ETV Bharat / sports

Archery World Cup Final: ಆರ್ಚರಿ ವಿಶ್ವಕಪ್​ ಫೈನಲ್​.. ತುರುಸಿನ ಹಣಾಹಣಿಯಲ್ಲಿ ಬೆಳ್ಳಿಗೆದ್ದ ಪ್ರಥಮೇಶ್​ - ETV Bharath Kannada news

ಆರ್ಚರಿ ವಿಶ್ವಕಪ್​ ಫೈನಲ್​​ನಲ್ಲಿ ಪ್ರಥಮೇಶ್​ ಪುರುಷರ ವಿಭಾಗದ ಆರ್ಚರಿ ಕಾಂಪೌಂಡ್ ಸ್ಪರ್ಧೆ ಬೆಳ್ಳಿ ಗೆದ್ದಿದ್ದಾರೆ.

Archery World Cup Final
Archery World Cup Final
author img

By ETV Bharat Karnataka Team

Published : Sep 10, 2023, 7:39 PM IST

ಹೆರ್ಮೊಸಿಲ್ಲೊ (ಮೆಕ್ಸಿಕೊ): ಆರ್ಚರಿ ವಿಶ್ವಕಪ್​ ಫೈನಲ್ 2023ರಲ್ಲಿ ಭಾರತದ ಆಟಗಾರ ಪ್ರಥಮೇಶ್​ ಬೆಳ್ಳಿ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ವಿಶ್ವಕಪ್​ ಪಂದ್ಯದ ಪುರುಷರ ವಿಭಾಗದ ಆರ್ಚರಿ ಕಾಂಪೌಂಡ್ ಸ್ಪರ್ಧೆಯಲ್ಲಿ ಪ್ರಥಮೇಶ್​​ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವಲ್ಲಿ ಎಡವಿದರು. ಇದರಿಂದ ಫೈನಲ್​ನಲ್ಲಿ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಇದು ಪ್ರಥಮೇಶ್​ ಅವರ ಚೊಚ್ಚಲ ವಿಶ್ವಕಪ್​ ಪಂದ್ಯವಾಗಿದೆ.

ಡೆನ್ಮಾರ್ಕ್‌ನ ಮಥಿಯಾಸ್ ಫುಲ್ಲರ್ಟನ್ ವಿರುದ್ಧ ರೋಚಕ ಹಣಾಹಣಿಯಲ್ಲಿ ಐದು ಸೆಟ್‌ಗಳ ನಂತರ 148-148 ಅಂಕದಿಂದ ಟೈನೊಂದಿಗೆ ಮುಕ್ತಾಯಗೊಂಡಿತು. ಇದಾದ ನಂತರ ನಡೆದ ಟೈ ಬ್ರೇಕರ್​​ನಲ್ಲೂ ಇಬ್ಬರು 10 ಅಂಕವನ್ನು ಗಳಿಸಿದರು. ಆದರೆ ಫುಲ್ಲರ್ಟನ್ ಅವರು ವೃತ್ತದ ಮಧ್ಯ ಕೇಂದ್ರವನ್ನು ಛೇದಿಸಿದ್ದರಿಂದ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಕ್ವಾರ್ಟರ್‌ಫೈನಲ್‌ನಲ್ಲಿ ಜಾವ್ಕರ್‌ ವಿಶ್ವದ ನಂ.5 ಇಟಾಲಿಯನ್ ಆಟಗಾರ ಮಿಗುಯೆಲ್ ಬೆಸೆರಾ ವಿರುದ್ಧ 149-141 ಅಂಕಗಳ ಭರ್ಜರಿ ಜಯ ದಾಖಲಿಸಿದರು. ನಂತರ ಅವರು ವಿಶ್ವ ನಂ. 1 ನೆದರ್ಲೆಂಡ್ಸ್‌ನ ಮೈಕ್ ಷ್ಲೋಸರ್ ವಿರುದ್ಧ ಪರಿಪೂರ್ಣ 150 ರನ್ ಗಳಿಸಿ, ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದರು. ಜಾವ್ಕರ್ ವಿಶ್ವದ ನಂ 1 ಮತ್ತು ಹಾಲಿ ಚಾಂಪಿಯನ್ ಮೈಕ್ ಷ್ಲೋಸರ್ ಅವರನ್ನು ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಸೋಲಿಸಿದ್ದರು. ಹ್ಯುಂಡೈ ಆರ್ಚರಿ ವಿಶ್ವಕಪ್ ಪ್ರವಾಸದಲ್ಲಿ ಭಾರತೀಯ ಆಟಗಾರ ಪ್ರಥಮೇಶ್ ತನ್ನ ಮೊದಲ ಸೀಸನ್‌ ಆಡಿದ್ದರು. ಇದರಲ್ಲಿ ಶಾಂಘೈ ಸ್ಟೇಜ್ 2 ನಲ್ಲಿ 33 ನೇ ಶ್ರೇಯಾಂಕದೊಂದಿಗೆ ಚಿನ್ನ ಗೆದ್ದಿದ್ದರು.

