ETV Bharat / sports

ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​: ಕಂಚಿನ ಪದಕ ಗೆದ್ದ 21 ವರ್ಷದ ಆಕಾಶ್​ ಕುಮಾರ್​ - ಅಮಿತ್ ಫಂಘಲ್

ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಕಾಶ್​ ಕಜಕಸ್ತಾನದ ಮಖ್ಮೂದ್ ಸಬಿರ್​ಖಾನ್ ವಿರುದ್ಧ 0-5ರಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು. ಆದರೂ ಸೆಮಿಫೈನಲ್ ಪ್ರವೇಶಿಸಿದ್ದರಿಂದ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

Akash won bronze medal at World Boxing Championships
ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್
author img

By

Published : Nov 4, 2021, 8:34 PM IST

Updated : Nov 4, 2021, 10:52 PM IST

ಬೆಲ್​​ಗ್ರೇಡ್​: ಭಾರತದ 21 ವರ್ಷದ ಆಕಾಶ್​ ಕುಮಾರ್​ ಸರ್ಬಿಯಾದ ಬೆಲ್​ಗ್ರೇಡ್​ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಕಾಶ್​ ಕಜಕಸ್ತಾನದ ಮಖ್ಮೂದ್ ಸಬಿರ್​ಖಾನ್ ವಿರುದ್ಧ 0-5ರಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು. ಆದರೂ ಸೆಮಿಫೈನಲ್ ಪ್ರವೇಶಿಸಿದ್ದರಿಂದ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಆಕಾಶ್​ ಕುಮಾರ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ 7ನೇ ಬಾಕ್ಸರ್​ ಎನಿಸಿಕೊಂಡರು. ಈ ಮೊದಲು ವಿಜೇಂದರ್​ ಸಿಂಗ್ 2009ರಲ್ಲಿ (ಕಂಚು), ವಿಕಾಶ್ ಕ್ರಿಷನ್ 2011ರಲ್ಲಿ (ಕಂಚು), ಶಿವಥಾಪ 2015ರಲ್ಲಿ(ಕಂಚು) ಗೌರವ್​ ಬಿಧುರಿ 2017ರಲ್ಲಿ(ಕಂಚು), ಅಮಿತ್ ಪಂಘಲ್​ 2019ರಲ್ಲಿ(ಬೆಳ್ಳಿ) ಮತ್ತು ಮನೀಶ್ ಕೌಶಿಕ್ 2019ರಲ್ಲಿ(ಕಂಚು) ಪದಕ ಗೆದ್ದಿದ್ದರು.

ಹಾಲಿ ರಾಷ್ಟ್ರೀಯ ಚಾಂಪಿಯನ್​ ಆಗಿರುವ ಆಕಾಶ್ ಕಳೆದ ಸೆಪ್ಟೆಂಬರ್​ನಲ್ಲಿ ಶ್ವಾಸಕೋಶ ಕ್ಯಾನ್ಸರ್​ನಿಂದ ತಾಯಿಯನ್ನು ಕಳೆದುಕೊಂಡಿದ್ದರು. ಆದರೂ ಬಳ್ಳಾರಿಯಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಸ್ಪರ್ಧಿಸಿ ಚಾಂಪಿಯನ್​ ಆಗಿದ್ದರು. ಇದೀಗ 2016ರ ಒಲಿಂಪಿಕ್ಸ್ ಪದಕ ವಿಜೇತನಿಗೆ ಮಣ್ಣುಮುಕ್ಕಿಸಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವ ಯಶಸ್ವಿಯಾಗಿದ್ದಾರೆ

ಇದನ್ನು ಓದಿ:ದ್ರಾವಿಡ್​ಗೆ ತಂಡವನ್ನು ಮುನ್ನಡೆಸುವ ಪಾಠ ಮಾಡ್ಬೇಡಿ, ಅವರಿಚ್ಛೆಯಂತೆ ಬಿಟ್ಬಿಡಿ: ಬಿಸಿಸಿಐಗೆ ಜಡೇಜಾ ಮನವಿ

Last Updated : Nov 4, 2021, 10:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.