ETV Bharat / sports

ನಾರ್ತ್​ಈಸ್ಟ್​ ವಿರುದ್ಧ ಗೆಲುವು ಕೈಚೆಲ್ಲಿ ಡ್ರಾಗೆ ತೃಪ್ತಿಪಟ್ಟ ಬೆಂಗಳೂರು ಎಫ್​ಸಿ

5 ಪಂದ್ಯಗಳಲ್ಲಿ 2 ಜಯ 3 ಡ್ರಾ ಸಾಧಿಸಿರುವ ನಾರ್ತ್​ಈಸ್ಟ್​ 9 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಎಫ್​ಸಿ 4 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 3 ಡ್ರಾ ಸಾಧಿಸಿ 6 ಅಂಕಗಳೊಂದಿಗೆ 4ನೇ ಸ್ಥಾನದಲ್ಲೇ ಮುಂದುವರಿದಿದೆ.

author img

By

Published : Dec 8, 2020, 10:59 PM IST

ನಾರ್ತ್​ಈಸ್ಟ್ vs ಬೆಂಗಳೂರು ಎಫ್​ಸಿ
ನಾರ್ತ್​ಈಸ್ಟ್ vs ಬೆಂಗಳೂರು ಎಫ್​ಸಿ

ಗೋವಾ: ಬೆಂಗಳೂರು ಎಫ್​ಸಿ ತಂಡ ಮಂಗಳವಾರ ಗೋವಾದ ಫತೋರ್ಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಅಂಕಗಳನ್ನು ಹಂಚಿಕೊಂಡಿದೆ.

ಆಟ ಆರಂಭವಾದ 4ನೇ ನಿಮಿಷದಲ್ಲೆ ನಾರ್ತ್​ಈಸ್ಟ್​ ಅಚ್ಚರಿಯ ಗೋಲುಗಳಿಸಿ ಮುನ್ನಡೆ ಪಡೆದುಕೊಂಡಿತು. ಲೂಯಿಸ್​ ಮಚಾಡೋ ಗೋಲು ಸಿಡಿಸಿ ಮುನ್ನಡೆ ದೊರೆಕಿಸಿಕೊಟ್ಟಿದ್ದರು. ಆದರೆ ಬೆಂಗಳೂರು ತಂಡದ ಜುವಾನನ್​ 13ನೇ ನಿಮಿಷದಲ್ಲೇ ಗೋಲು ಸಿಡಿಸುವ ಮೂಲಕ 1-1 ಸಮಬಲ ಸಾಧಿಸುವಂತೆ ನೆರವಾದರು.

ಬೆಂಗಳೂರು ತಂಡದಲ್ಲಿ ಸನ್​ಸ್ಟಿಟ್ಯೂಟ್ ಆಗಿ ಮೈದಾನಕ್ಕಿಳಿದಿದ್ದ ಉದಾಂತ ಸಿಂಗ್​ 70ನೇ ನಿಮಿಷದಲ್ಲಿ ಗೋಲು ಸಿಡಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಮಚಾಡೋ 2ನೇ ಗೋಲು ಸಿಡಿಸಿ 2-2 ರಲ್ಲಿ ಸಮಬಲಕ್ಕೆ ತಂದರು. ಉಳಿದ ಸಮಯದಲ್ಲಿ ಎರಡು ತಂಡಗಳು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

5 ಪಂದ್ಯಗಳಲ್ಲಿ 2 ಜಯ 3 ಡ್ರಾ ಸಾಧಿಸಿರುವ ನಾರ್ತ್​ಈಸ್ಟ್​ 9 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಎಫ್​ಸಿ 4 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 3 ಡ್ರಾ ಸಾಧಿಸಿ 6 ಅಂಕಗಳೊಂದಿಗೆ 4ನೇ ಸ್ಥಾನದಲ್ಲೇ ಮುಂದುವರಿದಿದೆ.

ಗೋವಾ: ಬೆಂಗಳೂರು ಎಫ್​ಸಿ ತಂಡ ಮಂಗಳವಾರ ಗೋವಾದ ಫತೋರ್ಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಅಂಕಗಳನ್ನು ಹಂಚಿಕೊಂಡಿದೆ.

ಆಟ ಆರಂಭವಾದ 4ನೇ ನಿಮಿಷದಲ್ಲೆ ನಾರ್ತ್​ಈಸ್ಟ್​ ಅಚ್ಚರಿಯ ಗೋಲುಗಳಿಸಿ ಮುನ್ನಡೆ ಪಡೆದುಕೊಂಡಿತು. ಲೂಯಿಸ್​ ಮಚಾಡೋ ಗೋಲು ಸಿಡಿಸಿ ಮುನ್ನಡೆ ದೊರೆಕಿಸಿಕೊಟ್ಟಿದ್ದರು. ಆದರೆ ಬೆಂಗಳೂರು ತಂಡದ ಜುವಾನನ್​ 13ನೇ ನಿಮಿಷದಲ್ಲೇ ಗೋಲು ಸಿಡಿಸುವ ಮೂಲಕ 1-1 ಸಮಬಲ ಸಾಧಿಸುವಂತೆ ನೆರವಾದರು.

ಬೆಂಗಳೂರು ತಂಡದಲ್ಲಿ ಸನ್​ಸ್ಟಿಟ್ಯೂಟ್ ಆಗಿ ಮೈದಾನಕ್ಕಿಳಿದಿದ್ದ ಉದಾಂತ ಸಿಂಗ್​ 70ನೇ ನಿಮಿಷದಲ್ಲಿ ಗೋಲು ಸಿಡಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಮಚಾಡೋ 2ನೇ ಗೋಲು ಸಿಡಿಸಿ 2-2 ರಲ್ಲಿ ಸಮಬಲಕ್ಕೆ ತಂದರು. ಉಳಿದ ಸಮಯದಲ್ಲಿ ಎರಡು ತಂಡಗಳು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

5 ಪಂದ್ಯಗಳಲ್ಲಿ 2 ಜಯ 3 ಡ್ರಾ ಸಾಧಿಸಿರುವ ನಾರ್ತ್​ಈಸ್ಟ್​ 9 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಎಫ್​ಸಿ 4 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 3 ಡ್ರಾ ಸಾಧಿಸಿ 6 ಅಂಕಗಳೊಂದಿಗೆ 4ನೇ ಸ್ಥಾನದಲ್ಲೇ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.