ETV Bharat / sports

ಲಾ ಲೀಗಾ ಲೀಗ್:  ಲಿಯೋನೆಲ್​ ಮೆಸ್ಸಿಗೆ ''ಬೆಸ್ಟ್​ ಎವರ್ ಅಸಿಸ್ಟ್​'' ದಾಖಲೆ

author img

By

Published : Jul 6, 2020, 12:16 PM IST

ಲಾ ಲೀಗಾ ಫುಟ್ಬಾಲ್​​​​​ ಲೀಗ್​ನಲ್ಲಿ ಸ್ಟಾರ್​ ಆಟಗಾರ ಲಿಯೋನೆಲ್ ಮೆಸ್ಸಿ ಗೋಲ್​ ಹೊಡೆಯಲು ಅತ್ಯುನ್ನತ ಪಾಸ್​ಗಳನ್ನು ಕೊಡುವ ಮೂಲಕ ಬೆಸ್ಟ್​ ಎವರ್ ಅಸಿಸ್ಟ್​ ದಾಖಲೆಗೆ ಪಾತ್ರರಾಗಿದ್ದಾರೆ.

Lionel Messi
ಲಿಯೋನೆಲ್​ ಮೆಸ್ಸಿ

ಅರ್ಜೆಂಟೀನಾ: ಬಾರ್ಸಿಲೋನಾದ ಸ್ಟಾರ್ ಫುಟ್ಬಾಲ್​​​​​ ಆಟಗಾರ ಲಿಯೋನೆಲ್​ ಮೆಸ್ಸಿ ಲಾ ಲೀಗಾ ಫುಟ್ಬಾಲ್​​​ ಲೀಗ್​ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಲಾ ಲೀಗಾ ಫುಟ್ಬಾಲ್​ ಲೀಗ್​ನಲ್ಲಿ ಬಾರ್ಸಿಲೋನಾದ ವಿಲ್ಲಾರೆಲ್​ ಫುಟ್ಬಾಲ್​​​ ಕ್ಲಬ್​, ಬಾರ್ಕಾ ಫುಟ್ಬಾಲ್​​​​ ಕ್ಲಬ್​ ವಿರುದ್ಧ ಆಡುವ ವೇಳೆ ಅತಿ ಹೆಚ್ಚು ಗೋಲ್​ಗಳಿಗೆ ಸಹಕರಿಸಿದ (ಬೆಸ್ಟ್​ ಎವರ್​ ಅಸಿಸ್ಟ್​​​) ದಾಖಲೆಗೆ ಪಾತ್ರರಾಗಿದ್ದಾರೆ

ಈ ಪಂದ್ಯದಲ್ಲಿ ಬಾರ್ಸಿಲೋನಾದ ಪರವಾಗಿ ಮೆಸ್ಸಿ ಆಂಟೋಯಿನ್​ ಗ್ರಿಜ್​ಮನ್​ನ ಮೂರನೇ ಗೋಲ್​ಗೆ ಸಹಕರಿಸುವ ಮೂಲಕ ಈ ದಾಖಲೆ ಸೃಷ್ಟಿ ಮಾಡಿದರು. ಈ ಮೂಲಕ ಗೋಲ್​ ಬಾರಿಸಲು ಲಾ ಲೀಗಾ ಫುಟ್ಬಾಲ್​​​​ ಲೀಗ್​ನಲ್ಲಿ 19ನೇ ಬಾರಿಗೆ ಮೆಸ್ಸಿ ಸಹಕಾರ ನೀಡಿದ್ದರು.

33 ವರ್ಷದ ಮೆಸ್ಸಿ ಇದಕ್ಕೂ ಮೊದಲು ಆಟಗಾರ ಲೂಯಿಸ್ ಸೌರೆಜ್​​ಗೆ ವಿಲ್ಲಾರೆಲ್​ ವಿರುದ್ಧ ಆಡುವಾಗ ಗೋಲ್​ ಹೊಡೆಯಲು ಉತ್ತಮ ಪಾಸ್​ ನೀಡಿದ್ದರು. ಈ ಮೂಲಕ ಲಾ ಲೀಗಾದಲ್ಲಿ 18 ಗೋಲುಗಳಿಗೆ ಸಹಕರಿಸುವ ಮೂಲಕ ದಾಖಲೆ ಬರೆದಿದ್ದರು. ಆಂಟೋಯಿನ್ ಗ್ರಿಜ್​ಮನ್​ಗೆ 19ನೇ ಪಾಸ್​ ಮೂಲಕ ಅವರು ಗೋಲ್​ ಹೊಡೆಯಲು ಸಹಕಾರ ನೀಡಿದ್ದರು.

ಈ ಪಂದ್ಯದಲ್ಲಿ ಪೌ ಟೊರೆಸ್​, ಲೂಯಿಸ್ ಸೌರೆಜ್​, ಆಂಟೋಯಿನ್​ ಗ್ರಿಜ್​ಮನ್ ಹಾಗೂ ಅನ್ಸು ಫತಿ ತಲಾ ಒಂದೊಂದು ಗೋಲ್​ ಬಾರ್ಸಿಲೋನಾ ಪರವಾಗಿ ದಾಖಲಿಸಿದ್ದರು. ವಿಲ್ಲಾರೆಲ್​ ಪರವಾಗಿ ಗೆರಾರ್ಡ್​ ಮೊರೆನೋ ಒಂದು ಗೋಲ್​ ಮಾತ್ರ ದಾಖಲಿಸಿದ್ದರು. ಇದರಿಂದಾಗಿ ಬಾರ್ಸಿಲೋನಾ ಈ ಪಂದ್ಯದಲ್ಲಿ ಜಯಭೇರಿ ಗಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.