ETV Bharat / sports

ಕೋವಿಡ್-19ಗೆ ಬಲಿಯಾದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ಆಟಗಾರ ರವೀಂದ್ರ ಪಾಲ್ ಸಿಂಗ್ - ಒಲಿಂಪಿಕ್ ಚಿನ್ನದ ಪದಕ ವಿಜೇತ ರವೀಂದ್ರ ಪಾಲ್ ಸಿಂಗ್

ಅವಿವಾಹಿತರಾಗಿದ್ದ ಸಿಂಗ್ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. 1979ರಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ್ದರು..

ರವೀಂದ್ರ ಪಾಲ್ ಸಿಂಗ್
ರವೀಂದ್ರ ಪಾಲ್ ಸಿಂಗ್
author img

By

Published : May 8, 2021, 3:55 PM IST

ನವದೆಹಲಿ : ಭಾರತ ಹಾಕಿ ತಂಡದ ಮಾಜಿ ಸದಸ್ಯ ಮತ್ತು 1980ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ರವೀಂದರ್ ಪಾಲ್ ಸಿಂಗ್ ಕೋವಿಡ್​-19 ಸೋಂಕಿನಿಂದ ನಿಧನ ಹೊಂದಿದ್ದಾರೆ. ಅವರು ಕಳೆದ ಎರಡು ವಾರಗಳಿಂದ ಮಾರಕ ವೈರಸ್ ಸೋಂಕಿನಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದೆ.

65 ವರ್ಷ ರವೀಂದ್ರ ಪಾಲ್ ಸಿಂಗ್ ಕೋವಿಡ್-19 ಪಾಸಿಟಿವ್ ಬಂದ ನಂತರ ಏಪ್ರಿಲ್ 24 ರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾಗಿದ್ದರಿಂದ ಗುರುವಾರ ನಾನ್ ಕೋವಿಡ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು ಎಂದು ಸಿಂಗ್ ಕುಟುಂಬದ ಮೂಲಗಳು ತಿಳಿಸಿವೆ.

  • Saddened to learn about the loss of former India International who was part of the Gold Medal winning Indian squad at the 1980 Moscow Olympics, Mr. Ravinder Pal Singh.

    Hockey India sends its condolences to his family and loved ones. 🙏#IndiaKaGame pic.twitter.com/vHjIQlrDqW

    — Hockey India (@TheHockeyIndia) May 8, 2021 " class="align-text-top noRightClick twitterSection" data=" ">

ಆದರೆ, ಶುಕ್ರವಾರ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿದ್ದು ಕೂಡಲೇ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಅವಿವಾಹಿತರಾಗಿದ್ದ ಸಿಂಗ್ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡಿದ್ದರು. 1979ರಲ್ಲಿ ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ್ದರು. ಎರಡು ಒಲಿಂಪಿಕ್ಸ್​ಗಳಲ್ಲದೆ ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ (1980, 1983), 1982ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ಸಿಲ್ವರ್ ಜುಬಿಲಿ 10 ರಾಷ್ಟ್ರಗಳ ಕಪ್, 1982ರಲ್ಲಿ ಮುಂಬೈನಲ್ಲಿ ನಡೆದಿದ್ದ ವಿಶ್ವಕಪ್ ಹಾಗೂ1982ರಲ್ಲಿ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಸೇರಿದಂತೆ ಹಲವಾರು ಟೂರ್ನಮೆಂಟ್​ಗಳಲ್ಲಿ ಭಾರತ ತಂಡ ಪ್ರತಿನಿಧಿಸಿದ್ದರು.

ಇದನ್ನು ಓದಿ:ಕೋವಿಡ್​ ಲಸಿಕೆಯ ಮೊದಲ ಡೋಸ್​ ಪಡೆದ ಕ್ರಿಕೆಟಿಗ ಅಜಿಂಕ್ಯ ರಹಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.