ETV Bharat / sports

ನೀರಜ್​ ಚೋಪ್ರಾ ಗಾಯದ ಲಾಭ ಪಡೆದ ಅರ್ಷದ್​; ಕಾಮನ್​​ವೆಲ್ತ್​ನಲ್ಲಿ ಚಿನ್ನ ಗೆದ್ದ ಪಾಕ್​​​ ಅಥ್ಲೀಟ್

ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಪಾಕಿಸ್ತಾನದ ಜಾವೆಲಿನ್​ ಆಟಗಾರ ಅರ್ಷದ್ ನದೀಮ್​ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್​​ನಲ್ಲಿ ದಾಖಲೆಯ 90.18 ಮೀಟರ್ ದೂರಕ್ಕೆ ಜಾವೆಲಿನ್​ ಎಸೆದಿರುವ ಅವರು ಹೊಸ ದಾಖಲೆಯನ್ನೂ ಬರೆದರು.

Arshad Nadeem win Gold
Arshad Nadeem win Gold
author img

By

Published : Aug 8, 2022, 6:10 PM IST

ಬರ್ಮಿಂಗ್​ಹ್ಯಾಮ್​​: ಈ ಸಲದ ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ ಜಾವೆಲಿನ್ ಸ್ಟಾರ್, ಚಿನ್ನದ ಹುಡುಗ ನೀರಜ್ ಚೋಪ್ರಾ ಭಾಗಿಯಾಗಿರಲಿಲ್ಲ. ಇದರ ಲಾಭ ಪಡೆದುಕೊಳ್ಳುವಲ್ಲಿ ಪಾಕಿಸ್ತಾನದ ಜಾವೆಲಿನ್​ ಎಸೆತಗಾರ ಅರ್ಷದ್ ನದೀಮ್ ಯಶಸ್ವಿಯಾಗಿದ್ದಾರೆ. ಸ್ಪರ್ಧೆಯ ಫೈನಲ್​ನಲ್ಲಿ ಇಂದು ದಾಖಲೆಯ 90.18 ಮೀಟರ್ ಭರ್ಜಿ ಎಸೆಯುವ ಮೂಲಕ ಅವರು ಸ್ವರ್ಣ ಪದಕ ಗೆದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ತೊಡೆಸಂದು ಗಾಯದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದಿದ್ದಾರೆ. ಅವರ ನಿರ್ಗಮನದ ಲಾಭ ಪಡೆದ ಅರ್ಷದ್ ನದೀಮ್ ಬರ್ಮಿಂಗ್ ಹ್ಯಾಮ್​ನಲ್ಲಿ ಪದಕ ಕೊಳ್ಳೆ ಹೊಡೆದಿದ್ದಾರೆ.

  • Wow!!💫 That's incredible throw from Arshad Nadeem, Pakistan🇵🇰🌟

    Even he got trolled for praising Neeraj Chopra. He always used tell that his Ideal and Hero is *Neeraj Chopra*. Such a champion "Arshad Nadeem" ❤️.

    Now he become the true Ekalavya🪄 pic.twitter.com/PjZ4iVSu1a

    — Adarsh P Cherugad🇮🇳 (@AdarshPCherugad) August 7, 2022 " class="align-text-top noRightClick twitterSection" data=" ">

ನೀರಜ್ ಚೋಪ್ರಾ ದಾಖಲೆ ಬ್ರೇಕ್​: ಕಾಮನ್​​ವೆಲ್ತ್ ಗೇಮ್ಸ್​ನಲ್ಲಿ ಅರ್ಷದ್ ನದೀಮ್ ದಾಖಲೆಯ 90.18 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಕೊನೆಗೊಂಡ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ನೀರಜ್ ಚೋಪ್ರಾ 88.13 ಮೀಟರ್​ ದೂರ ಜಾವೆಲಿನ್ ಎಸೆದಿದ್ದರು. ಈ ಹಿಂದೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅರ್ಷದ್ ನದೀಮ್ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಇದಕ್ಕೂ ಮೊದಲು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇಬ್ಬರೂ ಮುಖಾಮುಖಿಯಾದಾಗ ಅರ್ಷದ್ ಅಲ್ಲಿಯೂ 5 ನೇ ಸ್ಥಾನ ಗಳಿಸಿದ್ದರು. ಆದರೆ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ; ಬ್ಯಾಡ್ಮಿಂಟನ್​​ನಲ್ಲಿ ಚಿನ್ನ ಗೆದ್ದ ಲಕ್ಷ್ಯಸೇನ್​

ನೀರಜ್​-ನದೀಮ್ ಒಳ್ಳೆಯ ಸ್ನೇಹಿತರು: ನೀರಜ್ ಹಾಗೂ ನದೀಮ್ ಒಳ್ಳೆಯ ಸ್ನೇಹಿತರೆಂಬುದು ಗೊತ್ತಿರುವ ವಿಚಾರ. ಟೋಕಿಯೋ ಒಲಿಂಪಿಕ್​ನಲ್ಲಿ ಈ ಅಥ್ಲೀಟ್​​ಗಳು ಕೆಲಹೊತ್ತು ಒಟ್ಟಿಗೆ ಮಾತನಾಡಿರುವ ವಿಡಿಯೋ ಗಮನ ಸೆಳೆದಿತ್ತು. ನಂತರ ನದೀಮ್‌ ಗೆಳೆತನದ ಬಗ್ಗೆ ಪ್ರತಿಕ್ರಿಯಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.