ಪ್ಯಾರಿಸ್: ತಮ್ಮ ವೃತ್ತಿ ಜೀವನವನ್ನೆಲ್ಲ ಬಾರ್ಸಿಲೋನಾ ಕ್ಲಬ್ನಲ್ಲಿ ಕಳೆದಿದ್ದ ಅರ್ಜೆಂಟೀನಾ ಫುಟ್ಬಾಲರ್ ಲಿಯೋನಲ್ ಮೆಸ್ಸಿ ಒಪ್ಪಂದ ಅಂತ್ಯಗೊಂಡಿದ್ದು, ಇದೀಗ ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ಗೆ ಸೇರಲಿದ್ದಾರೆ ಎಂದು ಈ ಸಂಧಾನದ ಬಗ್ಗೆ ತೀರಾ ಹತ್ತಿರದಿಂದ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವರದಿಯ ಪ್ರಕಾರ 34 ವರ್ಷದ ಅರ್ಜೆಂಟೀನಾ ಸ್ಟಾರ್ ಪೆಎಸ್ಜಿ ಜೊತೆಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.
ಈ ಒಪ್ಪಂದದ ಪ್ರಕಾರ ಲಿಯೋನಲ್ ಮೆಸ್ಸಿ ವಾರ್ಷಿಕವಾಗಿ ಸುಮಾರು 35 ಮಿಲಿಯನ್ಸ್ ಯೂರೋ(ಸುಮಾರು 305) ಕೋಟಿ ರೂಪಾಯಿಗಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬಾರ್ಸಿಲೋನಾ ಕ್ಲಬ್ನೊಂದಿಗೆ ಒಪ್ಪಂದ ಅಂತ್ಯಗೊಂಡ ಹಿನ್ನೆಲೆ ಮೆಸ್ಸಿ ಸ್ವತಂತ್ರ ಫುಟ್ಬಾಲರ್ ಆಗಿದ್ದಾರೆ. ಮೆಸ್ಸಿ ಬಾರ್ಸಿಲೋನಾದಲ್ಲಿ ಉಳಿದುಕೊಳ್ಳುವ ಸಲುವಾಗಿ ತಮ್ಮ ಅರ್ಧದಷ್ಟು ವೇತನ ಕಡಿತಕ್ಕೂ ಒಪ್ಪಿಗೆ ಸೂಚಿಸಿದ್ದರು. ಆದರೆ, ಲಾಲೀಗಾ ಹಣಕಾಸು ನಿಯಮಾವಳಿಗಳು ಅಡ್ಡವಾಗಿದ್ದರಿಂದ ಅನಿವಾರ್ಯವಾಗಿ ಕ್ಯಾಟಲನ್ ಕ್ಲಬ್ ಮೆಸ್ಸಿ ಅವರನ್ನು ಬಿಟ್ಟುಕೊಡಬೇಕಾಯಿತು.
ವಿಶ್ವದ ಪ್ರಸಿದ್ಧ ಸಕ್ರಿಯ ಫುಟ್ಬಾಲರ್ ಆಗಿರುವ ಮೆಸ್ಸಿಯನ್ನು ಸೇರಿಸಿಕೊಳ್ಳು ಸಾಕಷ್ಟು ಕ್ಲಬ್ಗಳು ಮುಂದೆ ಬಂದಿದ್ದವು. ಅವುಗಳಲ್ಲಿ ಪಿಎಸ್ಜಿ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗಳು ಮುಂಚೂಣಿಯಲ್ಲಿದ್ದವು.
ಇದನ್ನೂ ಓದಿ:ಬಾರ್ಸಿಲೋನಾ ಕ್ಲಬ್ ತೊರೆಯಲಿದ್ದಾರೆ ಫುಟ್ಬಾಲ್ ಸ್ಟಾರ್ ಲಿಯೋನಲ್ ಮೆಸ್ಸಿ