ಬರ್ಮಿಂಗ್‌ಹ್ಯಾಮ್: ಇಲ್ಲಿನ ಯುಟಿಲಿಟಾ ಅರೆನಾದಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ 2022 ರ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್ ಸೋಲು ಕಂಡಿದ್ದಾರೆ.
62 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ ಶ್ರೀಕಾಂತ್ 21-9, 18-21, 19-21 ಸೆಟ್‌ಗಳಿಂದ ಸೋತರು. ಮೊದಲ ಸೆಟ್ನಲ್ಲಿ ಶ್ರೀಕಾಂತ್ ಪ್ರಾಬಲ್ಯ ಸಾಧಿಸಿದ್ದರು. ಬಳಿಕ ಗಿಂಟಿಂಗ್ ಉಳಿದ ಎರಡು ಸೆಟ್ಗಳಲ್ಲಿ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಜಯ ಸಾಧಿಸಿದರು. ಈ ಗೆಲುವಿನಿಂದಾಗಿ ಗಿಂಟಿಂಗ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು.
ಓದಿ: ಕ್ಷಿಪಣಿ ಪರೀಕ್ಷೆಯಲ್ಲಿ ಫೇಲ್..ಸದ್ದು ಮಾಡ್ತಿದೆ ವೈರಲ್ ವಿಡಿಯೋ: ವಿಫಲತೆ ಬಗ್ಗೆ ಪಾಕ್ ಮೌನ!
ಇದಕ್ಕೂ ಮುನ್ನ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಸಯಾಕಾ ತಕಹಶಿ ವಿರುದ್ಧ 21-19, 16-21, 21-17ರಿಂದ ಸೋಲು ಕಂಡಿದ್ದರು. ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜರ್ಮನ್ ಜೋಡಿಯ ವಿರುದ್ಧ ಸಮಗ್ರ ಜಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಜರ್ಮನ್ ಜೋಡಿ ಮಾರ್ಕ್ ಲ್ಯಾಮ್ಸ್‌ಫಸ್ ಮತ್ತು ಮಾರ್ವಿನ್ ಸೀಡೆಲ್ ಅವರನ್ನು ಕೇವಲ 27 ನಿಮಿಷಗಳಲ್ಲಿ ಭಾರತೀಯ ಆಟಗಾರರಾದ ರಾಂಕಿರೆಡ್ಡಿ ಮತ್ತು ಶೆಟ್ಟಿ 21-7, 21-7 ರಿಂದ ಸೋಲಿಸಿದರು. ಷಟ್ಲರ್ ಲಕ್ಷ್ಯ ಸೇನ್ ಕೂಡ ವಿಶ್ವ ನಂ 3 ಆಂಡರ್ಸ್ ಆಂಟೊನ್ಸನ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ ಕೊಟ್ಟರು.
ಓದಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಅಮೆರಿಕ ಪ್ರಜೆ ಬಲಿ: ವರದಿ
ಮತ್ತೊಂದೆಡೆ, ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ರನ್ನು ಜಪಾನ್‌ನ ವಿಶ್ವದ ಎರಡನೇ ಶ್ರೇಯಾಂಕಿತೆ ಅಕಾನೆ ಯಮಗುಚಿ 21-14, 17-21, 21-17, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪರಾಜಯಗೊಳಿಸಿದರು.
ಈ ಪಂದ್ಯಗಳು ಮಾರ್ಚ್ 20 ರಂದು ಇಂಗ್ಲೆಂಡ್‌ನ ಅರೆನಾ ಬರ್ಮಿಂಗ್‌ಹ್ಯಾಮ್‌ನಲ್ಲಿ ಫೈನಲ್‌ನೊಂದಿಗೆ ಮುಕ್ತಾಯಗೊಳ್ಳಲಿದೆ.