ETV Bharat / sports

ಏಷ್ಯನ್ ಯೂತ್ & ಜೂನಿಯರ್ ಬಾಕ್ಸಿಂಗ್: ಫೈನಲ್​ಗೆ ಗೌರವ್ ಸೈನಿ, ಸೆಮಿಗೆ ಮತ್ತೆ ಮೂವರು

author img

By

Published : Aug 23, 2021, 10:23 PM IST

ಹರಿಯಾಣದ ಗೌರವ್​ ಇಂದಿನ ಪಂದ್ಯದಲ್ಲಿ ಎದುರಾಳಿ ಬಾಕ್ಸರ್​ನಿಂದ ಪ್ರತಿರೋಧ ಎದುರಾದರೂ ತಮ್ಮ ಬಲಿಷ್ಠ ಪಂಚ್​ಗಳಿಂದ 4-1ರಲ್ಲಿ ಗೆಲುವು ಸಾಧಿಸಿದರು.

ಏಷ್ಯನ್ ಯೂತ್ & ಜೂನಿಯರ್ ಬಾಕ್ಸಿಂಗ್
ಏಷ್ಯನ್ ಯೂತ್ & ಜೂನಿಯರ್ ಬಾಕ್ಸಿಂಗ್

ನವದೆಹಲಿ: ಭಾರತದ ಗೌರವ್​ ಸೈನಿ 70 ಕೆಜಿ ವಿಭಾಗದ ಜೂನಿಯರ್​ ಬಾಯ್ಸ್​ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದಾರೆ. ಅವರು ಎಎಸ್​ಬಿಸಿ ಏಷ್ಯನ್ ಯೂತ್​ & ಜೂನಿಯರ್​ ಬಾಕ್ಸಿಂಗ್ ಚಾಂಪಿಯನ್​ಶಿಪ್ಸ್​ನಲ್ಲಿ ಸೋಮವಾರ ಕಿರ್ಗಿಸ್ತಾನದ ಜಾಕಿರೋವ್ ಮುಖಮಾಡಾಜಿಜ್ ಅವರನ್ನು ಮಣಿಸಿದರು.

ಹರಿಯಾಣದ ಗೌರವ್​ ಇಂದಿನ ಪಂದ್ಯದಲ್ಲಿ ಎದುರಾಳಿ ಬಾಕ್ಸರ್​ನಿಂದ ಪ್ರತಿರೋಧ ಎದುರಾದರೂ ತಮ್ಮ ಬಲಿಷ್ಠ ಪಂಚ್​ಗಳಿಂದ 4-1ರಲ್ಲಿ ಗೆಲುವು ಸಾಧಿಸಿದರು. ಇವರಷ್ಟೇ ಅಲ್ಲದೆ 3 ಬಾಕ್ಸರ್​ಗಳು ಸೆಮಿಫೈನಲ್ ಪ್ರವೇಶಿಸುವ ಮೂಲಕ ಮತ್ತೆ ಪದಕಗಳನ್ನು ಖಚಿತಪಡಿಸಿದರು.

54 ಕೆಜಿ ವಿಭಾಗದಲ್ಲಿ ಆಶಿಷ್​ ತಜಿಕಿಸ್ತಾನ ರೆಹ್ಮನೊವ್ ಜಾಫರ್ ವಿರುದ್ಧ 5-0ಯಲ್ಲಿ, ಅನ್ಶುಲ್​ 57 ಕೆಜಿ ವಿಭಾಗದಲ್ಲಿ ಸ್ಥಳೀಯ ಬಾಕ್ಸರ್​ ಮನ್ಸೂರ್ ಖಲೀದ್​ ವಿರುದ್ಧ ಗೆಲುವು ಸಾಧಿಸಿದರು. ಅನ್ಶುಲ್​ ನಿರಂತರ ದಾಳಿ ನಡೆಸಿದ್ದರಿಂದ ಎದುರಾಳಿ ಚೇತರಿಸಿಕೊಳ್ಳುವಲ್ಲಿ ವಿಫಲರಾದ ಕಾರಣ ರೆಫ್ರಿ ಭಾರತೀಯನನ್ನು ವಿಜೇತರೆಂದು ಘೋಷಿಸಿದರು.​

81+ ಕೆಜಿ ವಿಭಾಗದಲ್ಲಿ ಭರತ್​ ಕಠಿಣ ಪೈಪೋಟಿಯ ನಡುವೆಯೂ 3-2ರಲ್ಲಿ ಉಜ್ಬೆಕಿಸ್ತಾನದ ಕೆನೆಸ್ಬೇವ್ ಅಯ್ನಾಜರ್ ಟೋಲಿಬೇ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು. 46 ಕೆಜಿ ವಿಭಾಗದಲ್ಲಿ ಕ್ರಿಸ್​ ಪಾಲ್, 63 ಕೆಜಿ ವಿಭಾಗದಲ್ಲಿ ಪ್ರೀತ್ ಮಲಿಕ್​ 8ರ ಘಟ್ಟದಲ್ಲಿ ಸೋಲು ಕಂಡರು.

ಇದೇ ಮೊದಲ ಬಾರಿಗೆ ಜೂನಿಯರ್ ಮತ್ತು ವಯಸ್ಸಿನಾಧಾರಿತ ಬಾಕ್ಸರ್​ಗಳು ಒಂದೇ ಬಾರಿಗೆ ಏಷ್ಯನ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ್ದಾರೆ. ಈಗಾಗಾಲೆ ಈ ಯುವ ಬಾಕ್ಸರ್​ಗಳು ಭಾರತಕ್ಕೆ 25ಕ್ಕೂ ಹೆಚ್ಚು ಪದಕಗಳನ್ನು ಖಚಿತಪಡಿಸಿದ್ದಾರೆ.

ಇದನ್ನು ಓದಿ:ಗಾಯದ ಕಾರಣ ವಿಶ್ವಚಾಂಪಿಯನ್​ಶಿಪ್​​ನಿಂದ​ ಬಜರಂಗ್ ಪೂನಿಯಾ ದೂರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.