ಭೂಪಾಲ್ : ಇಲ್ಲಿನ ಟಿಟಿ ನಗರ ಕ್ರೀಡಾಂಗಣದಲ್ಲಿ ಬುಧವಾರ ನಡೆದ 20ರ ವಯೋಮಿತಿಯೊಳಗಿನ 10,000 ಮೀಟರ್ ರೇಸ್ವಾಕ್ ಸ್ಪರ್ಧೆಯಲ್ಲಿ ಹರಿಯಾಣದ ಅಮಿತ್ ಖತ್ರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದು, ದಾಖಲೆ ಬರೆದರು.
17 ವರ್ಷದ ಖತ್ರಿ, 40 ನಿಮಿಷ 40.97 ಸೆಕೆಂಡ್ಗಳಲ್ಲಿ ಜಯದ ಗಡಿ ದಾಟಿದರು. ತಮ್ಮದೇ ರಾಜ್ಯದ ಸಹ ಆಟಗಾರ ಪರಮ್‌ದೀಪ್ ಮೊರ್ ಅವರು ಕೇವಲ ಅರ್ಧ ನಿಮಿಷ ಅಂತರದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಆದರೆ, 2018ರಲ್ಲಿ ರಾಂಚಿಯಲ್ಲಿ ನಡೆದ ಅಂಡರ್-20 ರೇಸ್ವಾಕ್ ಸ್ಪರ್ಧೆಯಲ್ಲಿ ಅಕ್ಷದೀಪ್ ಸಿಂಗ್ ಬರೆದ ದಾಖಲೆಯನ್ನು ಮುರಿಯಲು ಕೇವಲ 3.19 ಸೆಕೆಂಡ್ಗಳಿಂದ ವಂಚಿತರಾದರು.
ಅಕ್ಷದೀಪ್ ಅವರು 40 ನಿಮಿಷ 37.78 ಸೆಕೆಂಡ್ಗಳ ಓಡಿ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಇದೀಗ ಅಮಿತ್ ಕಡಿಮೆ ಅವಧಿಯಲ್ಲಿ ಓಡಿದ ಎರಡನೇ ಕ್ರೀಡಾಪಟು ಎಂಬ ಖ್ಯಾತಿಗೆ ಒಳಗಾದರು.