ನವದೆಹಲಿ: ಮೂರು ವಾರಗಳ ವಿರಾಮದ ನಂತರ ಮಂಗಳವಾರ ಪುನಾರಂಭಗೊಳ್ಳುವ ರಾಷ್ಟ್ರೀಯ ಶಿಬಿರದಲ್ಲಿ ತಂಡವು ಮುಂಬರುವ ಸ್ಪರ್ಧೆಗಳಿಗೆ ಸಿದ್ಧವಾಗಲಿದೆ ಎಂದು ಭಾರತೀಯ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಹೇಳಿದ್ದಾರೆ.
"ಈ ಮೂರು ವಾರಗಳ ವಿರಾಮದ ನಂತರ ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ತಾಜಾತನವನ್ನು ಅನುಭವಿಸಿರುತ್ತಾರೆ ಎಂದು ನಿರೀಕ್ಷಿಸುತ್ತೇನೆ. ನಮ್ಮ ಹಿಂದಿನ ರಾಷ್ಟ್ರೀಯ ಶಿಬಿರದಲ್ಲಿ, ಯೋ - ಯೋ ಟೆಸ್ಟ್ ಸೇರಿದಂತೆ ವಿವಿಧ ರೀತಿಯಲ್ಲಿ ಅಭ್ಯಾಸ ನಡೆಸಿದ್ದಾರೆ" ಎಂದು ಹೇಳಿದ್ದಾರೆ.
ಪ್ರಸ್ತುತ ಶಿಬಿರದಲ್ಲಿ ಮುಂಬರುವ ಸ್ಪರ್ಧೆಗೆ ಸಿದ್ಧರಾಗುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ. ಸಂಭಾವ್ಯ ತಂಡದ 33 ಸದಸ್ಯರು ಮಂಗಳವಾರದಿಂದ ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಅಲ್ಲಿ ನಿಗದಿಯಾಗಿರುವ ಕೋಚಿಂಗ್ ಕ್ಯಾಂಪ್‌ಗೆ ಮರಳಲಿದ್ದಾರೆ.
ಮೂವರು ಗೋಲ್ ಕೀಪರ್‌ಗಳಾದ ಪಿ.ಆರ್.ಶ್ರೀಜೇಶ್, ಕ್ರಿಶನ್ ಬಿ ಪಾಠಕ್ ಮತ್ತು ಸೂರಜ್ ಕಾರ್ಕೆರಾ, ಡಿಫೆಂಡರ್ ಬೀರೇಂದ್ರ ಲಕ್ರಾ, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಕೊಥಾಜಿತ್ ಸಿಂಗ್ ಖದಂಗ್‌ಬಾಮ್, ಹರ್ಮನ್‌ಪ್ರೀತ್ ಸಿಂಗ್, ಗುರಿಯಿಂದರ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ದಿಪ್ಸನ್ ತಿರ್ಕಿ, ನೀಲಂ ಸಂಜೀಪ್ ಕ್ಸೆಸ್ ಸೇರಿ ಹಲವು ಆಟಗಾರರು ಎಸ್‌ಐಐನಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ.