ETV Bharat / sports

ಜಪಾನ್​ ಮಣಿಸಿ ಫೈನಲ್​ ಪ್ರವೇಶಿಸಿದ ಭಾರತ ಹಾಕಿ ತಂಡ.. - ಒಲಿಂಪಿಕ್​ ಅರ್ಹತಾ ಟೆಸ್ಟ್​ ಹಾಕಿ

ಮಂದೀಪ್​ ಸಿಂಗ್​ ಸಿಡಿಸಿದ ಹ್ಯಾಟ್ರಿಕ್​ ಗೋಲುಗಳ ನೆರವಿನಿಂದ ಭಾರತ ತಂಡ ಜಪಾನ್​ ತಂಡವನ್ನು 6-3ರಲ್ಲಿ ಮಣಿಸಿ ಒಲಿಂಪಿಕ್​ ಟೆಸ್ಟ್​ ಹಾಕಿ ಫೈನಲ್​ ಪ್ರವೇಶಿಸಿದೆ.

Mandeep
author img

By

Published : Aug 20, 2019, 9:01 PM IST

ಟೋಕಿಯೋ: ಮಂದೀಪ್​ ಸಿಂಗ್​ ಸಿಡಿಸಿದ ಹ್ಯಾಟ್ರಿಕ್​ ಗೋಲುಗಳ ನೆರವಿನಿಂದ ಭಾರತ ತಂಡ ಜಪಾನ್​ ತಂಡವನ್ನು 6-3ರಲ್ಲಿ ಮಣಿಸಿ ಫೈನಲ್​ ಪ್ರವೇಶಿಸಿದೆ.

ಮಂಗಳವಾರ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ​ಟೆಸ್ಟ್​ ಹಾಕಿ ಟೂರ್ನಿಯಲ್ಲಿ ಭಾರತ ಆತಿಥೇಯ ಜಪಾನ್​ ತಂಡವನ್ನು ಬಗ್ಗುಬಡಿದಿದೆ. ಪಂದ್ಯದ 3ನೇ ನಿಮಿಷದಲ್ಲಿ ನೀಲಕಾಂತ್​ ಶರ್ಮಾ ಗೋಲುಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಸಿಕ್ಕ ಪೆನಾಲ್ಟಿ ಕಾರ್ನರ್​ ಅವಕಾಶವನ್ನು ನೀಲಂ ಸಂಜೀಪ್​ ಗೋಲಾಗಿ ಪರಿವರ್ತಿಸಿ 2-0 ಮುನ್ನಡೆ ಹೆಚ್ಚಿಸಿದರು.

ಇನ್ನು ಆಕ್ರಮಣ ಆಟಕ್ಕೆ ಮುಂದಾದ ಮಂದೀಪ್​ 9ನೇ ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಈ ವೇಳೆ 25 ನೇ ನಿಮಿಷದಲ್ಲಿ ಜಪಾನ್​ ಕೆಟರೊ ಫೆಕುದಾ ಗೋಲುಗಳಿಸಿ ಹಿನ್ನಡೆಯನ್ನು1-3ಕ್ಕೆ ತಗ್ಗಿಸಿಕೊಂಡರು. ಆದರೆ, 29ನೇ ನಿಮಿಷದಲ್ಲಿ ಮಂದೀಪ್​ ಗೋಲುಗಳಿಸಿದರೆ, 36 ನಿಮಿಷದಲ್ಲಿ ಕೆಂತ ತನಕ ಗೋಲುಗಳಿಸಿದರು.

40ನೇ ನಿಮಿಷದಲ್ಲಿ ಮಂದೀಪ್, 41 ನಿಮಿಷದಲ್ಲಿ ಗುರ್ಜಂತ್​ ಸಿಂಗ್​ ಗೋಲುಗಳಿಸಿ 5-2ಕ್ಕೆ ಮುನ್ನಡೆ ತಂದುಕೊಟ್ಟರು, 52ನೇ ನಿಮಿದಲ್ಲಿ ಜಪಾನ್​ನ ಕಜ್ಮು ಮುರಟ ಗೋಲುಗಳಿಸಿ ಸೋಲಿನ ಅಂತರವನ್ನು 3-6ಕ್ಕೆ ತಗ್ಗಿಸಿಕೊಂಡರು. ಭಾರತ ತಂಡ ನಾಳೆ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.