ETV Bharat / sports

ಅನುಚಿತ ವರ್ತನೆ: ಅಂಡರ್ 17 ಫುಟ್ಬಾಲ್ ತಂಡದ ಸಹಾಯಕ ಕೋಚ್ ಅಮಾನತು! - football assistant coach Alex Ambrose

ಯುರೋಪ್‌ನಲ್ಲಿ ಭಾರತದ ಅಂಡರ್ 17 ಫುಟ್ಬಾಲ್​ ತಂಡದ ಸಹಾಯಕ ಕೋಚ್ ವಿರುದ್ಧ ಅನುಚಿತ ವರ್ತನೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಅಲೆಕ್ಸ್ ಆಂಬ್ರೋಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ಕೂಡಲೇ ಭಾರತಕ್ಕೆ ವಾಪಸ್ ಆಗುವಂತೆ ನಿನ್ನೆ ಸೂಚಿಸಲಾಗಿದೆ.

AIFF suspends U-17 women's team assistant coach for misbehave
ಭಾರತ ಅಂಡರ್ 17 ಫುಟ್ಬಾಲ್ ತಂಡದ ಸಹಾಯಕ ಕೋಚ್ ಅಮಾನತು
author img

By

Published : Jul 1, 2022, 1:14 PM IST

ಕೋಲ್ಕತ್ತಾ: ಅಖಿಲ ಭಾರತ ಫುಟ್ಬಾಲ್​​​ ಫೆಡರೇಶನ್ (ಎಐಎಫ್‌ಎಫ್) ಅಂಡರ್-17 ಮಹಿಳಾ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಅಂಡರ್-17 ಮಹಿಳಾ ವಿಶ್ವಕಪ್‌ಗೂ ಮುನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಯುರೋಪ್‌ನಲ್ಲಿ ಫುಟ್ಬಾಲ್​ ತಂಡದ ಬಾಲಕಿಯರ ಟ್ರಿಪ್‌ನಲ್ಲಿ ಅನುಚಿತ ವರ್ತನೆ ಆರೋಪ ಹಿನ್ನೆಲೆ ತಾತ್ಕಾಲಿಕವಾಗಿ ಅಮಾನತುಗೊಳಿಸಿ ತನಿಖೆಗೆ ಒಳಗಾಗುವಂತೆ ಎಐಎಫ್‌ಎಫ್ ಸೂಚಿಸಿದೆ.

ಅಖಿಲ ಭಾರತ ಫುಟ್ಬಾಲ್​ ಫೆಡರೇಶನ್ (ಎಐಎಫ್‌ಎಫ್) ವ್ಯವಹಾರಗಳನ್ನು ನಿರ್ವಹಿಸುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಯು ಅನುಚಿತ ವರ್ತನೆ ಘಟನೆಯ ಸಂಬಂಧ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಎಸ್‌ಎಐ) ಮಾಹಿತಿ ನೀಡಿದೆ. ಭಾರತದ ಅಂಡರ್-17 ಮಹಿಳಾ ತಂಡದ ಫುಟ್ಬಾಲ್ ಆಟಗಾರ್ತಿಯೊಬ್ಬರಿಗೆ ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಲೈಂಗಿಕ ಕಿರುಕುಳ/ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಆರೋಪ ಎದುರಿಸುತ್ತಿರುವ ಸಹಾಯಕ ಕೋಚ್ ಆಂಬ್ರೋಸ್ ನಾರ್ವೆಯಲ್ಲಿದ್ದು, ಈ ಕೂಡಲೇ ದೇಶಕ್ಕೆ ಮರಳುವಂತೆ ನಿನ್ನೆ ಸೂಚಿಸಲಾಗಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟಿ-20, ಏಕದಿನ ಸರಣಿಗೆ ಭಾರತ ತಂಡ ಪ್ರಕಟ

ಅಂಬ್ರೋಸ್ ವಿರುದ್ಧ ಫುಟ್ಬಾಲ್ ಆಟಗಾರರೊಬ್ಬರು ದೂರು ದಾಖಲಿಸಿದ್ದಾರೆ. ತಂಡದೊಂದಿಗಿನ ಎಲ್ಲ ಸಂಪರ್ಕಗಳನ್ನು ನಿಲ್ಲಿಸಲು, ತಕ್ಷಣವೇ ಭಾರತಕ್ಕೆ ಹಿಂತಿರುಗಲು ಮತ್ತು ಅವರು ಆಗಮನದ ನಂತರ ತನಿಖೆಗಾಗಿ ಹಾಜರಾಗಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಆರೋಪಿಗೆ ಸೂಚನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.