ಅಸುನ್ಸಿಯಾನ್(ಪರಾಗ್ವೆ) : ನಕಲಿ ಪಾಸ್ಪೋರ್ಟ್ ಬಳಸಿ ಅಕ್ರಮವಾಗಿ ದೇಶ ಪ್ರವೇಶ ಮಾಡಿ ಸಿಕ್ಕಿಬಿದ್ದಿರೋದ್ರಿಂದ ಬ್ರೆಜಿಲ್ ತಂಡದ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೋ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.
ಬಾರ್ಸಿಲೋನಾ, ಎಸಿ ಮಿಲನ್ ಹಾಗೂ ಪ್ಯಾರೀಸ್ ಸೈಂಟ್ ಜರ್ಮನ್ ತಂಡದಲ್ಲಿ ಆಡಿರುವ ಸ್ಟಾರ್ ಪುಟ್ಬಾಲಿಗ ರೊನಾಲ್ಡಿನೊ ಹಾಗೂ ಅವರ ಸಹೋದರ ಕಳೆದ ನಕಲಿ ಪಾಸ್ಪೋರ್ಟ್ ಬಳಸಿದ ಆರೋಪದ ಮೇಲೆ ಬಂಧಿತರಾಗಿ 32 ದಿನಗಳ ಜೈಲುವಾಸ ಅನುಭವಿಸಿದ್ದರು. ನಂತರ 1.6 ಮಿಲಿಯನ್ ಡಾಲರ್ ಮೊತ್ತದ ಬಾಂಡ್‌ನ ಜಾಮೀನಾಗಿ ನೀಡಲು ಒಪ್ಪಿದ ಮೇಲೆ ಜೈಲುವಾಸದಿಂದ ಗೃಹಬಂಧನಕ್ಕೆ ಅವಕಾಶ ಮಾಡಿಕೊಂಡಲಾಗಿತ್ತು.
ಸಾಕ್ಷ್ಯಾಧಾರಗಳ ಕೊರತೆಯಿಂದ ರೊನಾಲ್ಡಿನೊ ಮತ್ತು ಅವರ ಸಹೋದರ ಆರೋಪಮುಕ್ತರಾಗಲಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಫುಟ್ಬಾಲ್ ಇತಿಹಾಸದ ಸಾರ್ವಕಾಲಿಕ ಆಟಗಾರರಲ್ಲಿ ಒಬ್ಬರಾದ ರೊನಾಲ್ಡಿನೊ 2002ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.