ನವದೆಹಲಿ: 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಚೋಪ್ರಾ ಭೇಟಿ ಮಾಡಿರುವ ಅಭಿನವ್ ಬಿಂದ್ರಾ ಕೆಲಹೊತ್ತು ಮಾತುಕತೆ ನಡೆಸಿ ವಿಶೇಷ ಗಿಫ್ಟ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವಿಟರ್ನಲ್ಲಿ ಶೂಟರ್ ಬಿಂದ್ರಾ ಮಾಹಿತಿ ಹಂಚಿಕೊಂಡಿದ್ದಾರೆ.
-
Was a pleasure to meet and interact with India’s golden man @Neeraj_chopra1 ! I hope that “Tokyo” will be a supportive friend and motivate you to get a sibling named Paris for him in 2024 ! pic.twitter.com/54QxnPgDn8
— Abhinav A. Bindra OLY (@Abhinav_Bindra) September 22, 2021 " class="align-text-top noRightClick twitterSection" data="
">Was a pleasure to meet and interact with India’s golden man @Neeraj_chopra1 ! I hope that “Tokyo” will be a supportive friend and motivate you to get a sibling named Paris for him in 2024 ! pic.twitter.com/54QxnPgDn8
— Abhinav A. Bindra OLY (@Abhinav_Bindra) September 22, 2021Was a pleasure to meet and interact with India’s golden man @Neeraj_chopra1 ! I hope that “Tokyo” will be a supportive friend and motivate you to get a sibling named Paris for him in 2024 ! pic.twitter.com/54QxnPgDn8
— Abhinav A. Bindra OLY (@Abhinav_Bindra) September 22, 2021
ನವದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರದಂದು ನೀರಜ್ ಚೋಪ್ರಾ ಅವರನ್ನ ಭೇಟಿ ಮಾಡಿ, ಕೆಲಹೊತ್ತು ಮಾತನಾಡಿರುವುದಾಗಿ ಹೇಳಿಕೊಂಡಿರುವ ಬಿಂದ್ರಾ, 2024ರ ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಆಲ್ ದಿ ಬೆಸ್ಟ್ ತಿಳಿಸಲಾಗಿದೆ ಎಂದಿದ್ದಾರೆ.
ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿ, ವಿಶೇಷ ಉಡುಗೊರೆ ಗಿಫ್ಟ್ ನೀಡಿರುವ ವಿಚಾರವನ್ನು ಟ್ವಿಟರ್ನಲ್ಲಿ ಹಾಕಿಕೊಳ್ಳುತ್ತಿದ್ದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. 2008ರಲ್ಲಿನ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಬಿಂದ್ರಾ, ಶೂಟಿಂಗ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.