  • Kudos to @PratmeshJawkar on clinching🥈 at the Archery World Cup Final 🏹 and becoming only the 2nd Indian to win a silver at the World Cup Final.

    Champ, we are delighted by your scintillating performance!

    All the best for the #AsianGames pic.twitter.com/in2ipSxgNg

    — Nisith Pramanik (@NisithPramanik) September 10, 2023 " class="align-text-top noRightClick twitterSection" data=" ">

ಮಹಿಳಾ ಕಂಪೌಂಡ್ ಸ್ಪರ್ಧೆಯಲ್ಲಿ ನಿರಾಸೆ: ಭಾರತವು ಮಹಿಳೆಯರ ಸಂಯುಕ್ತ ವಿಭಾಗದಲ್ಲಿ ಅದಿತಿ ಸ್ವಾಮಿ ಮತ್ತು ಜ್ಯೋತಿ ಸುರೇಖಾ ವೆನ್ನಮ್ ಜೋಡಿಯು ತಮ್ಮ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋಲನುಭವಿಸಿದರು. ವಿಶ್ವಕಪ್ ಹಂತದ ವಿಜೇತೆ ಜ್ಯೋತಿ ಸುರೇಖಾ ವೆನ್ನಮ್ ಅವರು ಆರಂಭಿಕ ಸುತ್ತಿನಲ್ಲಿ ಕೊಲಂಬಿಯಾದ ಹೆವಿವೇಟ್ ಮತ್ತು ಚಾಂಪಿಯನ್ ಸಾರಾ ಲೋಪೆಜ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಐದು ಪಾಯಿಂಟ್‌ಗಳ ಅಂತರದಿಂದ ಮಣಿಯಬೇಕಾಯಿತು.

ರಿಕರ್ವ್ ವಿಭಾಗದಲ್ಲಿ ಭಾರತವನ್ನು ಧೀರಜ್ ಬೊಮ್ಮದೇವರ ಅವರು ಪ್ರತಿನಿಧಿಸಿದ್ದರು. ಅವರು ಕೊರಿಯಾದ ಹೆವಿವೇಯ್ಟ್ ಕಿಮ್ ವೂಜಿನ್ ವಿರುದ್ಧ ಕಠಿಣ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಸೋಲು ಕಂಡಿದ್ದಾರೆ. ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಯಾವುದೇ ಭಾರತೀಯ ಆಟಗಾರ್ತಿ ಸ್ಥಾನ ಗಳಿಸಿಲ್ಲ. ಐವರು ಭಾರತೀಯ ಬಿಲ್ಲುಗಾರರು ವರ್ಷಾಂತ್ಯದ ವಿಶ್ವ ಪ್ರದರ್ಶನಕ್ಕೆ ಅರ್ಹತೆ ಪಡೆದಿರುವುದು ಇದೇ ಮೊದಲ ಬಾರಿಗೆ ಆಗಿದೆ.

ಇದನ್ನೂ ಓದಿ: Kiran George: ಇಂಡೋನೇಷ್ಯಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಕಿರಣ್ ಜಾರ್ಜ್..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.