ಬೆಂಗಳೂರು: ಕೋವಿಡ್ 19 ಪಾಸಿಟಿವ್ ವರದಿ ಬಂದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ಹಾಕಿ ತಂಡದ ಎಲ್ಲಾ ಆಟಗಾರರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ತರಬೇತಿ ಶಿಬಿರಕ್ಕೆಂದು ಬಂದಿದ್ದ ಎಲ್ಲಾ ಹಾಕಿ ಆಟಗಾರರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 6 ಆಟಗಾರರಿಗೆ ಪಾಸಿಟಿವ್ ವರದಿ ಬಂದಿತ್ತು. ಮೊದಲು ಸಾಯ್ ಕ್ಯಾಂಪಸ್ನಲ್ಲೇ ಕ್ವಾರಂಟೈನ್ನಲ್ಲಿರಿಸಲಾಗಿತ್ತು. ಆದರೆ ಸ್ಟ್ರೈಕರ್ ಮಂದೀಪ್ ಸಿಂಗ್ಗೆ ರಕ್ತದಲ್ಲಿ ಆಮ್ಲಜನಕ ಕಡಿಮೆಯಾದ ಹಿನ್ನಲೆ ಅವರನ್ನು ಎಸ್ಎಸ್ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಮುಂಜಾಗೃತ ಕ್ರಮವಾಗಿ ಪಾಸಿಟಿವ್ ಬಂದಿದ್ದ ನಾಯಕ ಮನ್‌ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ವರುಣ್ ಕುಮಾರ್, ಗೋಲ್ ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ಅವರನ್ನು ಸಹಾ ಆಸ್ಪತ್ರಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಆಗಸ್ಟ್ 10 ಮತ್ತು 12ರಂದು ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.
"ಎಲ್ಲಾ ಹಾಕಿ ಆಟಗಾರರ ಚೇತರಿಸಿಕೊಂಡಿದ್ದು, 2 ಕೋವಿಡ್ -19 ಪರೀಕ್ಷೆಯಲ್ಲೂ ಧನಾತ್ಮಕ ವರದಿ ಪಡೆದಿದ್ದಾರೆ. ಹಾಗಾಗಿ ಇಂದು ಸಂಜೆ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ " ಎಂದು ಶಾಯ್ ಮೂಲಗಳಿಂದ ತಿಳಿದುಬಂದಿದೆ.
ಆಗಸ್ಟ್ 19ರಿಂದ ರಾಷ್ಟ್ರೀಯ ಹಾಕಿ ಶಿಬಿರ ಆರಂಭವಾಗಲಿದೆ. ಆದರೆ ಈ ಆರು ಆಟಗಾರರಿಗೆ ತಕ್ಷಣ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಡಿಮೆ ಎನ್ನಲಾಗಿದೆ. ಸಾಯ್ ವೈದ್ಯಕೀಯ ಮಂಡಳಿ ಮತ್ತೊಮ್ಮೆ ಪರೀಕ್ಷೆ ನಡೆಸಿ ನೆಗೆಟಿವ್ ಬಂದ ನಂತ ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ.