ETV Bharat / sports

ಏರ್​ಥಿಂಗ್​ ಮಾಸ್ಟರ್ಸ್​ ಟೂರ್ನಿಯಿಂದ ಹೊರಬಿದ್ದ ಲಿಟ್ಲ್ ಗ್ರ್ಯಾಂಡ್​ ಮಾಸ್ಟರ್​ ಪ್ರಜ್ಞಾನಂದ್ - ಏರ್​ಥಿಂಗ್​ ಚೆಸ್​ ಟೂರ್ನಿಯಲ್ಲಿ ನಾಕೌಟ್​ ಹಂತ ತಲುಪದ ಪ್ರಜ್ಞಾನಂದ್​

ಭಾರತದ ಲಿಟಲ್​ ಗ್ರ್ಯಾಂಡ್​ ಮಾಸ್ಟರ್​ ತಮಿಳುನಾಡಿನ ಆರ್​.ಪ್ರಜ್ಞಾನಂದ್​ ಅವರು ಇಲ್ಲಿ ನಡೆಯುತ್ತಿರುವ ಏರ್​ಥಿಂಗ್​ ಮಾಸ್ಟರ್ಸ್​ ಆನ್​ಲೈನ್​ ರ್ಯಾಪಿಡ್​ ಚೆಸ್​ ಪಂದ್ಯಾವಳಿಯಲ್ಲಿ ನಾಕೌಟ್​ ಹಂತಕ್ಕೆ ತಲುಪುವಲ್ಲಿ ವಿಫಲರಾದರು.

praggnanandhaa
ಪ್ರಜ್ಞಾನಂದ್
author img

By

Published : Feb 23, 2022, 11:25 AM IST

ಚೆನ್ನೈ(ತಮಿಳುನಾಡು): ವಿಶ್ವ ನಂ.1 ಚೆಸ್‌ ಆಟಗಾರ ನಾರ್ವೆಯ ಮ್ಯಾಗ್ನಸ್​ ಕಾರ್ಲ್​ಸನ್ ಅವ​ರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದ ಭಾರತದ ಲಿಟಲ್​ ಗ್ರ್ಯಾಂಡ್​ ಮಾಸ್ಟರ್​ ತಮಿಳುನಾಡಿನ ಆರ್​.ಪ್ರಜ್ಞಾನಂದ್​ ಅವರು ಇಲ್ಲಿ ನಡೆಯುತ್ತಿರುವ ಏರ್​ಥಿಂಗ್​ ಮಾಸ್ಟರ್ಸ್​ ಆನ್​ಲೈನ್​ ರ್ಯಾಪಿಡ್​ ಚೆಸ್​ ಪಂದ್ಯಾವಳಿಯಲ್ಲಿ ನಾಕೌಟ್​ ಹಂತಕ್ಕೆ ತಲುಪುವಲ್ಲಿ ವಿಫಲವಾಗಿದ್ದಾರೆ.

ಪ್ರಜ್ಞಾನಂದ್​ ಅವರು ಅಂಕಪಟ್ಟಿಯಲ್ಲಿ 11ನೇ ಸ್ಥಾನ ಪಡೆದುಕೊಂಡಿದ್ದಾರೆ. ರೌಂಡ್-ರಾಬಿನ್ ಹಂತದಿಂದ ಕೇವಲ 8 ಮಂದಿ ಮಾತ್ರ ನಾಕೌಟ್‌ಗೆ ಅರ್ಹತೆ ಪಡೆದರು. ಇದಕ್ಕೂ ಮುನ್ನ ಪ್ರಜ್ಞಾನಂದ್​ ಟೂರ್ನಿಯ 8 ನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿ ಎಲ್ಲರ ಹುಬ್ಬೇರಿಸಿದ್ದರು.

16 ವರ್ಷ ವಯಸ್ಸಿನ ಆರ್.ಪ್ರಜ್ಞಾನಂದ್​ 10 ಮತ್ತು 12 ನೇ ಸುತ್ತುಗಳಲ್ಲಿ ಆಂಡ್ರೆ ಎಸಿಪೆಂಕೊ ಮತ್ತು ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ವಿರುದ್ಧ ಜಯಿಸಿದರು. ಆದರೆ, ನೋಡಿರ್ಬೆಕ್ ಅಬ್ದುಸತ್ತೊರೊವ್ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿದರು. ಇದರಿಂದ 11 ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ದಿ ಹಂಡ್ರೆಡ್​ ಕ್ರಿಕೆಟ್​ ಪಂದ್ಯಾವಳಿ: ಭಾರತದ ರೋಡ್ರಿಗಾಸ್​, ಮಂಧಾನ ಉಳಿಸಿಕೊಂಡ ತಂಡಗಳು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.