ETV Bharat / sports

ಪೀಲೆ ಹಿಂದಿಕ್ಕಿ ಸ್ಪರ್ಧಾತ್ಮಕ ಫುಟ್​ಬಾಲ್​ನಲ್ಲಿ ಗರಿಷ್ಠ ಗೋಲು ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ರೊನಾಲ್ಡೊ - ಜುವೆಂಟಸ್​

ಭಾನುವಾರದ ಸಿರೀ ಎ ಟೂರ್ನಿಯಲ್ಲಿ ಜುವೆಂಟಸ್​ 4-1 ಗೋಲುಗಳ ಅಂತದಲ್ಲಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಜುವೆಂಟಸ್​ ಪರ ರೊನಾಲ್ಡೊ 2 ಗೋಲು ಸಿಡಿಸಿದರೆ, ಫೆಡರಿಕೊ ಚೀಸಾ ಮತ್ತು ಪೌಲೊ ಡಿಬಾಲಾ ತಲಾ ಒಂದು ಗೋಲು ಸಿಡಿಸಿ ಗೆಲುವಿನ ರೂವಾರಿಯಾದರು. ಈ ಎರಡು ಗೋಲುಗಳು ರೊನಾಲ್ಡೊ ಅವರ ವೃತ್ತಿ ಜೀವನದ 757 ಮತ್ತು 758ನೇ ಗೋಲುಗಳಾದವು.

ಕ್ರಿಸ್ಚಿಯಾನೊ ರೊನಾಲ್ಡೊ ಪೀಲೆ
ಕ್ರಿಸ್ಚಿಯಾನೊ ರೊನಾಲ್ಡೊ ಪೀಲೆ
author img

By

Published : Jan 4, 2021, 7:46 PM IST

ಟುರಿನ್​: ಪೋರ್ಚುಗಲ್​ ಸ್ಟಾರ್​ ಫುಟ್​ಬಾಲ್ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೊ ಭಾನುವಾರ ಯುಡಿನೆಸ್​ ವಿರುದ್ಧ ಜುವೆಂಟಸ್​ಗೆ 2 ಗೋಲು ಸಿಡಿಸುವ ಮೂಲಕ ಬ್ರೆಜಿಲಿಯನ್ ಲೆಜೆಂಡ್​ ಪೀಲೆ ಅವರನ್ನು ಹಿಂದಿಕ್ಕಿ ಸ್ಪರ್ಧಾತ್ಮಕ ಫುಟ್ಬಾಲ್​ನಲ್ಲಿ ಗರಿಷ್ಠ ಗೋಲು ಸಿಡಿಸಿದರವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಭಾನುವಾರದ ಸಿರೀ ಎ ಟೂರ್ನಿಯಲ್ಲಿ ಜುವೆಂಟಸ್​ 4-1 ಗೋಲುಗಳ ಅಂತದಲ್ಲಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಜುವೆಂಟಸ್​ ಪರ ರೊನಾಲ್ಡೊ 2 ಗೋಲು ಸಿಡಿಸಿದರೆ, ಫೆಡರಿಕೊ ಚೀಸಾ ಮತ್ತು ಪೌಲೊ ಡಿಬಾಲಾ ತಲಾ ಒಂದು ಗೋಲು ಸಿಡಿಸಿ ಗೆಲುವಿನ ರೂವಾರಿಯಾದರು. ಈ ಎರಡು ಗೋಲುಗಳು ರೊನಾಲ್ಡೊ ಅವರ ವೃತ್ತಿ ಜೀವನದ 757 ಮತ್ತು 758ನೇ ಗೋಲುಗಳಾದವು.

ಕ್ರಿಸ್ಚಿಯಾನೋ ರೊನಾಲ್ಡೊ

ಈ ಮೂಲಕ ಫುಟ್​ಬಾಲ್​ನಲ್ಲಿ ಹೆಚ್ಚು ಗೋಲು ಸಿಡಿಸಿದವರ ಪಟ್ಟಿಯಲ್ಲಿ ಪೋರ್ಚುಗಲ್ ನಾಯಕ 2ನೇ ಸ್ಥಾನ ಪಡೆದರು. ಮೊದಲ ಸ್ಥಾನದದಲ್ಲಿ ಆಸ್ಟ್ರಿಯನ್ ಆಟಗಾರ ಜೋಸೆಫ್​ ಬಿಕಾನ್​ ಇದ್ದು, ಅವರು 1932-1955ರ ಅವಧಿಯಲ್ಲಿ 530 ಪಂದ್ಯಗಳಲ್ಲಿ 805 ಗೋಲು ಗಳಿಸಿದ್ದಾರೆ. ಪೀಲೆ 1956-77ರವರೆಗೆ 757 ಗೋಲು ಗಳಿಸಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

2002ರಲ್ಲಿ ಫುಟ್​ಬಾಲ್​ಗೆ ಪದಾರ್ಪಣೆ ಮಾಡಿದ ರೊನಾಲ್ಡೊ, 18 ವರ್ಷಗಳ ವೃತ್ತಿ ಜೀವನದಲ್ಲಿ ವಿವಿಧ ಕ್ಲಬ್​ಗಳ ಪರ 656 ಮತ್ತ ಪೋರ್ಚುಗಲ್ ಪರ 118 ಗೋಲು ಗಳಿಸಿದ್ದಾರೆ. ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್​ ಪರ 118, ರಿಯಲ್ ಮ್ಯಾಡ್ರಿಡ್​ ಪರ 450 ಗೋಲು ಸಿಡಿಸಿದ್ದಾರೆ.

ಇದನ್ನೂ ಓದಿ: ಬಾರ್ಸಿಲೋನಾ ಪರ 500ನೇ ಪಂದ್ಯ ಆಡಿದ ಲಿಯೋನೆಲ್ ಮೆಸ್ಸಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.