ಪ್ಯಾರಿಸ್ : ಬಾರ್ಸಿಲೋನಾದಲ್ಲಿ 2 ದಶಕಗಳ ಕಾಲ ಕಳೆದಿದ್ದ ಅರ್ಜೆಂಟೀನಾ ಫುಟ್ಬಾಲರ್ ಲಿಯೋನಲ್ ಮೆಸ್ಸಿ ಮಂಗಳವಾರ ಪಿಎಸ್ಜೆ ಪರ ಗೋಲು ಗಳಿಸುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
UEFA ಚಾಂಪಿಯನ್ಸ್ ಲೀಗ್ಸ್ನ ಗುಂಪು ಹಂತದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಗೋಲು ಗಳಿಸಿ ಪ್ಯಾರಿಸ್ ಸೇಂಟ್ ಜರ್ಮನ್ಗೆ ಗೆಲುವು ತಂದುಕೊಟ್ಟರು. ಈ ಮೂಲಕ 4 ಅಂಕಗಳಿಸಿ ಅಂಕಪಟ್ಟಿಯಲ್ಲಿ ತಮ್ಮ ಕ್ಲಬ್ ಅಗ್ರಸ್ಥಾನಕ್ಕೇರುವಂತೆ ಮಾಡಿದರು.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಪಂದ್ಯಾರಂಭದ ಕೇವಲ 8ನೇ ನಿಮಿಷದಲ್ಲಿ ಪಿಎಸ್ಜಿ ಖಾತೆ ತೆರೆಯಿತು. ಇದ್ರಿಸಾ ಗೇಯ್ ಗೋಲುಗಳಿಸಿ ಮುನ್ನಡೆ ತಂದುಕೊಟ್ಟರು. ಮೆಸ್ಸಿ 74ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣ ಮಾಡಿದರು. ಪಿಎಸ್ಜಿ ಸೇರುವ ಮುನ್ನ ಮೆಸ್ಸಿ ಬಾರ್ಸಿಲೋನಾ ಪರ 778 ಪಂದ್ಯಗಳನ್ನಾಡಿದ್ದು, 672 ಗೋಲುಗಳನ್ನು ಸಿಡಿಸಿದ್ದರು.