ETV Bharat / sports

ಹಾಕಿ ಲೆಜೆಂಡ್ ಬಲ್ಬೀರ್​ ಸಿಂಗ್​ ನಿಧನಕ್ಕೆ ಕಂಬನಿ ಮಿಡಿದ ಕ್ರೀಡಾ ದಿಗ್ಗಜರು

ಭಾರತಕ್ಕೆ 3 ಒಲಿಂಪಿಕ್​ ಪದಕಗಳನ್ನು ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಲ್ಬೀರ್​ ಸಿಂಗ್​ ನಿಧನಕ್ಕೆ ಕ್ರಿಕೆಟಿಗ ವಿರಾಟ್​ ಕೊಹ್ಲಿ, ಹಾಕಿ ತಂಡದ ಮಾಜಿ ನಾಯಕ ಮನ್​ಪ್ರೀತ್ ಸಿಂಗ್​ ಸೇರಿದಂತೆ ಹಲವು ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಬಲ್ಬೀರ್​ ಸಿಂಗ್​ ನಿಧನ
ಬಲ್ಬೀರ್​ ಸಿಂಗ್​ ನಿಧನ
author img

By

Published : May 25, 2020, 2:36 PM IST

ನವದೆಹಲಿ: ಭಾರತದ ಹಾಕಿ ಲೆಜೆಂಡ್​ ಬಲ್ಬೀರ್​ ಸಿಂಗ್ ಸೀನಿಯರ್​ ಇಂದು ನಿಧನರಾಗಿದ್ದು, ಇವರ ಸಾವಿಗೆ ಪ್ರಸಿದ್ಧ ಕ್ರೀಡಾಪಟುಗಳು ಕಂಬನಿ ಮಿಡಿದಿದ್ದಾರೆ.

95 ವರ್ಷ ವಯಸ್ಸಾಗಿದ್ದ ಬಲ್ಬೀರ್​ ಸಿಂಗ್ ಮೇ 18ರಿಂದ ಅರೆ ಕೋಮಾ ಸ್ಥಿತಿಯಲ್ಲಿದ್ದರು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದಲ್ಲದೆ, ಹೃದಯಾಘಾತಕ್ಕೂ ಒಳಗಾಗಿದ್ದರು. ಸಿಂಗ್​ ಇಂದು ಬೆಳಿಗ್ಗೆ 6:30ರ ಸಮಯದಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಭಾರತಕ್ಕೆ 3 ಒಲಿಂಪಿಕ್​ ಪದಕಗಳನ್ನು ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಲ್ಬೀರ್​ ಸಿಂಗ್​ ನಿಧನಕ್ಕೆ ಕ್ರಿಕೆಟಿಗ ವಿರಾಟ್​ ಕೊಹ್ಲಿ, ಹಾಕಿ ತಂಡದ ಮಾಜಿ ನಾಯಕ ಮನ್​ಪ್ರೀತ್ ಸಿಂಗ್​ ಸೇರಿದಂತೆ ಹಲವು ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಲೆಜೆಂಡ್​ ಬಲ್ಬೀರ್​ ಸಿಂಗ್​ ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ಇಂತಹ ದುಃಖದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಹಾಕಿ ತಂಡದ ಮಾಜಿ ನಾಯಕ ಮನ್​ಪ್ರೀತ್​ ಸಿಂಗ್​, ವಿಶ್ವದ ಅತ್ಯುತ್ತಮ ಹಾಗೂ ಲೆಜೆಂಡರಿ, ಪದ್ಮಶ್ರೀ ಬಲ್ಬೀರ್​ ಸಿಂಗ್​ ಸೀನಿಯರ್​ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನೀವು ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀರಾ ಎಂದು ಟ್ವೀಟ್​ ಮಾಡಿದ್ದಾರೆ.

  • Saddened to hear about the passing of the legend, Balbir Singh Sr. My thoughts and prayers go out to his family in this time of sorrow. 🙏🏼 @BalbirSenior

    — Virat Kohli (@imVkohli) May 25, 2020 " class="align-text-top noRightClick twitterSection" data=" ">

ಭಾರತ ತಂಡದ ಸ್ಪಿನ್ನರ್ ಹರ್ಭಜನ್​ ಸಿಂಗ್​, ಭಾರತದ ಕ್ರೀಡಾಲೋಕದ ದಿಗ್ಗಜ ಶ್ರೀ ಬಲ್ಬೀರ್​ ಸಿಂಗ್​ ಇನ್ನಿಲ್ಲ. ಅವರ ಸಾಧನೆಗಳನ್ನು ಹಿಂತಿರುಗಿ ನೋಡಿದಾಗ ನಿಜಕ್ಕೂ ನೀವು ಆಶ್ಚರ್ಯಕ್ಕೊಳಗಾಗುತ್ತೀರಾ. 3 ಒಲಿಂಪಿಕ್​ ಗೋಲ್ಡ್​ ಮೆಡಲ್​ಗಳು, ಒಲಿಂಪಿಕ್​ ಫೈನಲ್​ ಪಂದ್ಯದಲ್ಲಿ 5 ಗೋಲುಗಳು, ವಿಶ್ವಕಪ್​ ವಿಜೇತ ತಂಡದ ಮ್ಯಾನೇಜರ್​. ಭಾರತದ ಶ್ರೇಷ್ಠ ಸ್ಪೋರ್ಟ್ಸ್​ ಐಕಾನ್​ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಸಂತಾಪ ಸೂಚಿಸಿದ್ದಾರೆ.

  • Saddened to hear of the demise of one of India's most celebrated Olympians, Balbir Singh Sr. Athletes and role models such as him come very rarely, and it was an honour to know him, and I hope his example will continue to inspire athletes from around the world!

    — Abhinav A. Bindra OLY (@Abhinav_Bindra) May 25, 2020 " class="align-text-top noRightClick twitterSection" data=" ">

ಭಾರತದ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್​, ಕ್ರಿಕೆಟಿಗ ಸುರೇಶ್​ ರೈನಾ, ಭಾರತ ಕ್ರಿಕೆಟ್​ ತಂಡದ ಕೋಚ್​ ರವಿಶಾಸ್ತ್ರಿ ಸೇರಿದಂತೆ ಹಲವಾರು ಕ್ರೀಡಾಪಟುಗಳು ಬಲ್ಬೀರ್​ ಸಿಂಗ್​ ಸಾವಿಗೆ ಕಂಬನಿ ಮಿಡಿದಿದ್ದಾರೆ.​

  • Pained to learn about the passing of our three times Olympic Gold medalist and legend Balbir Singh Senior sir this morning.

    His contribution towards Indian hockey is unforgettable. He will continue to inspire our generations to come.

    My deepest condolences to his family. RIP pic.twitter.com/8qcIuHe9vW

    — Rani Rampal (@imranirampal) May 25, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.