ಮ್ಯಾಡ್ರಿಡ್: ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಶನಿವಾರ ನಡೆದ ಲಾ ಲಿಗಾ ಪಂದ್ಯದ ಮುನ್ನ ಬಾರ್ಸಿಲೋನಾ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ತಮ್ಮ ತಂಡದ ಆಟಗಾರರಿಗೆ ತಮ್ಮ ಮನೆಯಲ್ಲಿ ಊಟೋಪಚಾರ ಆಯೋಜಿಸಿದ್ದು, ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ.
ಸ್ಪೇನ್‌ನ ಕ್ಯಾಟಲಾನ್ ಪ್ರದೇಶಕ್ಕೆ ಸಂಬಂಧಿಸಿದ ಕೋವಿಡ್ ಪ್ರೋಟೋಕಾಲ್ ಪ್ರಕಾರ 6 ಜನರಿಗಿಂತ ಹೆಚ್ಚು ಜನರು ಸೇರಿ ಯಾವುದೇ ಔತಣಕೂಟ ಅಥವಾ ಪಾರ್ಟಿಗಳನ್ನು ಆಯೋಜಿಸುವಂತಿಲ್ಲ. ಆದರೆ ಮೆಸ್ಸಿ ತಮ್ಮ ತಂಡದ ಆಟಗಾರರು ಹಾಗೂ ಅಧಿಕಾರಿಗಳಿಗೆ ಔತಣಕೂಟ ಏರ್ಪಡಿಸಿದ್ದು, ಇದರಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ಸೇರಿದ್ದರು ಎನ್ನಲಾಗಿದೆ. ಪರಿಣಾಮ ಮೆಸ್ಸಿ ಹಾಗೂ ತಂಡದ ಸದಸ್ಯರಿಗೆ ಭಾರಿ ದಂಡ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ : ಫುಟ್ಬಾಲ್ ದಂತಕತೆ ಮರಡೋನಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ : ವರದಿ