ETV Bharat / sports

ಕತಾರ್​ನಲ್ಲಿ 2022ರ ಫಿಫಾ ವಿಶ್ವಕಪ್​ನ ಮೂರನೇ ಕ್ರೀಡಾಂಗಣ ಉದ್ಘಾಟನೆ - FIFA football world cup

ಕತಾರ್‌ನ ಮುಖ್ಯ ಸಂಘಟಕರು 2022ರ ಫಿಫಾ ವಿಶ್ವಕಪ್​ನ ಮೂರನೇ ಕ್ರೀಡಾಂಗಣವನ್ನು ಉದ್ಘಾಟಿಸಿದ್ದಾರೆ. ನವೆಂಬರ್ 2022ರ ಬಳಿಕ ಕತಾರ್ ವಿಶ್ವಕಪ್ ಪ್ರಾರಂಭವಾಗುವ ಸಾಧ್ಯತೆ ಇದೆ.

stadium
stadium
author img

By

Published : Jun 16, 2020, 1:20 PM IST

ದೋಹಾ(ಕತಾರ್): ಕತಾರ್‌ನ ಮುಖ್ಯ ಸಂಘಟಕರು 2022ರ ಫಿಫಾ ವಿಶ್ವಕಪ್​ನ ಮೂರನೇ ಕ್ರೀಡಾಂಗಣವನ್ನು ಉದ್ಘಾಟಿಸಿದ್ದಾರೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ ಮತ್ತು ಬುಂಡೆಸ್ಲಿಗಾ ಅವರೊಂದಿಗೆ ಸಮಾಲೋಚಿಸಿ ಅವರು ಕೊರೊನಾ ವೈರಸ್‌ನೊಂದಿಗೆ ಹೇಗೆ ವ್ಯವಹರಿಸುತ್ತಿದ್ದಾರೆಂದು ತಿಳಿಯುತ್ತಿರುವುದಾಗಿ ಹೇಳಿದ್ದಾರೆ.

ಕೋವಿಡ್-19ಗೆ ಯಾವುದೇ ಲಸಿಕೆ ಇಲ್ಲದಿದ್ದರೂ, ಕ್ರೀಡಾ ಕಾರ್ಯಕ್ರಮಗಳಲ್ಲಿ ಆರೋಗ್ಯ ಮುನ್ನೆಚ್ಚರಿಕೆಗಳನ್ನು ಹೇಗೆ ಗಣನೆಗೆ ತೆಗೆದುಕೊಳ್ಳುವುದು ಎಂಬುದನ್ನು ತಿಳಿಯಲಾಗುತ್ತಿದೆ ಎಂದು ಕತಾರ್ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಲ್-ತವಾಡಿ ತಿಳಿಸಿದರು.

"ನವೆಂಬರ್ 2022ರವರೆಗೆ ಕತಾರ್ ವಿಶ್ವಕಪ್ ಪ್ರಾರಂಭವಾಗುವುದಿಲ್ಲ. ಆದರೆ ಕೊರೊನಾ ವಿರುದ್ಧ ಜಗತ್ತು ಜಯ ಸಾಧಿಸುತ್ತಿರುವಾಗ ಕ್ರೀಡಾಂಗಣ ಉದ್ಘಾಟನೆಗೊಂಡಿರುವುದು ಉತ್ತಮ ಭವಿಷ್ಯವನ್ನು ತೋರುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.