ETV Bharat / sports

ಭಾರತದ ಹಾಕಿ ದಂತಕಥೆ ಬಲ್ಬೀರ್​ ಸಿಂಗ್​ ಇನ್ನಿಲ್ಲ - 95 ವರ್ಷದ ಬಲ್ಬೀರ್​ ಸಿಂಗ್​ ನಿಧನ

ಮೇ 8ರಿಂದ ಫೋರ್ಟಿಸ್​ ಆಸ್ಪತ್ರೆಗೆ ದಾಖಲಾಗಿದ್ದ ಬಲ್ಬೀರ್​ ಸಿಂಗ್​ ಇಂದು ಬೆಳಿಗ್ಗೆ 6:30ರ ವೇಳೆಗೆ ನಿಧನರಾಗಿದ್ದಾರೆ ಎಂದು ಫೋರ್ಟಿಸ್​ ಆಸ್ಪತ್ರೆಯ ಡೈರೆಕ್ಟರ್​ ಮಾಧ್ಯಮಕ್ಕೆ ತಿಳಿಸಿದ್ದಾರೆ. ನಂತರ ಅವರ ಮೊಮ್ಮಗ ಕಬೀರ್​ ಸಿಂಗ್​, "ನಾನಾಜಿ ಇನ್ನಿಲ್ಲ" ಇಂದು ಟ್ವೀಟ್ ಮಾಡಿದ್ದಾರೆ.

ಬಲ್ಬೀರ್​ ಸಿಂಗ್
ಬಲ್ಬೀರ್​ ಸಿಂಗ್
author img

By

Published : May 25, 2020, 10:03 AM IST

ಚಂಡೀಗಢ: ಕಳೆದ 2 ವಾರಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಭಾರತದ ಹಾಕಿ ಲೆಜೆಂಡ್​ ಬಲ್ಬೀರ್ ಸಿಂಗ್ (ಸೀನಿಯರ್) ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಲ್ಬೀರ್​ ಸಿಂಗ್​ಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಮೇ 12ರಂದು ಅವರಿಗೆ ಹೃದಯಾಘಾತ ಸಂಭವಿಸಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 95 ವರ್ಷದ ಬಲ್ಬೀರ್​ ಸಿಂಗ್​ಗೆ ಸುಶ್ಬೀರ್​ ಸಿಂಗ್​ ಎಂಬ ಮಗಳು, ಕನ್ವಾಲ್​ಬೀರ್​, ಕರಣ್​ ಬೀರ್​, ಗುರ್ಬೀರ್​ ಎಂಬ ನಾಲ್ಕು ಮಕ್ಕಳಿದ್ದಾರೆ.

ಬಲ್ಬೀರ್​ ಸಿಂಗ್
ಬಲ್ಬೀರ್​ ಸಿಂಗ್

ಇವರು 1948, 1952 ಹಾಗೂ 1956ರ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1952ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ನೆದರ್ಲೆಂಡ್​​ ವಿರುದ್ಧ ಐದು ಗೋಲು ಬಾರಿಸಿ ಭಾರತವನ್ನು 6-1ರಿಂದ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೇ 8ರಿಂದ ಫೋರ್ಟಿಸ್​ ಆಸ್ಪತ್ರೆಗೆ ದಾಖಲಾಗಿದ್ದ ಬಲ್ಬೀರ್​ ಸಿಂಗ್​ ಇಂದು ಬೆಳಿಗ್ಗೆ 6:30ರ ವೇಳೆಗೆ ನಿಧನರಾಗಿದ್ದಾರೆ ಎಂದು ಫೋರ್ಟಿಸ್​ ಆಸ್ಪತ್ರೆಯ ಡೈರೆಕ್ಟರ್​ ಮಾಧ್ಯಮಕ್ಕೆ ತಿಳಿಸಿದ್ದಾರೆ. ನಂತರ ಅವರ ಮೊಮ್ಮಗ ಕಬೀರ್​ ಸಿಂಗ್​, "ನಾನಾಜಿ ಇನ್ನಿಲ್ಲ" ಇಂದು ಟ್ವೀಟ್ ಮಾಡಿದ್ದಾರೆ.

ಭಾರತ ಗೆದ್ದ ಏಕೈಕ ವಿಶ್ವಕಪ್​ ತಂಡದ ಮ್ಯಾನೇಜರ್​ ಹಾಗೂ ಹಾಕಿ ಒಲಿಂಪಿಕ್ಸ್​ ಫೈನಲ್​ನಲ್ಲಿ ಹೆಚ್ಚು ಗೋಲು(5) ಗಳಿಸಿದ ದಾಖಲೆ ಹೊಂದಿರುವ ಬಲ್ಬೀರ್​ ಸಿಂಗ್​ಗೆ 1957ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.