ಬಾರ್ಸಿಲೋನಾ: ಅರ್ಜೆಂಟೈನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ನಡೆಸಿದ ವೈದ್ಯಕೀಯ ಪರೀಕ್ಷೆಗೆ ಗೈರಾಗದ ಬೆನ್ನಲ್ಲೇ ಲಾ ಲಿಗಾ ಪ್ರಕಟಣೆ ಹೊರಡಿಸಿದ್ದು, ಮೆಸ್ಸಿಯ ಕ್ಲಬ್ನೊಂದಿಗಿನ ಒಪ್ಪಂದದ ಇನ್ನು ಮಾನ್ಯವಾಗಿದೆ ಮತ್ತು ಅವರು ವರ್ಗಾವಣೆ ಶುಲ್ಕವನ್ನು ಪಾವತಿಸಿದ ನಂತರ ಸ್ಪ್ಯಾನಿಶ್ ದೈತ್ಯ ತಂಡವನ್ನು ಬಿಟ್ಟು ಹೊರಡಬಹುದು ಎಂದು ಭಾನುವಾರ ತಿಳಿಸಿದೆ.
ಇದರ ಜೊತೆಗೆ ಯಾವುದಾದರೂ ಕ್ಲಬ್ಗಳು ಮೆಸ್ಸಿಯ ಸೇವೆಯನ್ನು ಬಯಸಿದರೆ ಆಟಗಾರನ ಬಿಡುಗಡೆಯ ಷರತ್ತು ಮೊತ್ತವಾಗಿ ಸುಮಾರು 700 ಮಿಲಿಯನ್ ಯೂರೋಗಳನ್ನು ಪಾವತಿಸಬೇಕು ಎಂದು ಸಂಘಟಕರು ಹೇಳಿದ್ದಾರೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಇದು 6 ಸಾವಿರದ ನೂರು ಕೋಟಿ (6133,78,74,311)ರೂಪಾಯಿಯಾಗಲಿದೆ.
ಬಾರ್ಸಿಲೋನಾದಿಂದ ಹೊರಬರಲು ಮೆಸ್ಸಿ ಪ್ರಯತ್ನಿಸುತ್ತಿದ್ದಂತೆ ಲಾ ಲಿಗಾ ಈ ಸ್ಪಷ್ಟೀಕರಣ ನೀಡಿದೆ.
ಮೆಸ್ಸಿ ಬಾರ್ಸಿಲೋನಾದ ಜೊತೆಗೆ 2017ರಲ್ಲಿ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಅದರ ಅವಧಿ 2021ಕ್ಕೆ ಕೊನೆಗೊಳ್ಳುತ್ತದೆ. ಆದರೆ ಜೂನ್ 10ರೊಳಗೆ ವಿನಂತಿಸಿದ್ದರೆ. ಕ್ಲಬ್‌ನ್ನು ಉಚಿತವಾಗಿ ಬಿಡಲು ಮೆಸ್ಸಿಗೆ ಅವಕಾಶವಿತ್ತು. ಇದೀಗ ಕಾಲ ಮಂಚಿರುವುದರಿಂದ ಅವರನ್ನು ಬೇರೆ ತಂಡವೂ ಬಯಸಿದರೆ ಸುಮಾರು 6100 ಕೋಟಿ ರೂ.ಗಳನ್ನು ನೀಡಬೇಕಿದೆ.