ನ್ಯೂಯಾರ್ಕ್: ಅಮೆರಿಕ ಓಪನ್‌ನಲ್ಲಿ ಉತ್ತಮ ಪ್ರದರ್ಶನ ನೀಡುಯತ್ತಿರುವ ಅರೀನಾ ಸಬಲೆಂಕಾ 16ನೇ ಸುತ್ತಿಗೆ ಸ್ಥಾನ ಪಡೆದಿದ್ದಾರೆ. ಯುಎಸ್ ಓಪನ್ ಮುಗಿದ ನಂತರ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗುವ ಶ್ರೇಯಾಂಕದಲ್ಲಿ ಅರೀನಾ ಸಬಲೆಂಕಾ ಮಹಿಳಾ ಸಿಂಗಲ್ಸ್ನಲ್ಲಿ ವಿಶ್ವ ನಂ.1 ಆಟಗಾರ್ತಿ ಆಗಲಿದ್ದಾರೆ. ಇಗಾ ಸ್ವಿಯಾಟೆಕ್ ಅವರನ್ನು ಹಿಂದಿಕ್ಕೆ ಅಗ್ರ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ.
-
Welcome to the number 1 spot, @SabalenkaA 👑 pic.twitter.com/24PVMwx9lq
— wta (@WTA) September 4, 2023 " class="align-text-top noRightClick twitterSection" data="
">Welcome to the number 1 spot, @SabalenkaA 👑 pic.twitter.com/24PVMwx9lq
— wta (@WTA) September 4, 2023Welcome to the number 1 spot, @SabalenkaA 👑 pic.twitter.com/24PVMwx9lq
— wta (@WTA) September 4, 2023
25 ವರ್ಷ ವಯಸ್ಸಿನ ಅರೀನಾ ಸಬಲೆಂಕಾ ವುಮೆನ್ಸ್ ಟೆನಿಸ್ ಅಸೋಸಿಯೇಶನ್ (ಡಬ್ಲ್ಯುಟಿಎ) ವಿಶ್ವ ನಂ.1 ಶ್ರೇಯಾಂಕವನ್ನು ವಶಪಡಿಸಿಕೊಂಡ 29 ನೇ ಮಹಿಳೆಯಾಗಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ನಂ.1 ಸ್ಥಾನಗಳನ್ನು ಅಲಂಕರಿಸಿದ ಎಂಟನೇ ಆಟಗಾರ್ತಿಯಾಗಿದ್ದಾರೆ. ಫೆಬ್ರವರಿ 2021 ರಲ್ಲಿ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಂಕರಿಸಿದ್ದರು.
ವಿಶ್ವ ನಂ.1 ಶ್ರೇಯಾಂಕೆತೆ ಇಗಾ ಸ್ವಿಯಾಟೆಕ್ ಅಮೆರಿಕನ್ ಓಪನ್‌ನಲ್ಲಿ ಜೆಲೆನಾ ಒಸ್ಟಾಪೆಂಕೊ ಅವರ ವಿರುದ್ಧ 16ನೆ ಸುತ್ತಿನಲ್ಲಿ ಸೋಲು ಕಂಡಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಗಾ ಸ್ವಿಯಾಟೆಕ್ ಸೋಲು ಕಾಣುತ್ತಿದ್ದಂತೆ ನಂ.1 ಸ್ಥಾನದಿಂದ ಕುಸಿದಿದ್ದಾರೆ. ಸತತ 75 ವಾರಗಳ ಕಾಲ ಅಗ್ರಸ್ಥಾನ ಕಾಯ್ದುಕೊಂಡಿದ್ದ ಇಗಾ ಎರಡನೇ ಸ್ಥಾನಕ್ಕೆ ಕುಸಿಯಲಿದ್ದಾರೆ. 16ನೇ ಸುತ್ತಿನಲ್ಲಿ ಡೇರಿಯಾ ಕಸಟ್ಕಿನಾ ಅವರನ್ನು ನಾಳೆ (ಮಂಗಳವಾರ) ಅರೀನಾ ಸಬಲೆಂಕಾ ಎದುರಿಸಲಿದ್ದಾರೆ. ಈ ಪಂದ್ಯ ಗೆದ್ದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲಿದ್ದಾರೆ.
"ಡಬ್ಲ್ಯುಟಿಎ ವಿಶ್ವ ನಂ.1 ಸಿಂಗಲ್ಸ್ ಶ್ರೇಯಾಂಕ ತಲುಪುವುದು ನಾನು ಟೆನಿಸ್ ಆಡಲು ಪ್ರಾರಂಭಿಸಿದಾಗ ಕನಸು ಕಂಡಿದ್ದೆ. 2023 ನನಗೆ ಮತ್ತು ನನ್ನ ತಂಡಕ್ಕೆ ಅಂತಹ ಅದ್ಭುತ ವರ್ಷವಾಗಿದೆ. ನಮ್ಮ ಎಲ್ಲ ಕಠಿಣ ಪರಿಶ್ರಮಕ್ಕೆ ಪರಿಪೂರ್ಣ ಪ್ರತಿಫಲ ಸಿಕ್ಕಿದೆ. ವುಮೆನ್ಸ್ ಟೆನಿಸ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸ ತಂದಿದೆ" ಎಂದು ಮಾಧ್ಯಮಗಳ ಜೊತೆ ಸಂತಸವನ್ನು ಹಂಚಿಕೊಂಡಿದ್ದಾರೆ.
ಸಬಲೆಂಕಾ ಅವರು ವುಮೆನ್ಸ್ ಟೆನಿಸ್ ಅಸೋಸಿಯೇಶನ್ನ (ಡಬ್ಲ್ಯೂಟಿಎ) ಟೂರ್‌ನ ಮೂರು ಪ್ರಶಸ್ತಿಗಳನ್ನು ಗೆದಿದ್ದಾರೆ. ಇತ್ತೀಚೆಗಷ್ಟೇ ಡಬ್ಲ್ಯೂಟಿಎ 1000 ಮ್ಯಾಡ್ರಿಡ್ ಓಪನ್ ಮತ್ತು ಡಬ್ಲ್ಯೂಟಿಎ 500 ಅಡಿಲೇಡ್ ಇಂಟರ್‌ನ್ಯಾಷನಲ್ ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಅವರು ಈ ವರ್ಷ ಡಬ್ಲ್ಯೂಟಿಎ 1000 ಇಂಡಿಯನ್ ವೆಲ್ಸ್ ಮತ್ತು ಡಬ್ಲ್ಯೂಟಿಎ 500 ಟೆನಿಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಫೈನಲ್‌ಗಳನ್ನು ತಲುಪಿದ್ದಾರೆ. ರೋಲ್ಯಾಂಡ್-ಗ್ಯಾರೋಸ್ ಮತ್ತು ವಿಂಬಲ್ಡನ್ ಸೆಮಿಫೈನಲ್‌ಗಳನ್ನು ತಲುಪಿದ್ದಾರೆ.
ಇದನ್ನೂ ಓದಿ: ಮೋದಿ ನಮ್ಮೊಂದಿಗೆ ಸಾಮಾನ್ಯರಂತೆ ನಡೆದುಕೊಂಡರು, ಅವರೊಂದಿಗಿನ ಸಂವಹನ ಖುಷಿಕೊಟ್ಟಿತು: ಪ್ರಜ್ಞಾನಂದ