ಗ್ವಾಟೆಮಾಲಾ ಸಿಟಿ: ದೀಪಿಕಾ ಕುಮಾರಿ, ಅಂಕಿತಾ ಭಕಾತ್ ಮತ್ತು ಕೋಮಲಿಕಾ ಬಾರಿ ಅವರನ್ನು ಒಳಗೊಂಡ ಭಾರತದ ಮಹಿಳಾ ರಿಕರ್ವ್ ತಂಡ ಆರ್ಚರಿ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
-
NEWS. Indian couple Das, Kumari win Hyundai #Archery World Cup stage in Guatemala City 🇮🇳👏https://t.co/UkF71qGrsT #ArcheryWorldCup pic.twitter.com/tr98WCn5gN
— World Archery (@worldarchery) April 25, 2021 " class="align-text-top noRightClick twitterSection" data="
">NEWS. Indian couple Das, Kumari win Hyundai #Archery World Cup stage in Guatemala City 🇮🇳👏https://t.co/UkF71qGrsT #ArcheryWorldCup pic.twitter.com/tr98WCn5gN
— World Archery (@worldarchery) April 25, 2021NEWS. Indian couple Das, Kumari win Hyundai #Archery World Cup stage in Guatemala City 🇮🇳👏https://t.co/UkF71qGrsT #ArcheryWorldCup pic.twitter.com/tr98WCn5gN
— World Archery (@worldarchery) April 25, 2021
ಮಾಜಿ ವಿಶ್ವ ನಂಬರ್ ಒನ್ ಬಿಲ್ಲುಗಾರ್ತಿ ದೀಪಿಕಾ ತಮ್ಮ ವೃತ್ತಿಜೀವನದ ಮೂರನೇ ವೈಯಕ್ತಿಕ ವಿಶ್ವಕಪ್ ಚಿನ್ನ ಪಡೆದರೆ, ಇವರ ಪತಿ ಅತನು ದಾಸ್ ತಮ್ಮ ಮೊದಲ ವಿಶ್ವಕಪ್ ವೈಯಕ್ತಿಕ ಪದಕ (ಕಂಚು) ಸಾಧನೆ ಮಾಡಿದರು.
ಸುಮಾರು ಎರಡು ವರ್ಷಗಳ ನಂತರ ಅಂತರರಾಷ್ಟ್ರೀಯ ಸ್ಪರ್ಧೆಗೆ ಮರಳಿದ ಭಾರತದ ಬಿಲ್ಲುಗಾರಿಕೆ ತಂಡ ಎರಡು ವೈಯಕ್ತಿಕ ಮತ್ತು ಮಹಿಳಾ ರಿಕರ್ವ್ ತಂಡ ಚಿನ್ನ ಗೆದ್ದರು. ಭಾನುವಾರ ನಡೆದ ಕುತೂಹಲಕಾರಿ ಫೈನಲ್‌ನಲ್ಲಿ ಭಾರತೀಯ ಮಹಿಳಾ ತಂಡವು ಮೆಕ್ಸಿಕೊವನ್ನು 5-4 (27-26) ರಿಂದ ಮಣಿಸಿತು.
ಮಿಶ್ರ ಡಬಲ್ಸ್ ಮತ್ತು ಸಿಂಗಲ್ಸ್ನಲ್ಲಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅತನು ದಾಸ್ ಮತ್ತು ದೀಪಿಕಾ ಕುಮಾರಿ ಜೋಡಿ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಆರ್ಚರಿ ವಿಶ್ವಕಪ್ ಮೊದಲ ಹಂತ: ಫೈನಲ್ ಪ್ರವೇಶಿಸಿ ಚಿನ್ನದ ಮೇಲೆ ಕಣ್ಣಿಟ್ಟ ಭಾರತ ಮಹಿಳಾ ತಂಡ