ETV Bharat / sports

ಇತಿಹಾಸ ಬರೆದ ಅನ್ಶು ಮಲಿಕ್.. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಮೊದಲ ಮಹಿಳಾ ಕುಸ್ತಿಪಟು!

author img

By

Published : Oct 7, 2021, 11:17 PM IST

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕುಸ್ತಿಪಟು ಅನ್ಶು ಮಲಿಕ್ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ. ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ದೇಶದ ಮೊದಲ ಮಹಿಳಾ ಕುಸ್ತಿಪಟು ಎಂಬ ಖ್ಯಾತಿಗೆ ಮಲಿಕ್ ಪಾತ್ರಾದರು.

ಅನ್ಶು ಮಲಿಕ್
ಅನ್ಶು ಮಲಿಕ್

ಒಸ್ಲೋ(ನಾರ್ವೆ): ಭಾರತದ ಯುವ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ ಗುರುವಾರ​ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಗೆ ಅನ್ಶು ಮಲಿಕ್ ಪಾತ್ರರಾಗಿದ್ದಾರೆ.

ನಾರ್ವೆಯಲ್ಲಿ ನಡೆದ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ 57 ಕೆಜಿ ವಿಭಾಗದಲ್ಲಿ ಓಲಿಂಪಿಕ್ ಪದಕ ವಿಜೇತೆ ಹೆಲೆನ್ ಮರೋಲಿಸ್ ವಿರುದ್ಧ ಅನ್ಶು ಮಲಿಕ್ 4-1 ಅಂತರದಿಂದ ಸೋಲನುಭವಿಸಿದರು. ಈ ಮೂಲಕ ಬೆಳ್ಳಿ ಪದಕಕ್ಕೆ ಮಲಿಕ್ ಮುತ್ತಿಕ್ಕಿ ದಾಖಲೆ ಬರೆದರು.

ಅಮೆರಿಕದ ಕುಸ್ತಿ ಪಟು ಹೆಲೆನ್ ಮರೋಲಿಸ್ ಅದ್ಭುತ ಪ್ರದರ್ಶನದ ಮೂಲಕ ಚಿನ್ನದ ಪದಕ ಜಯಿಸಿದರು. ಬುಧಬಾರ ನಡೆದ ಸೆಮಿಫೈನಲ್​ನಲ್ಲಿ ಯುರೋಪಿಯನ್​ ಚಾಂಪಿಯನ್​ ಉಕ್ರೇನ್​ನ​ ಸೊಲೊಮಿಯಾ ವಿನ್ನಿಕ್ ಅವರನ್ನು 11-0 ಅಂತರದಲ್ಲಿ ಅನ್ಶು ಮಲಿಕ್ ಮಣಿಸಿ ಫೈನಲ್​ ಪ್ರವೇಶಿಸಿದ್ದರು. ಆ ಮೂಲಕ ಫೈನಲ್​ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ರಚಿಸಿದ್ದರು.

ಏಷ್ಯನ್ ಚಾಂಪಿಯನ್ ಆಗಿರುವ 19 ವರ್ಷ ವಯಸ್ಸಿನ ಅನ್ಶು 2016 ರಿಂದ ಲಕ್ನೋ ರಾಷ್ಟ್ರೀಯ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಓಲಿಂಪಿಕ್​ನಲ್ಲಿ ಅನ್ಶು ಮೊದಲ ಬಾರಿಗೆ ಭಾಗವಹಿಸಿದ್ದರು. ಈ ಮೊದಲು ಎರಡು ಏಷಿಯನ್ ಚಾಂಪಿಯನ್​ಶಿಪ್​ನಲ್ಲಿ ಅನ್ಶು ಮಲಿಕ್ ಚಿನ್ನ ಹಾಗೂ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿದ್ದರು.

(ಇತಿಹಾಸ ಬರೆದ ಕುಸ್ತಿಪಟು ಅನ್ಶು ಮಲಿಕ್.. ವಿಶ್ವಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಿದ ಮೊದಲ ಭಾರತೀಯ ಮಹಿಳೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.