ನವದೆಹಲಿ: ವಿಶ್ವ ಚಾಂಪಿಯನ್ಶಿಪ್ನ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ ಅಮೇಚೂರ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ(AIBA) ಬಿಡುಗಡೆ ಮಾಡಿರುವ 52 ಕೆಜಿ ವಿಭಾಗದ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಅಮಿತ್ ಪಂಘಲ್ ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಸಿದ್ಧಪಡಿಸಿದ ಶ್ರೇಯಾಂಕದಲ್ಲಿ ಪ್ರಥಮ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಯಾವುದೇ ಕ್ರೀಡಾಪಟು ಶ್ರೇಯಾಂಕದಲ್ಲಿ ಸಾಧನೆ ಮಾಡಬೇಕೆಂಬುದು ಒಂದು ಕನಸಾಗಿರುತ್ತದೆ. ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ಆರಂಭಿಸಲು ಎದುರು ನೋಡುತ್ತಿದ್ದೇನೆ. ಹಾಗೂ ತರಬೇತುದಾರರೊಂದಿಗೆ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದೇನೆ ಎಂದು ಪಂಗಲ್ ಹೇಳಿದ್ದಾರೆ.
ಇನ್ನು ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿಪದಕ ಪಡೆದಿದ್ದ ಕವಿಂದರ್ ಬಿಶ್ತ್(56ಕೆಜಿ) ನಾಲ್ಕನೇ ಸ್ಥಾನ, ವಿಶ್ವ ಚಾಂಪಿಯನ್ ಶಿಪ್ ಕಂಚು ವಿಜೇತ ಮನೀಶ್ ಕೌಶಿಕ್(63 ಕೆಜಿ) ಮತ್ತು ದೀಪಕ್(49) 6ನೇ ಸ್ಥಾನ ಪಡೆಯುವ ಮೂಲಕ ಅಗ್ರ 10ರೊಳಗೆ ಕಾಣಿಸಿಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ (48 ಕೆಜಿ) ಎರಡನೇ ಸ್ಥಾನ ಪಡೆಯುವ ಮೂಲಕ ಭಾರತದ ಪರ ಗರಿಷ್ಠ ಶ್ರೇಯಾಂಕ ಪಡೆದ ಬಾಕ್ಸರ್ ಎನಿಸಿಕೊಂಡಿದ್ದಾರೆ. ಉಳಿದಂತೆ ಮೇರಿ ಕೋಮ್(51) ಹಾಗೂ ಲೌಲಿನಾ ಬೋರ್ಗೊಹೈನ್(69) ಮೂರನೇ ಸ್ಥಾನ ಪಡೆದಿದ್ದಾರೆ.
ಐದನೇ ಸ್ಥಾನದಲ್ಲಿ ಜಮುನಾ ಬೊರೊ (54 ಕೆಜಿ), ನಾಲ್ಕನೇ ಸ್ಥಾನದಲ್ಲಿ ಸೋನಿಯಾ ಚಹಲ್ (57 ಕೆಜಿ), ಒಂಬತ್ತನೇ ಸ್ಥಾನದಲ್ಲಿ ಸಿಮ್ರಾನ್ಜಿತ್ ಕೌರ್ (64 ಕೆಜಿ), ಪೂಜಾ ರಾಣಿ (81 ಕೆಜಿ) ಮತ್ತು ಎಂಟನೇ ಸ್ಥಾನದಲ್ಲಿ ಸೀಮಾ ಪೂನಿಯಾ (+ 81 ಕೆಜಿ) ಕೂಡ ಅಗ್ರ 10 ರಲ್ಲಿದ್ದಾರೆ.