಮ್ಸ್‌: 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತಕ್ಕೆ ದಾಖಲೆಯ ಚಿನ್ನ! - ಭಾರತಕ್ಕೆ ಚಿನ್ನ ಗೆದ್ದಿದ್ದಾರೆ

Asian Games 2023: ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದುಕೊಂಡಿದೆ.

India bags first gold  first gold in this edition of Asian Games  Asian Games  Asian Games 2023  ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಶೂಟರ್​ಗಳು  ನ್ಯಾಶನಲ್​ ರೆಕಾರ್ಡ್​ ಧೂಳಿಪಟ  ಭಾರತ 19ನೇ ಏಷ್ಯನ್​ ಗೇಮ್ಸ್​ನ ಮೊದಲ ಚಿನ್ನ  ಕಂಚಿನ ಪದಕ  ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ  ಭಾರತಕ್ಕೆ ಚಿನ್ನ ಗೆದ್ದಿದ್ದಾರೆ  ಪುರುಷರ 10 ಮೀಟರ್ ಏರ್ ರೈಫಲ್‌ನ ವಿಶ್ವದಾಖಲೆ
ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಶೂಟರ್​ಗಳು! ನ್ಯಾಶನಲ್​ ರೆಕಾರ್ಡ್​ ಧೂಳಿಪಟ!
author img

By ETV Bharat Karnataka Team

Published : Sep 25, 2023, 8:41 AM IST

Updated : Sep 25, 2023, 8:56 AM IST

ಹ್ಯಾಂಗ್‌ಝೌ (ಚೀನಾ): ಭಾರತದ ಪುರುಷರ 10 ಮೀಟರ್ ಏರ್ ರೈಫಲ್ ತಂಡವು ವಿಶ್ವದಾಖಲೆಯೊಂದಿಗೆ ಪ್ರಸ್ತುತ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಚಿನ್ನ ಸಂಪಾದಿಸಿತು. ರುದ್ರಾಂಕ್ಷ್ ಪಾಟೀಲ್, ಐಶ್ವರಿ ತೋಮರ್ ಮತ್ತು ದಿವ್ಯಾಂಶ್ ಪನ್ವಾರ್ ಚಿನ್ನಕ್ಕೆ ಗುರಿಯಿಟ್ಟ ಸ್ಪರ್ಧಿಗಳು. ಈವೆಂಟ್‌ನಲ್ಲಿ ಈ ಮೂವರು 1893.7 ಪಾಯಿಂಟ್‌ ಗಳಿಸಿದರು. ದಕ್ಷಿಣ ಕೊರಿಯಾ ಬೆಳ್ಳಿ ಹಾಗೂ ಚೀನಾ ಕಂಚು ಜಯಿಸಿತು.

  • 𝓢𝓱𝓸𝓸𝓽𝓲𝓷𝓰 𝓽𝓱𝓮𝓲𝓻 𝔀𝓪𝔂 𝓽𝓸 𝓽𝓱𝓮 𝓽𝓸𝓹! 🥇🇮🇳- 𝟏𝐬𝐭 𝐆𝐨𝐥𝐝 𝐟𝐨𝐫 𝐈𝐧𝐝𝐢𝐚⚡🤩@RudrankkshP, @DivyanshSinghP7, and Aishwary Pratap Tomar have hit the bullseye and secured the 1️⃣st Gold for India in the 10m Air Rifle Men's Team event at the #AsianGames2022.… pic.twitter.com/wQbtEYX2CQ

    — SAI Media (@Media_SAI) September 25, 2023 " class="align-text-top noRightClick twitterSection" data=" ">

ಇದೇ ವೇಳೆ, ಭಾರತ ತಂಡ 10 ಮೀಟರ್ ಏರ್ ರೈಫಲ್‌ನ ವಿಶ್ವದಾಖಲೆ ನಿರ್ಮಿಸಿತು. ಕಳೆದ ತಿಂಗಳು ಚೀನಿ ಸ್ಪರ್ಧಿಗಳ ತಂಡ 1893.3 ಅಂಕ ಗಳಿಸಿತ್ತು. ಇದೀಗ ಭಾರತ 1893.7 ಪಾಯಿಂಟ್‌ ಗಳಿಕೆಯೊಂದಿಗೆ ಈ ದಾಖಲೆ ಅಳಿಸಿ ಹಾಕಿದೆ.

ರೋಯಿಂಗ್‌ನಲ್ಲಿ ಕಂಚು: ರೋಯಿಂಗ್​ನಲ್ಲಿ ಭಾರತಕ್ಕೆ ಇಂದು ಮತ್ತೊಂದು ಪದಕ ಬಂದಿದೆ. ಪುರುಷರ 4ನೇ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ ಕಂಚು ಗೆದ್ದರು.

ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್‌ನಲ್ಲಿ ಭಾರತದ ಬಲರಾಜ್ ಪನ್ವಾರ್ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ಈ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಪಡೆದರು. ಚೀನಾದ ಲಿಯಾಂಗ್ ಚಿನ್ನ ಗೆದ್ದರೆ, ಜಪಾನ್‌ನ ರ್ಯುಟಾ ಅವರು ಬೆಳ್ಳಿ ಮತ್ತು ಹಾಂಕಾಂಗ್‌ನ ಚುನ್ ಮೂರನೇ ಸ್ಥಾನ ಪಡೆದರು.

ರಿಲೆಯಲ್ಲಿ ಫೈನಲ್​ ತಲುಪಿದ ವನಿತೆಯರು: ಮಹಿಳೆಯರ 4x100 ಮೀ. ಫ್ರೀಸ್ಟೈಲ್ ರಿಲೇ ಹೀಟ್ 2 ರಲ್ಲಿ 3:53.80 ರ ನಂತರ ಫೈನಲ್‌ಗೆ ತಲುಪಿತು. 3:53.80 ರ ಅದ್ಭುತ ಸಮಯದೊಂದಿಗೆ ಶಿವಾಂಗಿ ಶರ್ಮಾ, ದಿನಿಧಿ ದೇಸಿಂಗು, ಮಾನ ಪಟೇಲ್ ಮತ್ತು ಜಾನ್ವಿ ಚೌಧರಿ ತಂಡವು ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿತು.

ಇದನ್ನೂ ಓದಿ: Asian Games 2023: ಚೆಸ್​ನಲ್ಲಿ ಗೆಲುವಿನ ಆರಂಭ ಪಡೆದ ಭಾರತ.. ಈಜಿನಲ್ಲಿ ಶ್ರೀಹರಿ ನಟರಾಜ್​ಗೆ ಕೈತಪ್ಪಿದ ಪದಕ

Last Updated : Sep 25, 2023, 8:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.