ETV Bharat / sports

ಜುವೆಂಟಸ್​​ಗೆ ಸತತ 9ನೇ ’’ಸೀರಿ ಎ’’ ಪ್ರಶಸ್ತಿ ತಂದುಕೊಟ್ಟ ರೊನಾಲ್ಡೊ - ಕ್ರಿಶ್ಚಿಯಾನೋ ರೊನಾಲ್ಡೊ

ಈ ಪಂದ್ಯ ಗೆಲ್ಲುತ್ತಿದ್ದಂತೆ ಇಂಟರ್​ ಮಿಲನ್​ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾಕ್ಕೇರಿದ ಜುವೆಂಟಸ್​ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಇಂಟರ್ ಮಿಲನ್ ತಂಡಕ್ಕಿಂತ ಜುವೆಂಟಸ್​ 7 ಅಂಕ ಹೆಚ್ಚು ಪಡೆದುಕೊಂಡು ಪ್ರೈಜ್​ಗೆ ಭಾಜನವಾಗಿದೆ.

ಜುವೆಂಟಸ್​​ಗೆ ಸತತ 9ನೇ ಸೀರಿ ಎ ಪ್ರಶಸ್ತಿ
ಜುವೆಂಟಸ್​​ಗೆ ಸತತ 9ನೇ ಸೀರಿ ಎ ಪ್ರಶಸ್ತಿ
author img

By

Published : Jul 27, 2020, 1:40 PM IST

ಮಿಲನ್​​​: ಪೋರ್ಚುಗೀಸ್​ ಸ್ಟಾರ್​ ಕ್ರಿಶ್ವಿಯಾನೊ ರೊನಾಲ್ಡೊ ಸಿಡಿಸಿದ ಗೋಲಿನ ನೆರವಿನಿಂದ ಭಾನುವಾರ ನಡೆದ ಪಂದ್ಯದಲ್ಲಿ ಸಂಪಡೋರಿಯಾ ವಿರುದ್ಧ 2-0ಯ ಜಯ ಗಳಿಸುವ ಮೂಲಕ ಜುವೆಂಟಸ್​ ತಂಡ ಸತತ 9ನೇ ಬಾರಿಗೆ ಸೀರಿ ಎ ಪ್ರಶಸ್ತಿ ಜಯಿಸಿದೆ.

ನಿನ್ನೆಯ ಪಂದ್ಯದಲ್ಲಿ ಕ್ರಿಸ್ಚಿಯಾನೊ ರೊನಾಲ್ಡೋ 45+7ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ 66ನೇ ನಿಮಿಷದಲ್ಲಿ ಫೆಡೆರಿಕೊ ಬರ್ನಾರ್ಡೆಸ್ಚಿ ಎರಡನೇ ಗೋಲ್ ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಇದೀಗ ಜುವೆಂಟಸ್​ ತಂಡ ಇನ್ನು 2 ಪಂದ್ಯಗಳು ಬಾಕಿ ಉಳಿದಿದ್ದರೂ ಟ್ರೋಫಿ ಗೆಲ್ಲಲು ಬೇಕಾದಷ್ಟು ಅಂಕ ಹೊಂದಿರುವುದರಿಂದ ಪ್ರಶಸ್ತಿ ವಶಪಡಿಸಿಕೊಂಡಿದೆ.

ಈ ಪಂದ್ಯ ಗೆಲ್ಲುತ್ತಿದ್ದಂತೆ ಇಂಟರ್​ ಮಿಲನ್​ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾಕ್ಕೇರಿದ ಜುವೆಂಟಸ್​ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಇಂಟರ್ ಮಿಲನ್ ತಂಡಕ್ಕಿಂತ ಜುವೆಂಟಸ್​ 7 ಅಂಕ ಹೆಚ್ಚು ಪಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.