ETV Bharat / sports

ಯುವಕರಲ್ಲಿ ಕ್ರೀಡೋತ್ಸಾಹ ಹೆಚ್ಚುತ್ತಿರುವುದು ಧ್ಯಾನ್‌ಚಂದ್​ಗೆ ಸಿಗುತ್ತಿರುವ ದೊಡ್ಡ ಗೌರವ: ಮೋದಿ - ರಾಷ್ಟ್ರೀಯ ಕ್ರೀಡಾದಿನ

ಭಾರತ ಹಾಕಿ ತಂಡ ನಾಲ್ಕು ದಶಕಗಳ ನಂತರ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿದೆ. ಒಂದು ವೇಳೆ ಮೇಜರ್​ ಧ್ಯಾನ್ ಚಂದ್​ ಇಂದು ಬದುಕಿದ್ದರೆ ಎಷ್ಟು ಸಂತೋಷಪಡುತ್ತಿದ್ದರು ಅನ್ನೋದನ್ನು ನೀವು ಊಹಿಸಿಕೊಳ್ಳಬಹುದು. ಇಂದಿನ ಯುವಕರಲ್ಲಿ ಕ್ರೀಡೆಯ ಮೇಲಿನ ಪ್ರೇಮವನ್ನು ನಾವು ಕಾಣುತ್ತಿದ್ದೇವೆ. ಕ್ರೀಡೆಗಳ ಮೇಲಿನ ಈ ಉತ್ಸಾಹವು ಮೇಜರ್ ಧ್ಯಾನ್ ಚಂದ್ ಅವರಿಗೆ ಸಲ್ಲುವ ದೊಡ್ಡ ಗೌರವ ಎಂದು ಪ್ರಧಾನಿ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ನಲ್ಲಿ ಹೇಳಿದರು.

Major Dhyan Chand birthday
ಮೇಜರ್ ಧ್ಯಾನ್​ ಚಂದ್ ಜನ್ಮದಿನಾಚರಣೆ
author img

By

Published : Aug 29, 2021, 3:30 PM IST

ನವದೆಹಲಿ: ದೇಶದ ಯುವ ಜನತೆಯಲ್ಲಿ ಕ್ರೀಡೆಗಳ ಮೇಲೆ ಮೂಡುತ್ತಿರುವ ಉತ್ಸಾಹ ಮೇಜರ್ ಧ್ಯಾನ್ ಚಂದ್ ಅವರಿಗೆ ದೊರೆತ ದೊಡ್ಡ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಮಾಂತ್ರಿಕ ಕೌಶಲ್ಯಗಳ ಮೂಲಕ ಮೇಜರ್​ ಧ್ಯಾನ್​ ಚಂದ್ ವಿಶ್ವ​ ಹಾಕಿ ಕ್ರೀಡೆಯ ದಂತಕತೆಯಾಗಿದ್ದಾರೆ. ಅವರು 1928, 1932, 1936ರ ಸತತ 3 ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇವರ ಕಾಲದಲ್ಲಿ ವಿಶ್ವದಲ್ಲೇ ಭಾರತ ತಂಡ ಹಾಕಿ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು.

"ಭಾರತ ಹಾಕಿ ತಂಡ ನಾಲ್ಕು ದಶಕಗಳ ನಂತರ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿದೆ. ಒಂದು ವೇಳೆ ಮೇಜರ್​ ಧ್ಯಾನ್ ಚಂದ್​ ಇಂದು ಇದ್ದಿದ್ದರೆ ಎಷ್ಟು ಸಂತೋಷಪಡುತ್ತಿದ್ದರು ಅನ್ನೋದನ್ನು ನೀವು ಊಹಿಸಿಕೊಳ್ಳಬಹುದು. ಇಂದಿನ ಯುವಕರಲ್ಲಿ ಕ್ರೀಡೆ ಮೇಲಿನ ಪ್ರೇಮವನ್ನು ನಾವು ಕಾಣುತ್ತಿದ್ದೇವೆ. ಕ್ರೀಡೆಗಳ ಮೇಲಿನ ಈ ಉತ್ಸಾಹವು ಅವರಿಗೆ ಸಲ್ಲುವ ದೊಡ್ಡ ಗೌರವ" ಎಂದು ಪ್ರಧಾನಿ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ನಲ್ಲಿ ಹರ್ಷ ವ್ಯಕ್ತಪಡಿಸಿದರು.

ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ರಾಜೀವ್​ ಗಾಂಧಿ ಖೇಲ್​ ರತ್ನ ವನ್ನು ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಪ್ರಶಸ್ತಿ ಎಂದು ಬದಲಾಯಿಸಿದ್ದರು. ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾದರೂ ಕ್ರೀಡಾಪಟುಗಳು ಮತ್ತು ಹಾಕಿ ಆಟಗಾರರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದರು.

ಭಾರತ ತಂಡ ಟೋಕಿಯೋ ಒಲಿಂಪಿಕ್ಸ್​ನಲ್ಲಿ 41 ವರ್ಷಗಳ ಬಳಿಕ ಕಂಚಿನ ಪದಕ ಗೆದ್ದ ಬೆನ್ನಲ್ಲೆ ಮೋದಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು.

ಆಗಸ್ಟ್​ 29 ಮೇಜರ್​ ಧ್ಯಾನ್​ ಚಂದ್​ ಅವರ ಜನ್ಮದಿನವಾಗಿದ್ದು, ಈ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಮರು ನಾಮಕರಣ: ರಾಜೀವ್​ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನು ಮುಂದೆ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.