ETV Bharat / sports

Tokyo Olympics 2020: ಬಿಲ್ಲುಗಾರಿಕೆಯಲ್ಲಿ 2 ಬಾರಿಯ ಚಾಂಪಿಯನ್​ ಸೋಲಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ - ಟೋಕಿಯೋ ಒಲಿಂಪಿಕ್ಸ್ 2020 ಸುದ್ದಿ

ಟೋಕಿಯೋ ಒಲಿಂಪಿಕ್ಸ್​ನ 7ನೇ ದಿನದಲ್ಲಿ ಬಿಲ್ಲುಗಾರಿಕೆ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಅತನು ದಾಸ್ ತೈಪೆ ಚೀನಾದ ​​ ಡಿಗ್​ ಯು ಚಾಂಗ್ ಮತ್ತು ಸೌತ್​ ಕೋರಿಯಾದ ಓಹ್ ಜಿನ್​ಹಯೆಕ್ ವಿರುದ್ಧ ಗೆದ್ದು ಕ್ವಾರ್ಟರ್​ ಫೈನಲ್​ಗೆ ತಲುಪಿದ್ದಾರೆ.

DAS Atanu won against DENG Yu Cheng, DAS Atanu won against DENG Yu-Cheng in Archery, DAS Atanu won against DENG Yu-Cheng in Archery, tokyo olympics 2020, tokyo olympics 2020 news, ಬಿಲ್ಲುಗಾರಿಕೆಯಲ್ಲಿ  ಚೀನಾ ವಿರುದ್ಧ ಭಾರತದ ಎ.ದಾಸ್​ಗೆ​ ಜಯ, ಬಿಲ್ಲುಗಾರಿಕೆಯಲ್ಲಿ  ಚೀನಾ ವಿರುದ್ಧ ಭಾರತದ ಎ.ದಾಸ್​ಗೆ​ ಜಯ ಸುದ್ದಿ,  ಟೋಕಿಯೋ ಒಲಿಂಪಿಕ್ಸ್ 2020, ಟೋಕಿಯೋ ಒಲಿಂಪಿಕ್ಸ್ 2020 ಸುದ್ದಿ,
ಲ್ಲುಗಾರಿಕೆಯಲ್ಲಿ ಭಾರತದ ದಾಸ್​ಗೆ ಚೀನಾ ವಿರುದ್ಧ ಭರ್ಜರಿ ಗೆಲವು
author img

By

Published : Jul 29, 2021, 8:15 AM IST

Updated : Jul 29, 2021, 10:35 AM IST

ಟೋಕಿಯೋ: ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಆಗಿರುವ ಓಹ್ ಜಿನ್​ಹಯೆಕ್​ ವಿರುದ್ಧ ನಡೆದ ಪಂದ್ಯದಲ್ಲಿ ದಾಸ್​ ರೋಚಕ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ.

ಗುರುವಾರ ಇಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಭಾರತದ ಬಿಲ್ಲುಗಾರ ಅತನು ದಾಸ್ ಕೊನೆ ಕ್ಷಣದಲ್ಲಿ ಒಂದು ಅಂಕ ಹೆಚ್ಚು ಗಳಿಸುವ ಮೂಲಕ ಸೌತ್​ ಕೊರಿಯಾದ ಓಹ್ ಜಿನ್​ಹಯೆಕ್​ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಬಿಲ್ಲುಗಾರಿಕೆಯಲ್ಲಿ ಭಾರತದ ನಂಬರ್ ಒನ್ ಆಟಗಾರ ದಾಸ್​ಗೆ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಇದಾಗಿದೆ. ಆಟದಲ್ಲಿ ಓಹ್ ಜಿನ್​ಹಯೆಕ್ ಮತ್ತು ಅತನು ದಾಸ್​ 5-5 ಪಾಯಿಂಟ್ ಗಳಿಸಿ ಸರಿಸಮಾನಾಗಿ ಮುನ್ನುಗ್ಗುತ್ತಿದ್ದರು.

ಕೊನೆಯ ಕ್ಷಣದಲ್ಲಿ ಓಹ್​ ಜಿನ್​ಹಯೆಕ್​ 9 ಅಂಕಗಳ ಪಡೆದ್ರೆ, ದಾಸ್​ 10 ಅಂಕಗಳು ಪಡೆದು ಮುನ್ನಡೆದರು. ಜುಲೈ 31ರಂದು ನಡೆಯಲಿರುವ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಜಪಾನ್​ದ ಫುರುಕಾವಾ ಟಕಹರು ವಿರುದ್ಧ ದಾಸ್​ ಬಿಲ್ಲಿನ ಯುದ್ಧ ನಡೆಸಲಿದ್ದಾರೆ.

ಪುರುಷರ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಎ.ದಾಸ್​ 6-4 ಅಂಕಗಳ ಅಂತರದಿಂದ ತೈಪೆ ಚೀನಾದ ​​ ಡಿಗ್​ ಯು ಚಾಂಗ್​​ ವಿರುದ್ಧ ಜಯ ಗಳಿಸಿ ಮುನ್ನಡೆ ಸಾಧಿಸಿದ್ದರು. ನಾಳೆ ನಡೆಯಲಿರುವ ಬಿಲ್ಲುಗಾರಿಕೆ ಆಟದಲ್ಲಿ ರಷ್ಯಾ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ ದಾಸ್​ ಪತ್ನಿ ದೀಪಿಕಾ ಕುಮಾರಿ ಸೆಣಸಾಟ ನಡೆಸಲಿದ್ದಾರೆ.

Last Updated : Jul 29, 2021, 10:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.