ನವದೆಹಲಿ: 75 ಕೆ.ಜಿ ವಿಭಾಗದ ಬಾಕ್ಸಿಂಗ್ ಪಂದ್ಯದಲ್ಲಿ ಭಾರತದ ಪೂಜಾ ರಾಣಿ ಸೆಮಿಫೈನಲ್ನಲ್ಲಿ ಲಿ ಕ್ವಿನ್ ಅವರಿಗೆ ಮಣಿಯುವ ಮೂಲಕ ಕಂಚಿಗೆ ತೃಪ್ತಿ ಪಡಬೇಕಾಯಿತು.
ಇದಕ್ಕೂ ಮುನ್ನಾ ದಿನ ಸಿಮ್ರಾನ್ ಜಿತ್ ಕೌರ್, ಏಷ್ಯನ್ ಬಾಕ್ಸಿಂಗ್ ಒಲಿಂಪಿಕ್ನಲ್ಲಿ ಫೈನಲ್ ತಲುಪುವ ಮೂಲಕ ಬೆಳ್ಳಿ ಪದಕವನ್ನ ಕನ್ಫರ್ಮ್ ಮಾಡಿಕೊಂಡಿದ್ದಾರೆ.
ಸೆಮಿಫೈನಲ್ನಲ್ಲಿ ಕೌರ್, ಚೀನೀಸ್ ತೈಪೆದ ಶೀಹ್ ಯಿ ವು ಅವರನ್ನ ಮಣಿಸುವ ಮೂಲಕ ಫೈನಲ್ಗೇರಿದ್ದಾರೆ. ಇನ್ನು ಆರು ಬಾರಿಯ ವಿಶ್ವ ಚಾಂಪಿಯನ್ ಮೆರಿ ಕೋಮ್ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಕಂಚಿಗೆ ಸಮಾಧಾನಗೊಂಡಿದ್ದಾರೆ.
ಕೋಮ್ ಚೀನಾದ ಯಾನ್ ಚಾಂಗ್ ವಿರುದ್ಧ ಸೋಲು ಅನುಭವಿಸಿದರು. ವಿಕಾಸ್ ಕೃಷ್ಣನ್ ಏಷ್ಯನ್ ಬಾಕ್ಸಿಂಗ್ ಒಲಿಂಪಿಕ್ ಕ್ವಾಲಿಫೈಯರ್ಸ್ನ ಫೈನಲ್ ತಲುಪಿದ್ದಾರೆ. 69 ಕೆ.ಜಿ.ವಿಭಾಗದಲ್ಲಿ ಕಜಿಕಿಸ್ತಾನದ ಜುಸ್ಪೋವ್ ಅಲ್ಬಿಖಾನ್ ಅವರನ್ನ ಮಣಿಸಿ ಮುಂದಿನ ಸುತ್ತಿಗೆ ಆಯ್ಕೆ ಆಗಿದ್ದಾರೆ.