ನವದೆಹಲಿ: ಭಾರತೀಯ ಪುರುಷರ ಹಾಕಿ ತಂಡಕ್ಕೆ ತರಬೇತುದಾರರನ್ನ ಹುಡುಕುತಿದ್ದು, ಆಸ್ಟ್ರೇಲಿಯಾ ಮೂಲದ ಗ್ರಹಾಂ ರೀಡ್ ನೂತನ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ತವರಲ್ಲಿ ನಡೆದ ಹಾಕಿ ವಿಶ್ವಕಪ್ ಪಂದ್ಯಾವಳಿ ನಂತರ ಮುಖ್ಯ ಕೋಚ್ ಆಗಿದ್ದ ಹರೇಂದ್ರ ಸಿಂಗ್ ಅವರನ್ನ ವಜಾ ಮಾಡಿದ ನಂತರ ತರಬೇತುದಾರರ ಸ್ಥಾನ ಖಾಲಿಯಾಗಿತ್ತು. ಹೀಗಾಗಿ ತರಬೇತುದಾರ ಹುದ್ದೆಗೆ ಅರ್ಜಿ ಕರೆಯಲಾಗುತ್ತು. ಇಲ್ಲಿಯವರೆಗೆ ಎಷ್ಟುಜನ ಮತ್ತು ಯಾರು ಯಾರು ಅರ್ಜಿ ಸಲ್ಲಿಸಿದ್ದರು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಗೊತ್ತಾಗಿಲ್ಲ.
ಭಾರತೀಯ ತಂಡ ಪ್ರಸ್ತುತ ಮಧ್ಯಂತರ ತರಬೇತುದಾರ ಡೇವಿಡ್ ಜಾನ್ ಮಾರ್ಗದರ್ಶನದಲ್ಲಿ ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಷಾ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದೆ.
ಆಸ್ಟ್ರೇಲಿಯಾ, ಆಮ್ಸ್ಟರ್ಡ್ಯಾಂ, ನೆದರ್ಲ್ಯಾಂಡ್ ತಂಡದಲ್ಲಿ ಕೋಚ್ ಮತ್ತು ಸಹ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಗ್ರಹಾಂ ರೀಡ್ ತರಬೇತುದಾರರಾಗಿ ಉತ್ತಮ ಅನುಭವ ಹೊಂದಿದ್ದಾರೆ. ಗ್ರಹಾಂ ರೀಡ್ ಇಲ್ಲಿಯವರೆಗೆ ಅಧಿಕೃತವಾಗಿ ಭಾರತದ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ಆದ್ರೆ ಅವರೇ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